ಬ್ರೇಕಿಂಗ್ ನ್ಯೂಸ್
04-07-22 08:10 pm Mangalore Correspondent ಕರಾವಳಿ
ಮಂಗಳೂರು, ಜುಲೈ 4: ವಳಚ್ಚಿಲ್, ಅಡ್ಯಾರ್ ಭಾಗದಲ್ಲಿ ಜುಲೈ 1ರಂದು ಭಾರೀ ಮಳೆಯಾಗಿದ್ದ ಕಾರಣ ಆ ಭಾಗದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿತ್ತು. ಎತ್ತರ ಪ್ರದೇಶ ಆಗಿದ್ದರೂ ಮನೆಗಳಿಗೆ ನೀರು ನುಗ್ಗಿದ್ದು, ಎಲ್ಲೆಂದರಲ್ಲಿ ರಸ್ತೆಗಳಲ್ಲಿ ನೀರು ನುಗ್ಗಿ ಬರುತ್ತಿದ್ದುದು ಜನರನ್ನು ದಿಗಿಲು ಮಾಡಿತ್ತು. ಅಲ್ಲಿರುವ ಸಣ್ಣ ಸೇತುವೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತುಂಬಿಕೊಂಡು ನೀರು ಹರಿಯದೆ ತಡೆಯಾಗಿದ್ದು ಸಾರ್ವಜನಿಕರ ಟೀಕೆಗೂ ಗುರಿಯಾಗಿತ್ತು.
ಈ ಬಗ್ಗೆ ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ಅಡ್ಯಾರ್ ಗ್ರಾಮ ಪಂಚಾಯತ್ ಅಧಿಕಾರಿಗಳು, ಜನಪ್ರತಿನಿಧಿಗಳು ವಳಚ್ಚಿಲ್, ಅಡ್ಯಾರ್ ಭಾಗದಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಅಡ್ಯಾರ್ ಪಂಚಾಯತ್ ಪಿಡಿಓ ಕೃಷ್ಣ ನಾಯ್ಕ್ ಸ್ವತಃ ನೀರು ಹರಿಯೋ ಚರಂಡಿಗೆ ಇಳಿದು ಪ್ಲಾಸ್ಟಿಕ್ ಹೆಕ್ಕಿದ್ದಾರೆ. ಅಲ್ಲದೆ, ಸೇತುವೆ ಅಡಿಭಾಗದಲ್ಲಿ ಹಿಡಿದುಕೊಂಡಿದ್ದ ಪ್ಲಾಸ್ಟಿಕ್ ತೆಗೆಸಲು ಕಾರ್ಮಿಕರಿಗೆ ಸೂಚನೆ ನೀಡಿದ್ದಾರೆ.







ಮೊದಲೇ ಸಣ್ಣ ಸೇತುವೆ. ಒಂದು ಭಾಗದಿಂದ ನೀರು ನುಗ್ಗಿ ಬಂದಿದ್ದರಿಂದ ಸೇತುವೆ ಬ್ಲಾಕ್ ಆಗಿತ್ತು. ಆಮೇಲೆ ನೋಡಿದರೆ, ಅಲ್ಲಿನ ಎಲ್ಲ ರಸ್ತೆಗಳಲ್ಲೂ ನೀರು ನುಗ್ಗಿ ಬಂದಿತ್ತು. ಅಷ್ಟೊಂದು ನೀರು ಎಲ್ಲಿಂದ ಬಂದಿತ್ತು ಅನ್ನೋದು ಜನರಿಗೂ ಸೋಜಿಗವಾಗಿತ್ತು. ಸರಿಯಾದ ಚರಂಡಿ ಮಾಡಿಲ್ಲ. ಇದ್ದ ಚರಂಡಿಯಲ್ಲೂ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯ ಸುರಿಯಲಾಗಿದೆ ಎಂದು ಸ್ಥಳೀಯರು ಅಡ್ಯಾರ್ ಪಂಚಾಯತ್ ಆಡಳಿತದ ಬಗ್ಗೆ ಪ್ರಶ್ನೆ ಮಾಡಿದ್ದರು. ಇದೀಗ ಸ್ವತಃ ಪಿಡಿಓ ಅಧಿಕಾರಿಯೇ ನೀರು ಹರಿಯೋ ಮೋರಿಗೆ ಇಳಿದು ಸ್ವಚ್ಛ ಮಾಡಿದ್ದು ಜನರ ಪ್ರಶಂಸೆಗೆ ಕಾರಣವಾಗಿದೆ.
Mangalore Adyar gram panchayat PDO Harish Nayak gets into surge water at Valachil to clear garbage. Few days ago valachil had drowned with water creating havoc. After complaints from public PDO who visited the spot got down himself into the surge water to clear the garbage waste. People have applauded his work.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 09:10 pm
HK News Desk
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
14-11-25 10:10 pm
Mangalore Correspondent
ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ; ಮಕ್ಕ...
14-11-25 09:03 pm
ಡಿಸಿಸಿ ಬ್ಯಾಂಕ್ ಸಾಲಕ್ಕೆ ಜಾಮೀನು ನಿಂತು ಚೆಕ್ ನೀಡಿ...
14-11-25 03:34 pm
ಸದಸ್ಯತ್ವ ಕಳಕೊಂಡವರಿಂದಲೇ ದರ್ಗಾ ಕಮಿಟಿ ವಿರುದ್ಧ ಅಪ...
13-11-25 07:41 pm
Belthangady, Kadaba Suicide, Mangalore; ಕಡಬದ...
13-11-25 05:01 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm