ಬ್ರೇಕಿಂಗ್ ನ್ಯೂಸ್
28-06-22 05:45 pm Mangalore Correspondent ಕರಾವಳಿ
ಮಂಗಳೂರು, ಜೂನ್ 28: ನಗರದ ಪಂಪ್ವೆಲ್ ಮೇಲ್ಸೇತುವೆಯ ಅಡಿಭಾಗದಲ್ಲಿ ಮಂಗಳವಾರ ಮಧ್ಯಾಹ್ನ ಹಠಾತ್ತಾಗಿ ರಸ್ತೆ ಕುಸಿದು ನೀರು ಚಿಮ್ಮತೊಡಗಿದ್ದು ಸ್ಥಳೀಯರು ಏನಾಗುತ್ತಿದೆ ಎಂದು ತಿಳಿಯದೆ ಗಲಿಬಿಲಿ ಒಳಗಾಗಿದ್ದಾರೆ. ಕೆಲವು ಜನರು ಸ್ಥಳದಲ್ಲಿ ಭೂಕುಸಿತ ಆಗುತ್ತೋ ಅನ್ನುವ ಭಯಕ್ಕೆ ಒಳಗಾಗಿದ್ದಾರೆ. ಸ್ಥಳದಲ್ಲಿದ್ದ ಟ್ರಾಫಿಕ್ ಪೊಲೀಸರು ಕೂಡಲೇ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಿದ್ದಾರೆ. ಬಳಿಕ ಮಹಾನಗರ ಪಾಲಿಕೆಯ ನೀರು ಸರಬರಾಜು ಇಲಾಖೆಯ ಸಿಬಂದಿಗೆ ವಿಷಯ ತಿಳಿಸಿದ್ದಾರೆ.
ತುಂಬೆ ಅಣೆಕಟ್ಟಿನಿಂದ ಮಂಗಳೂರು ನಗರಕ್ಕೆ ಪೂರೈಕೆಯಾಗುವ ನೀರಿನ ಪೈಪ್ ಲೈನ್ ಪಂಪ್ವೆಲ್ ರಸ್ತೆಯ ಅಡಿ ಭಾಗದಿಂದ ಬೆಂದೂರುವೆಲ್ ಪಂಪ್ ಹೌಸ್ ಗೆ ಸಂಪರ್ಕ ಹೊಂದಿದೆ. ಅದರಲ್ಲಿ ಒಂದು 38 ಇಂಚ್ ವ್ಯಾಸದ ನೀರಿನ ಪೈಪ್ ಲೈನ್ ಆಗಿದ್ದರೆ, ಇನ್ನೊಂದು ಪಡೀಲ್ ಪಂಪ್ ಹೌಸ್ ನಿಂದ ಸಬ್ ಆಗಿ ಲೇಡಿಹಿಲ್ ಪಂಪ್ ಹೌಸ್ಗೆ ಪೂರೈಕೆಯಾಗುತ್ತಿರುವ 18 ಇಂಚು ವ್ಯಾಸದ ನೀರಿನ ಪೈಪ್ ಲೈನ್. ಮಳೆಯಿಂದಾಗಿ ರಸ್ತೆ ಸಡಿಲಗೊಂಡು ಹೆದ್ದಾರಿಯಲ್ಲಿ ಭಾರದ ವಾಹನಗಳು ಸಾಗುತ್ತಿದ್ದಾಗ ಅಡಿಭಾಗದಲ್ಲಿ ಸಾಗಿದ್ದ 18 ಇಂಚು ವ್ಯಾಸದ ಪೈಪ್ ಲೈನ್ ಒಡೆದು ಹೋಗಿದ್ದು, ನೀರಿನ ರಭಸಕ್ಕೆ ರಸ್ತೆಯನ್ನೇ ಮೇಲಕ್ಕೆ ಚಿಮ್ಮುತ್ತಾ ನೀರು ಹೊರಬಂದಿದೆ.




ಕಂಕನಾಡಿ ಕಡೆಯಿಂದ ಬರುವ ವಾಹನಗಳು ಸೇತುವೆಯ ಅಡಿಭಾಗದಿಂದಾಗಿ ಗರೋಡಿಯತ್ತ ಸಾಗಲು ನಡುವಿನ ಸರ್ಕಲ್ ದಾಟುವಲ್ಲಿಯೇ ನಾಲ್ಕೈದು ಮೀಟರ್ ವ್ಯಾಪ್ತಿಯಲ್ಲಿ ನೀರು ಚಿಮ್ಮತೊಡಗಿತ್ತು. ಆನಂತರ, ನೀರಿನ ಪೈಪ್ ಲೈನನ್ನು ಬಂದ್ ಮಾಡಿದ್ದು, ಪೈಪ್ ಒಡೆದಿರುವುದು ಎಲ್ಲಿ ಅನ್ನುವುದನ್ನು ಪತ್ತೆ ಹಚ್ಚಲು ಕಾಮಗಾರಿ ಆರಂಭಿಸಿದ್ದಾರೆ. ಹಿಂದೆ ಈ ಭಾಗದಲ್ಲಿ ನೀರಿನ ತೋಡು ಇತ್ತು. ಅದರ ಬದಿಯಲ್ಲೇ ನೀರಿನ ಪೈಪ್ ಲೈನ್ ಹಾಕಲಾಗಿತ್ತು. ಆನಂತರ ರಸ್ತೆ ವಿಸ್ತರಣೆಯಾದ ಸಂದರ್ಭದಲ್ಲಿ ಅದರ ಮೇಲ್ಗಡೆ ಮಣ್ಣು ಮುಚ್ಚಿ ರಸ್ತೆ ಮಾಡಲಾಗಿತ್ತು. ರಸ್ತೆಯಾಗಿ ಎರಡು ವರ್ಷ ಆಗುತ್ತಲೇ ನೀರಿನ ಪೈಪ್ ಲೈನ್ ಒಡೆದು ಹೋಗಿದೆ.



ಸದ್ಯಕ್ಕೆ ಲೇಡಿಹಿಲ್ ಪಂಪ್ ಹೌಸ್ ಗೆ ಪೂರೈಕೆಯಾಗುವ 18 ಇಂಚು ವ್ಯಾಸದ ನೀರಿನ ಪೈಪ್ ಲೈನನ್ನು ಮಾತ್ರ ಕಡಿತ ಮಾಡಲಾಗಿದೆ. ಇದರಿಂದ ಸುಲ್ತಾನ್ ಬತ್ತೇರಿ, ಉರ್ವಾ, ಮಣ್ಣಗುಡ್ಡ, ಲೇಡಿಹಿಲ್, ಕಾಪಿಕಾಡು, ಚಿಲಿಂಬಿ, ಕೋಡಿಕಲ್ ಆಸುಪಾಸಿನ ವ್ಯಾಪ್ತಿಯ ಏಳು ಕಾರ್ಪೊರೇಟರ್ ಏರಿಯಾಗಳಿಗೆ ನೀರಿನ ಪೂರೈಕೆ ಸ್ಥಗಿತ ಆಗಿದೆ. ಪೈಪ್ ಒಡೆದಿದ್ದು ಎಲ್ಲಿ ಅನ್ನೋದು ಪತ್ತೆಯಾದಲ್ಲಿ ಇಂದು ರಾತ್ರಿಯೇ ಸರಿಪಡಿಸಲಾಗುವುದು, ಇಲ್ಲದೇ ಹೋದಲ್ಲಿ ಒಂದು ದಿನ ವಿಳಂಬ ಆಗಬಹುದು ಎಂದು ಕಾಮಗಾರಿ ಸ್ಥಳದಲ್ಲಿದ್ದ ನೀರಾವರಿ ಇಲಾಖೆಯ ಸಿಬಂದಿ ತಿಳಿಸಿದ್ದಾರೆ.
As the water pipeline connecting from Thumbe to Bendorewell got damaged at Pumpwell, heavy water spillage and traffic snarl was witnessed near the flyover here on Tuesday June 28.The incident created inconvenience to the vehicular movement. Due to the incident, water is flowing on the road which led to cracks on the tar road under the flyover.
19-09-26 05:44 pm
HK News Staffer
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 10:11 am
HK News Staffer
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am