ಬ್ರೇಕಿಂಗ್ ನ್ಯೂಸ್
29-06-22 04:26 pm Mangalore Correspondent ಕರಾವಳಿ
ಮಂಗಳೂರು, ಜೂನ್ 29: ಸ್ಮಾರ್ಟ್ ಸಿಟಿ ಹೆಸರಲ್ಲಿ ಮಂಗಳೂರಿನಲ್ಲಿ ದುಡ್ಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ನಗರದ ವೃತ್ತಗಳನ್ನು ತೆಗೆಯುವುದು, ಮತ್ತೆ ಕಟ್ಟುವುದು, ಕಾಂಕ್ರೀಟ್ ರಸ್ತೆಗಳನ್ನು ಅಗೆದು ಮತ್ತೆ ಕಾಂಕ್ರೀಟ್ ಮಾಡುವುದು ಪೂರ್ತಿ ಅವೈಜ್ಞಾನಿಕ ಕಾಮಗಾರಿ. ಯಾರೋ ಒಬ್ಬ ಮ್ಯಾನೇಜ್ಮೆಂಟ್ ಇಂಜಿನಿಯರ್ ಹೇಳಿದಂತೆ ಇಲ್ಲಿನ ರಾಜಕಾರಣಿಗಳು ಕುಣಿಯುತ್ತಿದ್ದಾರೆ. ಎಷ್ಟೋ ವರ್ಷಗಳಿಂದ ಎಬಿ ಶೆಟ್ಟಿ ವೃತ್ತ ಇತ್ತು. ಅದನ್ನು ಕಿತ್ತು ಹಾಕಿದ್ದಾರೆ. ಅವರ ಹೆಸರನ್ನು ಬದಿಗಿಟ್ಟು ಪ್ರತಿಷ್ಠೆಗೆ ಮಸಿ ಬಳಿದಿದ್ದಾರೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಹರಿಹಾಯ್ದಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅಜಿತ್ ರೈ, ಎಬಿ ಶೆಟ್ಟಿಯವರು ಸ್ವಾತಂತ್ರ್ಯ ಬರುವ ಮೊದಲೇ ಈ ಜಿಲ್ಲೆಯ ಮಹಾನ್ ನಾಯಕರಾಗಿದ್ದವರು. 1936ರಲ್ಲಿ ಮದ್ರಾಸ್ ಶಾಸನ ಸಭೆಯ ಸದಸ್ಯರಾಗಿದ್ದ ಎಬಿ ಶೆಟ್ಟಿ ಅವರನ್ನು ಆಗಿನ ಮದ್ರಾಸ್ ಪ್ರಾಂತದ ಮುಖ್ಯಮಂತ್ರಿ ಸಿ.ರಾಜಗೋಪಾಲಾಚಾರಿ ಪಾರ್ಲಿಮೆಂಟರಿ ಸೆಕ್ರಟರಿಯಾಗಿ ನೇಮಿಸಿದ್ದರು. ಮುಂದೆ ಅದೇ ಮಂತ್ರಿ ಮಂಡಲದಲ್ಲಿ ಸಚಿವರನ್ನಾಗಿ ಮಾಡಲಾಗಿತ್ತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು. ಸ್ವಾತಂತ್ರ್ಯ ನಂತರ ನಡೆದ ಚುನಾವಣೆಯಲ್ಲಿ ಗೆದ್ದು ಮದ್ರಾಸ್ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದರು. ಜಿಲ್ಲೆಯಲ್ಲಿ ಕೆಎಂಸಿ ಆಸ್ಪತ್ರೆ, ವೆನ್ಲಾಕ್ ಆಸ್ಪತ್ರೆ ನವೀಕರಿಸಿ, ಆರೋಗ್ಯ ಸೇವೆಯ ಉನ್ನತೀಕರಿಸಲು ಕಾರಣಕರ್ತರಾಗಿದ್ದರು.
ವಿತ್ತ ಸಚಿವ, ಕೃಷಿ ಸಚಿವ, ಆರೋಗ್ಯ ಸಚಿವರಾಗಿ ಸಮರ್ಥ ನಾಯಕನೆಂದು ಹೆಸರು ಮಾಡಿದ್ದ ಎ.ಬಿ.ಶೆಟ್ಟಿಯವರು ಈ ಜಿಲ್ಲೆಗೆ ನೀಡಿದ ಕೊಡುಗೆ ಅನುಪಮವಾದ್ದು. ಕರ್ನಾಟಕ ಪಾಲಿಟೆಕ್ನಿಕ್ ಸ್ಥಾಪನೆ, ವಿಜಯಾ ಬ್ಯಾಂಕಿನ ಸ್ಥಾಪನೆಯಿಂದ ತೊಡಗಿ ಮಂಗಳೂರಿನಲ್ಲಿ ಬಂಟರ ಸಂಘದ ಸ್ಥಾಪನೆ, ಅವರ ದೂರದೃಷ್ಟಿಯ ಕಾರ್ಯಗಳಿಗೆ ಲೆಕ್ಕವಿಲ್ಲ. ಆದರೆ ಅವರ ಸ್ಮರಣೆಗಾಗಿ ಹೆಸರಿದ್ದ ವೃತ್ತವನ್ನು ಸ್ಮಾರ್ಟ್ ಸಿಟಿ ಕಾಮಗಾರಿಯ ನೆಪದಲ್ಲಿ ತೆಗೆದು ಹಾಕಲಾಗಿದೆ. ಎಬಿ ಶೆಟ್ಟಿಯವರು ಮತ್ತೆ ಬಂದು ತಮ್ಮ ಹೆಸರು ಬೇಕೆಂದು ಕೇಳುವುದಿಲ್ಲ. ಎಬಿ ಶೆಟ್ಟಿ ವೃತ್ತ ಎಲ್ಲಿತ್ತೋ ಅಲ್ಲಿಯೇ ಸ್ಥಾಪನೆ ಮಾಡಬೇಕು. ಅವರಿಗಾದ ಅವಮಾನವನ್ನು ಬಂಟ ಸಮಾಜ ಸಹಿಸುವುದಿಲ್ಲ. ನಾವು ರಾಜಕೀಯ ಮಾಡುವುದಿಲ್ಲ. ಇದ್ದುದನ್ನು ಒಡೆದು ಹಾಕಿ, ಕಟ್ಟುವುದು, ಒಬ್ಬರ ಹೆಸರನ್ನು ತೆಗೆಯುವುದೇ ಸ್ಮಾರ್ಟ್ ಸಿಟಿ ಸಾಧನೆ ಎಂದು ಅಜಿತ್ ಕುಮಾರ್ ರೈ ಹೇಳಿದರು.
ಎಬಿ ಶೆಟ್ಟಿ ಕುಟುಂಬದ ಮೊಮ್ಮಕ್ಕಳು ಸೇರಿದಂತೆ ಬಂಟರ ಸಂಘದ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Mcc has insulted us by removing the name of AB shetty for the circle at State Bank said Ajith Kumar rai of Bunt Sangha in Mangalore. He also alleged that MCC has been looting money in crores in the name of smart city.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 11:50 am
HK News Desk
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
14-11-25 03:34 pm
Mangalore Correspondent
ಸದಸ್ಯತ್ವ ಕಳಕೊಂಡವರಿಂದಲೇ ದರ್ಗಾ ಕಮಿಟಿ ವಿರುದ್ಧ ಅಪ...
13-11-25 07:41 pm
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm