ಬ್ರೇಕಿಂಗ್ ನ್ಯೂಸ್
07-07-22 01:01 pm Mangalore Correspondent ಕರಾವಳಿ
ಉಳ್ಳಾಲ, ಜು.7: ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿ ಪ್ರದೇಶದಲ್ಲಿ ಕಡಲ್ಕೊರೆತ ಮುಂದುವರೆದಿದ್ದು ಗೆಸ್ಟ್ ಹೌಸ್ ಮಾಲಕರು ಮಾತ್ರ ಸಮದ್ರ ತೀರಕ್ಕೆ ಕಲ್ಲು ಹಾಕಿ ತಮ್ಮ ಕಟ್ಟಡ ರಕ್ಷಿಸಲು ಮುಂದಾಗಿದ್ದು ಸ್ಥಳೀಯರು ಇದನ್ನ ವಿರೋಧಿಸಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.
ಬಟ್ಟಪ್ಪಾಡಿಯಲ್ಲಿ ಕಡಲ್ಕೊರೆತದ ತೀವ್ರತೆಗೆ ಬೀಚ್ ರಸ್ತೆಯೇ ಕೊಚ್ಚಿ ಹೋಗಿದ್ದು ಸಮಾರು ಐವತ್ತರಷ್ಟು ಮನೆಗಳು ಅಪಾಯದಲ್ಲಿವೆ. ಇದೇ ಜಾಗದ ತೀರದಲ್ಲಿರುವ ವಿಟಮಿನ್ ಸೀ ಹೆಸರಿನ ಗೆಸ್ಟ್ ಹೌಸ್ ಕೂಡ ಈಗ ಸಮುದ್ರಪಾಲಾಗುವ ಭೀತಿಯಲ್ಲಿದ್ದು ಅದರ ಮಾಲಕರು ಕಟ್ಟಡ ಉಳಿಸಲಿಕ್ಕಾಗಿ ಸಮುದ್ರಕ್ಕೆ ಹಿಟಾಚಿ ಯಂತ್ರದ ಮೂಲಕ ಕಲ್ಲು ಹಾಕಲಾರಂಭಿಸಿದ್ದಾರೆ. ಸರಕಾರಿ ಜಾಗದಲ್ಲಿ ಖಾಸಗಿಯವರು ನಿಯಮ ಉಲ್ಲಂಘಿಸಿ ರಕ್ಷಣಾ ಕಾರ್ಯ ನಡೆಸುವುದನ್ನ ವಿರೋಧಿಸಿದ ಸ್ಥಳೀಯರು ಕಾಮಗಾರಿಯನ್ನ ಸ್ಥಗಿತಗೊಳಿಸಿದ್ದು ತಹಶೀಲ್ದಾರ್ ಅವರಿಗೆ ಈ ಬಗ್ಗೆ ದೂರು ನೀಡಿದ್ದಾರೆ.


ಗೆಸ್ಟ್ ಹೌಸ್ ಮಾಲಕರ ವಿರುದ್ದ ಕೇಸು ದಾಖಲಿಸುವುದಾಗಿ ತಹಶೀಲ್ದಾರ್ ಸ್ಥಳೀಯರಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಸ್ಥಳೀಯರಾದ ಸುನಿಲ್ ಉಚ್ಚಿಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಬಡವರ ಮನೆಗಳ ರಕ್ಷಣೆಗಾಗಿ ಇಷ್ಟು ದಿವಸ ಸರಕಾರದಿಂದ ಸಣ್ಣ ರಕ್ಷಣಾ ಕಾರ್ಯವನ್ನು ಕೈಗೊಂಡಿಲ್ಲ. ಸ್ಥಳಕ್ಕೆ ಶಾಸಕ ಖಾದರ್ ನಿನ್ನೆ ಭೇಟಿ ನೀಡಿದ್ದು ರಕ್ಷಣಾ ಕಾರ್ಯದಲ್ಲಿ ತನ್ನ ಅಸಹಾಯಕತೆ ತೋರ್ಪಡಿಸಿದ್ದು ಸರಕಾರ ನಮ್ಮದಲ್ಲ. ನನಗೇನೂ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಬಿಜೆಪಿ ಕಡೆಯವರು ಶಾಸಕರಿಗೆ ಸಂಪೂರ್ಣ ತಾಕತ್ತಿದೆ ಎಂದು ಹೇಳುತ್ತಾರೆ. ಹಾಗಾದರೆ ಕಡಲ್ಕೊರೆತಕ್ಕೆ ಪರಿಹಾರ ಒದಗಿಸುವವರು ಯಾರು?ಖಾಸಗಿಯವರು ಇಲ್ಲಿ ಅಕ್ರಮ ಗೆಸ್ಟ್ ಹೌಸ್ಗಳನ್ನು ನಿರ್ಮಿಸಿ ದರ್ಪ ಮೆರೆಯುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಬಟ್ಟಪ್ಪಾಡಿ ಕಡಲ್ಕೊರೆತ ಪ್ರದೇಶಕ್ಕೆ ಇಂದು ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಮತ್ತು ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಲಿದ್ದು ಸ್ಥಳೀಯರು ಆಕ್ರೋಶ ತೋರಿಸಲು ಸಜ್ಜಾಗಿದ್ದಾರೆ.
Heavy rains in Mangalore causes extreme soil erosion at Batapady Beach in Ullal.
19-09-26 05:44 pm
HK News Staffer
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 10:11 am
HK News Staffer
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am