ಬ್ರೇಕಿಂಗ್ ನ್ಯೂಸ್
28-09-20 03:24 pm Mangalore Correspondent ಕರಾವಳಿ
ಮಂಗಳೂರು, ಸೆಪ್ಟಂಬರ್ 28: ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಮಟ್ಟಿಗೆ ಖಾಸಗಿ ಸಾರಿಗೆಯೇ ಜೀವಾಳ. ಆದರೆ, ಲಾಕ್ಡೌನ್ ನಿಂದಾಗಿ ಕರಾವಳಿಯಲ್ಲಿ ಖಾಸಗಿ ಸಾರಿಗೆ ಉದ್ಯಮವೇ ನೆಲಕಚ್ಚಿದೆ. ಆರು ತಿಂಗಳ ಕಾಲ ಬಸ್ ಗಳನ್ನು ರಸ್ತೆಗೆ ಇಳಿಸದೆ ಕಾರ್ಮಿಕರಿಗೆ ಸಂಬಳ ಕೊಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದರು. ಈಗ ಲಾಕ್ಡೌನ್ ಓಪನ್ ಆದ್ರೂ ಉದ್ಯಮಿಗಳು ಸಂಕಷ್ಟದಿಂದ ಚೇತರಿಸಿಕೊಂಡಿಲ್ಲ.
ಲಾಕ್ಡೌನ್ ಆದ್ರೂ ಸರ್ಕಾರ ಸಾರಿಗೆ ಬಸ್ ಗಳ ತೆರಿಗೆ ವಿನಾಯಿತಿ ಮಾಡಿಲ್ಲ. ಅಲ್ಲದೆ, ಇದೇ ವೇಳೆ, ಡೀಸೆಲ್ ಬೆಲೆ ಈಗ ಐದು ತಿಂಗಳಲ್ಲಿ ಲೀಟರ್ಗೆ 12 ರೂ.ನಷ್ಟು ಏರಿಕೆಯಾಗಿದೆ. ಲಾಕ್ಡೌನ್ ಬಳಿಕ ಎರಡೂ ಜಿಲ್ಲೆಗಳಲ್ಲಿ ಎಲ್ಲ ರೀತಿಯ ಬಸ್ಗಳ ಸಂಚಾರ ಸ್ಥಗಿತಗೊಂಡಿತ್ತು. ಜೂನ್ 1ರಿಂದ ಹಂತ ಹಂತವಾಗಿ ಬಸ್ ಗಳನ್ನು ರಸ್ತೆಗೆ ಇಳಿಸಿದರೂ ಪ್ರಯಾಣಿಕರ ಸಂಖ್ಯೆ ಕಡಿಮೆ. ಇನ್ನೊಂದೆಡೆ ಡೀಸೆಲ್ ದರ ಏರಿಕೆಯಿಂದಾಗಿ ಲೆಕ್ಕಕ್ಕೇ ಸಿಗುತ್ತಿಲ್ಲ ಎನ್ನುತ್ತಾರೆ ಬಸ್ ಮಾಲೀಕರು.

ಮಂಗಳೂರು- ಉಡುಪಿ -ಕುಂದಾಪುರ ರೂಟ್ನಲ್ಲಿ ಸದ್ಯಕ್ಕೆ 70 ಬಸ್ ಗಳು ಓಡಾಡುತ್ತಿವೆ. ಬೆಳಗ್ಗೆ ಮತ್ತು ಸಂಜೆ ಮಾತ್ರ ಪ್ರಯಾಣಿಕರು ಇರುತ್ತಾರೆ. ಇದರಿಂದ ಟ್ರಿಪ್ ನಿರ್ವಹಣೆ ಕಷ್ಟವಾಗುತ್ತಿದೆ. ಎಕ್ಸ್ ಪ್ರೆಸ್/ಸರ್ವೀಸ್ ಬಸ್ಗಳ ಪೈಕಿ ಶೇ.30 ಬಸ್ ಗಳು ಮಾತ್ರ ರಸ್ತೆಗಳಿದಿರುವುದು. ಹೀಗಾಗಿ ಶೇ.70ರಷ್ಟು ಬಸ್ಗಳು ನಿಂತಲ್ಲೇ ಇವೆ. ಮಂಗಳೂರಿನ ಒಟ್ಟು 325 ಸಿಟಿ ಬಸ್ಗಳಲ್ಲಿ 275ರಷ್ಟು ರಸ್ತೆಗೆ ಇಳಿದಿದ್ದರೆ, ಉಡುಪಿಯಲ್ಲಿ 85 ಸಿಟಿ ಬಸ್ಗಳ ಪೈಕಿ 35 ಬಸ್ಗಳು ರಸ್ತೆಗಿಳಿದಿಲ್ಲ. ಇದೇ ವೇಳೆ, ಬಸ್ ಮಾಲೀಕರ ಸಂಘದವರು ರಾಜ್ಯ ಸಾರಿಗೆ ಸಚಿವರನ್ನು ಭೇಟಿಯಾಗಿ ತೆರಿಗೆ ವಿನಾಯಿತಿ ನೀಡಲು ಕೋರಿದ್ದಾರೆ. ಆಟೋ ಚಾಲಕರಿಗೆ ನೀಡಿರುವಂತೆ ಖಾಸಗಿ ಬಸ್ ಸಿಬ್ಬಂದಿಗೂ ನೆರವಾಗಲು ಮನವಿ ಮಾಡಿದ್ದಾರೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am