ಬ್ರೇಕಿಂಗ್ ನ್ಯೂಸ್
08-07-22 09:07 pm Mangalore Correspondent ಕರಾವಳಿ
ಮಂಗಳೂರು, ಜುಲೈ 8: ಜನಪ್ರತಿನಿಧಿಗಳಾದವರು ಅವಿವೇಕಿ ರೀತಿ ಹೇಳಿಕೆಗಳನ್ನು ಕೊಡಬಾರದು. ಕಡಲ್ಕೊರೆತ ಸಮಸ್ಯೆ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬಾರದವರು ಸಮಾಜ ಒಡೆಯುವ ಹೇಳಿಕೆ ನೀಡುತ್ತಿದ್ದಾರೆ. ಇವರ ವೈಫಲ್ಯಗಳನ್ನು ಮುಚ್ಚಿ ಹಾಕಲು ಈ ರೀತಿ ಹೇಳುತ್ತಿದ್ದಾರೆ. ಯಾಕೆ, ಇವರು ಅಧಿವೇಶನಕ್ಕೆ ಬಂದು ಆಸ್ತಿ ಮುಟ್ಟುಗೋಲು ಹಾಕುವುದಕ್ಕೆ ಹೇಳಿಲ್ಲ. ನಾವು ಉತ್ತರ ಕೊಡುತ್ತಿದ್ದೆವು. ಈಗ ಪೇಪರಿನಲ್ಲಿ ಬರುವುದಕ್ಕೆ ಹೇಳಿಕೆ ನೀಡಿ, ಜನರನ್ನು ಗೊಂದಲಕ್ಕೆ ಸಿಲುಕಿಸುವುದಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್ ವಿಪಕ್ಷ ನಾಯಕ ಯುಟಿ ಖಾದರ್, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹೇಳಿಕೆಯ ಬಗ್ಗೆ ಕಿಡಿಕಾರಿದ್ದಾರೆ.
ಅಕ್ರಮ ಗೋಹತ್ಯೆ ನಡೆಸಿದರೆ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವಂತೆ ಶಾಸಕ ಭರತ್ ಶೆಟ್ಟಿ ಹೇಳಿಕೆ ನೀಡಿದ್ದರು. ಶಾಸಕರ ಹೇಳಿಕೆಯ ಕುರಿತ ಪತ್ರಕರ್ತರ ಪ್ರಶ್ನೆಗೆ ಹರಿಹಾಯ್ದ ಯುಟಿ ಖಾದರ್, ಇವರಿಗೆ ಅಂಥ ಕಾಳಜಿ ಇದ್ದರೆ, ಅಲ್ಲಿ ಕಾನೂನು ಸಚಿವರಿದ್ದಾರೆ. ಅವರಿಗೆ ಹೋಗಿ ಹೇಳಲಿ. ಸೆಷನಲ್ಲಿ ಬಂದು ಚರ್ಚೆ ಮಾಡಿಲ್ಲ ಯಾಕೆ. ಜನಪ್ರತಿನಿಧಿ ಆಗಿದ್ದ ಮೇಲೆ ಎಲ್ಲರನ್ನೂ ಒಳಗೊಂಡು ವ್ಯವಹರಿಸಬೇಕು. ಯಾವುದೇ ಸಮಸ್ಯೆ ಇದ್ದರೂ, ಸೌಹಾರ್ದವಾಗಿ ಬಗೆಹರಿಸಲು ನೋಡಬೇಕು ವಿನಾ ಮತ್ತೊಂದು ಸಮಸ್ಯೆ ಹುಟ್ಟುಹಾಕುವುದಲ್ಲ ಎಂದು ಹೇಳಿದರು.
ಗೋಹತ್ಯೆ ಕಾನೂನನ್ನು ಬಿಜೆಪಿ ಸರಕಾರ ತಂದಿದೆ. ಅದನ್ನು ಎಲ್ಲರೂ ಪಾಲನೆ ಮಾಡಬೇಕಾಗಿದೆ. ಆದರೆ ಬಕ್ರೀದ್ ಸಂದರ್ಭದಲ್ಲಿ ಕುರ್ಬಾನು, ಬಲಿ ಕೊಡುವುದು ಹಿಂದಿನಿಂದ ನಡೆದುಕೊಂಡು ಬಂದಿದೆ. ಸೌಹಾರ್ದವಾಗಿ ಹಬ್ಬವನ್ನು ಆಚರಿಸಲು ಏನಾಗಬೇಕು. ಅದಕ್ಕೆ ರಾಜ್ಯ ಸರಕಾರ ನಿರ್ದಿಷ್ಟ ಮಾರ್ಗಸೂಚಿ ಪ್ರಕಟಿಸಬೇಕು. ಗೋಹತ್ಯೆ ಕಾನೂನಿನಲ್ಲೇ 14 ವರ್ಷ ಮೀರಿದ ಕೋಣಗಳನ್ನು ವಧಿಸಬಹುದು ಎಂದಿದೆ. ಕಾನೂನು ಪ್ರಕಾರ, ಪ್ರಾಯ ಮೀರಿದ ಕೋಣಗಳನ್ನು ಆಹಾರಕ್ಕಾಗಿ ವಧಿಸಲು ಅವಕಾಶ ನೀಡಬೇಕು. ಬಕ್ರೀದ್ ಹಬ್ಬಕ್ಕೆ ಬಡವರಿಗೆ ಆಹಾರ ಹಂಚುವ ಸಂಪ್ರದಾಯಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಗೋಹತ್ಯೆ ಕಾನೂನಿನಲ್ಲಿಯೇ ಕೆಲವೊಂದು ಸ್ಪಷ್ಟತೆಗಳಿಲ್ಲ. ಪ್ರಾಯ ಮೀರಿದ ಜಾನುವಾರುಗಳನ್ನು ಕಡಿಯಬಹುದು ಎಂದು ಕಾನೂನು ಹೇಳುತ್ತದೆ. ಆದರೆ ಇಲ್ಲಿ ಕೆಲವೊಬ್ಬರು ಕಡಿಯಲು ಅವಕಾಶ ಇಲ್ಲ ಎನ್ನುತ್ತಾರೆ. ಇದರಿಂದ ಜನರಲ್ಲಿ ಗೊಂದಲ ಏಳುತ್ತದೆ. ಪೊಲೀಸರಲ್ಲಿಯೂ ಗೊಂದಲ ಇದೆ. ಕೆಲವೊಮ್ಮೆ ಸಾಕುವ ದನಗಳನ್ನು ಒತ್ತಡಕ್ಕೆ ಮಣಿದು ವಶಕ್ಕೆ ಪಡೆಯುವ ಕೆಲಸಗಳಾಗುತ್ತವೆ. ಇದಕ್ಕಾಗಿ ಕಾನೂನಿನಲ್ಲಿ ಸ್ಪಷ್ಟತೆ ತರಬೇಕಾದ್ದು ಸರಕಾರದ ಕರ್ತವ್ಯ ಎಂದು ಯುಟಿ ಖಾದರ್ ಹೇಳಿದರು.
"The Congress leaders had said that there is a scam in PSI recruitment. We have claimed that the government is protecting senior officials. After the high court slammed the government, a senior IPS officer was arrested. This is a complete failure of the BJP-led state government in probing the case. The case should be investigated in the right manner, " said MLA U T Khader.He was speaking to media persons at the circuit house here on Friday, July 8.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm