ಬ್ರೇಕಿಂಗ್ ನ್ಯೂಸ್
31-05-22 04:48 pm Mangalore Correspondent ಕರಾವಳಿ
ಮಂಗಳೂರು, ಮೇ 31 : ಎಸ್ಡಿಪಿಐ ಸಮಾವೇಶಕ್ಕೆ ಬಂದಿದ್ದ ವೇಳೆ ಕಾರ್ಯಕರ್ತರು ಪೊಲೀಸರಿಗೆ ಅವಾಚ್ಯವಾಗಿ ನಿಂದಿಸಿದ ಪ್ರಕರಣದಲ್ಲಿ ಕಂಕನಾಡಿ ಪೊಲೀಸರು ಆರು ಮಂದಿ ಎಸ್ಡಿಪಿಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಕೊಣಾಜೆ ಬಳಿಯ ಇನ್ನೋಳಿ ನಿವಾಸಿಗಳಾದ ನೌಶಾದ್(27), ಹೈದರಾಲಿ(28), ಪಾಂಡೇಶ್ವರ ನಿವಾಸಿ ಮೊಹಮ್ಮದ್ ಸಯ್ಯದ್ ಅಫ್ರೀದ್ (23), ಕೊಣಾಜೆಯ ಬಶೀರ್ (40), ಇನೋಳಿಯ ಜುಬೇರ್ (32), ಪುತ್ತೂರಿನ ಜಲೀಲ್ (25) ಬಂಧಿತರು. ನೌಶಾದ್ ಮತ್ತು ಹೈದರಾಲಿ ಮುಖ್ಯ ಆರೋಪಿಗಳಾಗಿದ್ದು ಇತರರು ಅವರಿಗೆ ಆಶ್ರಯ ನೀಡಿದ್ದಕ್ಕಾಗಿ ಅರೆಸ್ಟ್ ಆಗಿದ್ದಾರೆ.
ಮೇ 27 ರಂದು ಕಣ್ಣೂರಿನಲ್ಲಿ ನಡೆದಿದ್ದ ಸಮಾವೇಶಕ್ಕೆ ಬೈಕ್ ಮತ್ತು ಕಾರಿನಲ್ಲಿ ಬಂದಿದ್ದ ಹನ್ನೊಂದು ಮಂದಿ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ವಿಡಿಯೋ ಮಾಡಿದ್ದರು. ವಿಡಿಯೋ ಬಳಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಾಯಿಂಡೆ ಮೋನೆ ಪೊಲೀಸೇ, ಪೋಡ ಪುಲ್ಲೆ ಪೊಲೀಸೇ ಎಂದು ಬ್ಯಾರಿ ಭಾಷೆಯಲ್ಲಿ ನಿಂದಿಸಿದ್ದರು. ಅಲ್ಲದೆ, ಕಣ್ಣೂರಿನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬಂದಿ ಸಂಗನ ಗೌಡ ಮೈಮೇಲೆ ಹಾಯಿಸುವಂತೆ ಬೈಕ್ ಸವಾರಿ ಮಾಡಿದ್ದರು. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಶಶಿಕುಮಾರ್, ಆರೋಪಿಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ವಶಕ್ಕೆ ಪಡೆಯಲಾಗಿದೆ. ಆರೋಪಿ ನೌಶಾದ್ ಬೆಂಗಳೂರಿನಲ್ಲಿ ಬೇಕರಿಯಲ್ಲಿ ಕೆಲಸ ಮಾಡ್ತಿದ್ದ. ಹೈದರಾಲಿ ಮೈಸೂರಿನಲ್ಲಿ ಜ್ಯೂಸ್ ಸೆಂಟರ್ ನಲ್ಲಿ ಕೆಲಸ ಮಾಡ್ತಿದ್ದ. ನೌಶಾದ್ ಬಂಧನಕ್ಕಾಗಿ ಪೊಲೀಸರು ತೆರಳಿದಾಗ ತಪ್ಪಿಸಲು ಯತ್ನಿಸಿದ್ದು ಕಂಕನಾಡಿ ಪಿಎಸ್ಐ ಕೃಷ್ಣ ಅವರನ್ನು ತಳ್ಳಿದ್ದು, ಸಿಬ್ಬಂದಿಗೆ ಗಾಯವಾಗಿದೆ. ಈ ಕುರಿತು ಬೆಂಗಳೂರಿನ ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ. ಪೊಲೀಸರನ್ನು ತಳ್ಳಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮೊಹಮ್ಮದ್ ಯಾಸೀನ್, ಅಫ್ರೀದ್, ತುಫೈಲ್ ಎಂಬವರ ವಿರುದ್ಧ ಮಡಿವಾಳ ಠಾಣೆಯಲ್ಲಿ ಕೇಸು ದಾಖಲಾಗಿದೆ. ಘಟನೆಯಲ್ಲಿ ನೇರ ಭಾಗಿಯಾದ ಇತರ ಒಂಬತ್ತು ಜನರ ಬಂಧನ ಆಗಬೇಕಾಗಿದೆ. ಅವರೆಲ್ಲರ ಬಗ್ಗೆ ಮಾಹಿತಿ ಸಿಕ್ಕಿದ್ದು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಕೇಸು ದಾಖಲಾದರೆ ಬಿಡಿಸಿ ತರುತ್ತೇವೆ ಎಂದಿದ್ರಂತೆ !
ವಿಚಾರಣೆ ವೇಳೆ ಇತ್ತೀಚೆಗೆ ಕೇರಳದ ಆಲುಪ್ಪುಳದಲ್ಲಿ ನಡೆದ ಎಸ್ಡಿಪಿಐ ಸಮಾವೇಶದಲ್ಲಿ ಪೊಲೀಸರು ಮತ್ತು ಆಡಳಿತದ ವಿರುದ್ಧ ಘೋಷಣೆ ಕೂಗಿದ್ದ ವಿಡಿಯೋ ವೈರಲ್ ಆಗಿದ್ದು ಅದನ್ನು ನೋಡಿ ಪ್ರೇರಣೆಗೊಂಡಿದ್ದೆವು. ಅದೇ ಪ್ರೇರಣೆಯಿಂದ ಪೊಲೀಸರ ವಿರುದ್ಧ ಘೋಷಣೆ ಕೂಗಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ. ಅಲ್ಲದೆ, ಕಣ್ಣೂರಿನಲ್ಲಿ ಎಸ್ಡಿಪಿಐ ಸಮಾವೇಶ ಯಶಸ್ವಿಯಾಗಬೇಕು, ಅದಕ್ಕಾಗಿ ದಾರಿಯುದ್ದಕ್ಕೂ ಪೊಲೀಸರು ಮತ್ತು ಸಂಘಟನೆಗಳ ವಿರುದ್ಧ ಘೋಷಣೆ ಕೂಗಬೇಕು. ಕೇಸು ದಾಖಲಾದರೆ ನಾವು ನೋಡಿಕೊಳ್ಳುತ್ತೇವೆ. ನಿಮ್ಮನ್ನು ಬಿಡಿಸಿ ತರುವ ಜವಾಬ್ದಾರಿ ನಮ್ಮದು ಎಂದು ನಾಯಕರು ಧೈರ್ಯ ತುಂಬಿದ್ದಾಗಿ ಪೊಲೀಸರಲ್ಲಿ ತಿಳಿಸಿದ್ದಾರೆ.
Nine people were arrested regarding the incident where police personnel were abused. The incident had taken place on May 27 when a gang of youths were on their way to take part in an event organised by the SDPI. The video of the youths abusing cops had gone viral on the social media. In this regard, a complaint was filed at Kankanady police station on May 28. Two persons who were on the two wheeler abusing cops were arrested from Bengaluru and Mysuru. They are identified as Naushad (28) who works in a bakery in Bengaluru and Hyder Ali (27) who works in a juice centre in Mysuru. Both are residents of Inoli.
03-05-25 09:38 pm
HK News Desk
Shivanand Patil, U T Khader: ಯತ್ನಾಳ್ ಸವಾಲು ಸ್...
02-05-25 10:00 pm
U T Khader, Suhas Shetty Murder, Fazil, Manga...
02-05-25 08:44 pm
Suhas Shetty Murder case, Minister Parameshwa...
02-05-25 01:40 pm
Dinesh Gundu Rao, Suhas Shetty Murder: ಸುಹಾಸ್...
02-05-25 10:52 am
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
03-05-25 10:57 pm
Mangalore Correspondent
ಬಜರಂಗಿ ಸುಹಾಸ್ ಶೆಟ್ಟಿ ಹತ್ಯೆಗೆ ಕಳಸದವರು ಬಂದಿದ್ದೇ...
03-05-25 10:43 pm
U T Khader, Satish Kumapla, Mangalore, Suhas,...
03-05-25 10:13 pm
Mangalore, Stabbing, Suhas Shetty Murder, Arr...
03-05-25 08:39 pm
Mangalore, Animal Welfare: ಪ್ರಾಣಿ ಸಂರಕ್ಷಣೆ ಜಾ...
03-05-25 06:57 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm