ಬ್ರೇಕಿಂಗ್ ನ್ಯೂಸ್
03-07-22 01:14 pm Mangaluru Correspondent ಕರಾವಳಿ
ಕುಂದಾಪುರ, ಜುಲೈ 3: ಮರವಂತೆ ಸಮುದ್ರ ಕಿನಾರೆಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಶನಿವಾರ ಮಧ್ಯರಾತ್ರಿ ಕಾರೊಂದು ಸಮುದ್ರಕ್ಕೆ ಬಿದ್ದು ಅದರಲ್ಲಿದ್ದ ಮಾರ್ಬಲ್ ವ್ಯಾಪಾರಿಯ ಪುತ್ರ ಕಾರಿನಲ್ಲಿಯೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸೋದರ ಸಂಬಂಧಿಯಾಗಿರುವ ಇನ್ನೊಬ್ಬ ಯುವಕ ನಾಪತ್ತೆಯಾಗಿದ್ದು ಸ್ಥಳೀಯರು, ಅಗ್ನಿಶಾಮಕ ದಳ ಹುಡುಕಾಟ ನಡೆಸಿದ್ದಾರೆ.
ಕೋಟೇಶ್ವರದ ಬೀಜಾಡಿ ನಿವಾಸಿ ವೀರಜ್ ಆಚಾರ್ಯ(28) ಮೃತಪಟ್ಟ ಸ್ಥಿತಿಯಲ್ಲಿ ಕಾರಿನೊಳಗೆ ಪತ್ತೆಯಾಗಿದ್ದಾರೆ. ಶನಿವಾರ ರಾತ್ರಿ 12.30ರ ಸುಮಾರಿಗೆ ಘಟನೆ ನಡೆದಿದ್ದು, ಕಾರಿನಲ್ಲಿ ನಾಲ್ವರು ಸೋದರ ಸಂಬಂಧಿ ಯುವಕರು ಕೋಟೇಶ್ವರದಿಂದ ಬೈಂದೂರು ಕಡೆಗೆ ತೆರಳುತ್ತಿದ್ದರು. ರೋಶನ್, ಸಂದೇಶ್, ಕಾರ್ತಿಕ್ ಮತ್ತು ವೀರಜ್ ಕೋಟೇಶ್ವರದಿಂದ ಬೈಂದೂರು ಕಡೆಗೆ ತೆರಳುತ್ತಿದ್ದರು. ಈ ವೇಳೆ, ಮರವಂತೆಯ ಮಾರಸ್ವಾಮಿ ದೇವಸ್ಥಾನದ ಸಮೀಪ ಭಾರೀ ಮಳೆಯ ಕಾರಣ ಕಾರು ಸಮುದ್ರ ದಂಡೆಗೆ ಇಳಿದಿದೆ ಎನ್ನಲಾಗುತ್ತಿದ್ದು, ಸಮುದ್ರದ ನೀರಿನಲ್ಲಿ ಸಿಲುಕಿ ರೋಶನ್ ಎಂಬವರು ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಕಾರ್ತಿಕ್ ಮತ್ತು ಸಂದೇಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.




ವೀರಜ್ ಕಾರನ್ನು ಚಲಾಯಿಸುತ್ತಿದ್ದ ಸೀಟಿನಲ್ಲಿದ್ದು ಸೀಟ್ ಬೆಲ್ಟ್ ಹಾಕ್ಕೊಂಡ ರೀತಿಯಲ್ಲೇ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬೆಳಗ್ಗೆ ಸ್ಥಳೀಯ ಮೀನುಗಾರರು ಸೇರಿ ಕಾರನ್ನು ಹಗ್ಗ ಕಟ್ಟಿ ಮೇಲಕ್ಕೆತ್ತಿದ್ದಾರೆ. ದಿನೇಶ್ ಗಂಗೊಳ್ಳಿ, ಇಬ್ರಾಹಿಂ ಗಂಗೊಳ್ಳಿ, ನದೀಮ್ ಅವರಿದ್ದ ಮುಳುಗು ತಜ್ಞರ ತಂಡ ರೋಶನ್ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ. ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್, ಸರ್ಕಲ್ ಇನ್ ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಠಾಣಾಧಿಕಾರಿ ವಿನಯ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.



ಕಾರು ಅಪಘಾತದ ಬಗ್ಗೆ ಶಂಕೆ
ವೀರಜ್, ಬೀಜಾಡಿಯ ಗೋಳಿಬೆಟ್ಟು ನಿವಾಸಿ ವಿಲಾಸ್ ಮಾರ್ಬಲ್ ಸಂಸ್ಥೆಯ ಮಾಲಕ ರಮೇಶ್ ಆಚಾರ್ಯ ನೇರಂಬಳ್ಳಿ ಎಂಬವರ ಪುತ್ರನಾಗಿದ್ದು, ಸೀಟ್ ಬೆಲ್ಟ್ ಹಾಕಿದ ರೀತಿಯಲ್ಲೇ ಕಾರಿನಲ್ಲಿ ಉಳಿದುಕೊಂಡಿರುವುದು ಅಪಘಾತದ ಬಗ್ಗೆ ಸಂಶಯಕ್ಕೂ ಕಾರಣವಾಗಿದೆ. ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದರೇ ಅನ್ನುವ ಶಂಕೆಯೂ ತಲೆದೋರಿದೆ. ಸಹಜ ಸ್ಥಿತಿಯಲ್ಲಿ ಕಾರು ಸಮುದ್ರ ದಂಡೆಗೆ ಇಳಿದರೂ ಚಾಲಕ ಸೀಟ್ ಬೆಲ್ಟ್ ಹಾಕಿದ ರೀತಿಯಲ್ಲೇ ಉಳಿದುಕೊಂಡಿರುವುದು ಮತ್ತು ಅದೇ ಸ್ಥಿತಿಯಲ್ಲಿ ಸಾವು ಕಂಡಿರುವುದು ಹೇಗೆ ಎನ್ನುವ ಪ್ರಶ್ನೆ ಎದುರಾಗಿದೆ. ಮರವಂತೆ ಹೆದ್ದಾರಿಯಲ್ಲಿ ಕಾರು ಬದಿಗೆ ಇಳಿದರೂ, ನೇರವಾಗಿ ಸಮುದ್ರಕ್ಕೆ ಬೀಳುವ ಸ್ಥಿತಿ ಇಲ್ಲ. ಬಂಡೆಕಲ್ಲುಗಳು ಇವೆ. ಆ ಜಾಗಕ್ಕೆ ಕಾರು ಬಿದ್ದರೂ, ನೀರಿನಲ್ಲಿ ಕೊಚ್ಚಿ ಹೋಗುವ ಮೊದಲು ಮೇಲೆ ಬರಬಹುದಿತ್ತು. ಅಪಘಾತದ ಸ್ಥಿತಿ ನೋಡಿದರೆ ಬೇರೆ ಏನಾದರೂ ಆಯಾಮ ಇದ್ದಿರುವ ಶಂಕೆ ವ್ಯಕ್ತವಾಗುತ್ತದೆ.
In a shocking incident, a person was killed and another has gone missing as the driver of a car lost control over his vehicle and the car fell into the sea on National Highway 166, late night on Saturday, July 2 at Maravanthe under the Gangolli Police Station limits. The car, moving from Koteshwar to Byndoor on National Highway 66, veered off the road and fell into the sea. At the time of the accident, there were 4 persons travelling in the car. One among them, Viraj, was killed. Another person, Roshan, is said to be washed away by the waves and is missing.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 09:10 pm
HK News Desk
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
14-11-25 10:10 pm
Mangalore Correspondent
ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ; ಮಕ್ಕ...
14-11-25 09:03 pm
ಡಿಸಿಸಿ ಬ್ಯಾಂಕ್ ಸಾಲಕ್ಕೆ ಜಾಮೀನು ನಿಂತು ಚೆಕ್ ನೀಡಿ...
14-11-25 03:34 pm
ಸದಸ್ಯತ್ವ ಕಳಕೊಂಡವರಿಂದಲೇ ದರ್ಗಾ ಕಮಿಟಿ ವಿರುದ್ಧ ಅಪ...
13-11-25 07:41 pm
Belthangady, Kadaba Suicide, Mangalore; ಕಡಬದ...
13-11-25 05:01 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm