ಬ್ರೇಕಿಂಗ್ ನ್ಯೂಸ್
24-06-22 07:55 pm Mangalore Correspondent ಕರಾವಳಿ
ಮಂಗಳೂರು, ಜೂ.24 : ನಗರದ ಡೊಂಗರಕೇರಿ ಕೆನರಾ ಹೈಸ್ಕೂಲಿನ ಭುವನೇಂದ್ರ ಸಭಾಂಗಣದಲ್ಲಿ ಪಠ್ಯಪುಸ್ತಕ ರಚನಾ ಸಮಿತಿ ಅಧ್ಯಕ್ಷರಾಗಿ ಟೀಕೆಗೀಡಾಗಿರುವ ರೋಹಿತ್ ಚಕ್ರತೀರ್ಥ ಅವರನ್ನು ನಾಗರಿಕ ಸನ್ಮಾನ ಹೆಸರಲ್ಲಿ ಆದರಿಸುವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಬಗ್ಗೆ ಟೀಕೆ ಕೇಳಿಬಂದಿರುವ ಸಂದರ್ಭದಲ್ಲೇ ಬಿಜೆಪಿ ಪಾಳಯದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಆಪ್ತ, ಸದ್ಯ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನಿರ್ದೇಶಕರಾಗಿರುವ ಕೆ.ತಿಮ್ಮಪ್ಪ ಸುವರ್ಣ (ಕೆ.ಟಿ.ಸುವರ್ಣ) ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಯ ಪೋಸ್ಟನ್ನ ಉಳ್ಳಾಲ ಬಿಲ್ಲವ ವೇದಿಕೆ ವಾಟ್ಸಪ್ ಗ್ರೂಪಲ್ಲಿ ಹಂಚಿಕೊಂಡಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಅವಮಾನ ಮಾಡಿದ ರೋಹಿತ್ ಚಕ್ರತೀರ್ಥಗೆ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ನಡೆಯುವ ಸನ್ಮಾನ ಜಿಲ್ಲೆಯ ಪ್ರಜ್ಞಾವಂತ ನಾಗರಿಕರಿಗೆ ಮಾಡುವ ಅವಮಾನ. ಇದನ್ನು ನಾರಾಯಣ ಗುರುಗಳ ಅನುಯಾಯಿಗಳು ಪ್ರತಿಭಟಿಸಬೇಕು. ಇದು ಸ್ವಾಭಿಮಾನದ ಪ್ರಶ್ನೆ, ನಾರಾಯಣ ಗುರು ಅಭಿಮಾನಿಗಳು ಎಂದು ಬರೆದಿರುವ ಪೋಸ್ಟನ್ನ ಬಿಲ್ಲವ ವೇದಿಕೆ ಉಳ್ಳಾಲ ಘಟಕದ ಅಧ್ಯಕ್ಷರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನಿರ್ದೇಶಕರಾದ ಕೆ.ಟಿ ಸುವರ್ಣ ಅವರು ಸಂಘಟನೆಯ ಅಧಿಕೃತ ವಾಟ್ಸಪ್ ಗ್ರೂಪಲ್ಲಿ ಹಂಚಿಕೊಂಡಿದ್ದು ಅದರ ಸ್ಕ್ರೀನ್ ಶಾಟ್ ಇದೀಗ ಎಲ್ಲೆಡೆ ವೈರಲ್ ಆಗಿದೆ.


ಬಿಲ್ಲವ ವೇದಿಕೆಯ ಉಳ್ಳಾಲದ ವಾಟ್ಸಪ್ ಗುಂಪಲ್ಲಿ ಕೆ.ತಿಮ್ಮಪ್ಪ ಸುವರ್ಣರು ಈ ಬಗ್ಗೆ ಸಂದೇಶವನ್ನು ಹಂಚಿಕೊಂಡಿರುವುದು ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗಿದೆ. ಮೂಲತಃ ಕಾಂಗ್ರೆಸಿಗರಾದ ಕೆ.ಟಿ.ತಿಮ್ಮಪ್ಪ ಸುವರ್ಣ ಅವರು ಬಿಜೆಪಿಗೆ ವಲಸಿಗರಾಗಿದ್ದಾರೆ. ಆದರೆ ಸಂಸದ ನಳಿನ್ ಕುಮಾರ್ ಆಪ್ತರಾಗಿರುವ ಕಾರಣಕ್ಕೆ ಸುವರ್ಣರಿಗೆ ಕಳೆದ ಬಾರಿ ಧಾರ್ಮಿಕ ಪರಿಷತ್ ಸದಸ್ಯತ್ವ ಮತ್ತು ಈ ಬಾರಿ ಹಿಂದುಳಿದ ವರ್ಗಗಳ ಆಯೋಗದ ನಿರ್ದೇಶಕ ಸ್ಥಾನ ಗಿಟ್ಟಿಸಿಕೊಂಡಿದ್ದರು.

ಇದೀಗ ಪಕ್ಷದ ಪರ ಇರುವವರು ಆಯೋಜಿಸುತ್ತಿರುವ ಕಾರ್ಯಕ್ರಮದ ಬಗ್ಗೆ ತಾವು ಬಿಲ್ಲವರು ಎಂದು ತೋರಿಸಿಕೊಳ್ಳಲು ಕೆಟಿ ಸುವರ್ಣ ತೇಪೆ ಹಾಕಿದ್ದಾರೆ. ಆದರೆ ಈ ರೀತಿಯ ವರ್ತನೆ ಮಾತ್ರ ಬಿಜೆಪಿ ಒಳಗಡೆಯೇ ಅಪಸ್ವರಕ್ಕೆ ಕಾರಣವಾಗಿದ್ದು ಕಾರ್ಯಕ್ರಮದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿರುವುದು ಪಕ್ಷದ ವಿರುದ್ಧ ನಿಲುವಾಗಿದೆ ಎನ್ನುವ ಅಭಿಪ್ರಾಯ ಕೇಳಿಬಂದಿದೆ.
Honorory program for Rohith Chakrathirtha in Mangalore, MP Nalin, KT Suvarna slammed by Ullal Billavas. The Billavas have threatened protest by creating posters and circulating them on WhatsApp.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
14-11-25 11:50 am
HK News Desk
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
Tiruchi Aircraft: ತಿರುಚಿ- ಪುದುಕೋಟೈ ಹೆದ್ದಾರಿಯಲ...
13-11-25 05:13 pm
Delhi Blast: ದೆಹಲಿ ಸ್ಫೋಟಕ್ಕೆ ಟರ್ಕಿ ನಂಟಿನ ಶಂಕೆ...
13-11-25 04:52 pm
14-11-25 03:34 pm
Mangalore Correspondent
ಸದಸ್ಯತ್ವ ಕಳಕೊಂಡವರಿಂದಲೇ ದರ್ಗಾ ಕಮಿಟಿ ವಿರುದ್ಧ ಅಪ...
13-11-25 07:41 pm
Belthangady, Kadaba Suicide, Mangalore; ಕಡಬದ...
13-11-25 05:01 pm
Kumble Toll Plaza: ಕುಂಬಳೆ ಟೋಲ್ ಪ್ಲಾಜಾಕ್ಕೆ ಭಾರ...
13-11-25 01:44 pm
Mangalore NMPT, Dinesh Gundu Rao, Congress, B...
12-11-25 06:56 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm