ಬ್ರೇಕಿಂಗ್ ನ್ಯೂಸ್
11-07-23 04:18 pm Source: News18 Kannada ಸಿನಿಮಾ
ಸುದೀಪ್ ಹಾಗೂ ನಿರ್ಮಾಪಕರ ವಿವಾದದ ಬಗ್ಗೆ ಮಾತಾಡಿದ ಭಾಮಾ ಹರೀಶ್, ನಟ ಸುದೀಪ್ ಅವರು ಕಾನೂನಾತ್ಮಕ ಹೋರಾಟ ಮಾಡ್ತಿನಿ ಎಂದು ಹೇಳಿದ್ದಾರೆ. ನಿನ್ನೆ ಸುದೀಪ್ ಪತ್ರ ಬರೆದಿದ್ದಾರೆ. ಈಗ ಅಭಿಮಾನಿಗಳು ಮನವಿ ಪತ್ರ ಕೊಟ್ಟಿದ್ದಾರೆ. ಅನೇಕ ಹೆಸರನ್ನು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಪತ್ರದ ಮೂಲಕ ಸುದೀಪ್ ಸ್ಪಷ್ಟನೆ
ನಿರ್ಮಾಪಕರ ಆರೋಪಗಳಿಗೆ ಕೊನೆಗೂ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ವಾಣಿಜ್ಯ ಮಂಡಳಿ ಹಾಗೂ ನಿರ್ಮಾಪಕರ ಸಂಘಕ್ಕೆ ಸುದೀರ್ಘ ಪತ್ರ ಬರೆದ ನಟ ಸುದೀಪ್, ನಿರ್ಮಾಪಕರ ಆರೋಪಗಳಿಗೆ ಉತ್ತರ ನೀಡಿದ್ದಾರೆ. ನಿರ್ಮಾಪಕರ ಎಮ್ ಎನ್ ಕುಮಾರ್ ನನ್ನ ಮೇಲೆ ಅರೋಪ ಮಾಡಿದ್ದಾರೆ ನನ್ನ ಮೇಲೆ ಅರೋಪ ಮಾಡಲು ಅವರು ಬಂದಾಗ ನೀವು ಸರಿಯಾದ ದಾಖಲೆಗಳಿವೆಯ ಎಂದು ಪರೀಕ್ಷಿಸ ಮಾಡಬೇಕಿತ್ತು.
ನನಗೂ ಅನೇಕರಿಂದ ಮೋಸ ಆಗಿದೆ
ಈ ಹಿಂದೆ ಇತರರ ಮೇಲೆ ಇಂತಹ ಅರೋಪಗಳ ಬಂದಾಗ ದೂರುಗಳು ಬಂದಾಗ ದಾಖಲೆ ಪರಿಶೀಲನೆ ಆಗ್ತಿತ್ತು. ಅದರೆ ನನ್ನ ವಿಚಾರದಲ್ಲಿ ಈ ಕೆಲಸ ಆಗಿಲ್ಲ ಯಾಕೆ?, ಇಂಡಸ್ಟ್ರಿಯಲ್ಲಿ ಸಾಕಷ್ಟು ಮಂದಿ ನನಗೆ ಮೋಸ ಮಾಡಿದ್ದಾರೆ. ದಾಖಲೆಗಳಿಲ್ಲದ ಕಾರಣ ನಾನು ಸುಮ್ಮನೆ ಆಗಿದ್ದೇನೆ.
ಕುಮಾರ್ ಆತ್ಮಹತ್ಯೆ ಮಾಡಿಕೊಂಡ್ರೆ ನಾನು ಹೊಣೆ ಎಂದ್ರು
ಕುಮಾರ್ ಅವರ ವಿಚಾರದಲ್ಲೂ ನಾನು ಮಾನವೀಯತೆಯ ಆಧಾರದಲ್ಲಿ ನೆರವು ನೀಡಲು ನಿರ್ಧರಿಸಿದ್ದೆ. ಅದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಸುದ್ದಿಗೋಷ್ಠಿಯಲ್ಲಿ ಸುರೇಶ್ ಅವರು ಕುಮಾರ್ ಆತ್ಮಹತ್ಯೆ ಮಾಡಿಕೊಂಡ್ರೆ ನಾನು ಹೊಣೆ ಅಂದಿದ್ದಾರೆ. ಸುರೇಶ್ ಅವರ ಈ ಹೇಳಿಕೆ ನನಗೆ ತುಂಬಾ ನೋವುಂಟು ಮಾಡಿದೆ. ಸಮಾಜಕ್ಕೆ ಅಪಾಯಕಾರಿ ಸಂದೇಶ್ ನೀಡುವಂತಿದೆ. ಸುರೇಶ್ ಅವರಿಗೂ ನೋಟಿಸ್ ನೀಡಿದ್ದೇನೆ. ಯಾವಾಗ ಚಿತ್ರರಂಗದಲ್ಲಿ ಇಂತಹ ಕೆಟ್ಟ ಬೆಳವಣಿಗೆ ಶುರುವಾಯ್ತು. ಸುರೇಶ್ ಹೇಳಿಕೆ ಕಾರಣದಿಂದಾಗಿ ನಾನು ನೋಟಿಸ್ ಕಳಿಸಿದ್ದೇನೆ ಹೊರತು ಆಕ್ರೋಶದಿಂದ ಅಲ್ಲ.
ನನ್ನ ಮೇಲೆ ಒಂದೇ ಒಂದು ಕಪ್ಪು ಚುಕ್ಕಿ ಇಲ್ಲ
27 ವರ್ಷಗಳಿಂದ ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದೇನೆ. 45 ಸಿನಿಮಾಗಳಲ್ಲಿ ನಾಯಕ ನಟನಾಗಿದ್ದೇನೆ. ಎಂದಿಗೂ ಕಪ್ಪು ಚುಕ್ಕೆ ಬರುವಂತಹ ಒಂದೇ ಒಂದು ಕೆಲಸ ಮಾಡಿಲ್ಲ. ನನಗೆ ಕೆಲವೊಮ್ಮೆ ಮೋಸವಾಗಿದೆ. ಅನೇಕ ನಿರ್ಮಾಪಕರು ನನಗೆ ಇನ್ನು ಕೂಡ ಕೊಡಬೇಕಾದ ಹಣ ನೀಡಿಲ್ಲ. ನಾನು ಎಂದಿಗೂ ವಾಣಿಜ್ಯ ಮಂಡಳಿ ಮೆಟ್ಟಿಲು ಹತ್ತಿಲ್ಲ. ನಿಮ್ಮ ಪ್ರೀತಿಯ ಸುದೀಪ್ ಒಳ್ಳೆಯ ತನಕ್ಕೆ ಹೆಸರಾಗಿದ್ದಾನೆ ಹೊರತು ಕೆಟ್ಟತನಕ್ಕೆ ಅಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ.
ನನ್ನ ಮೇಲೆ ಒತ್ತಡ ಹಾಕ್ಬೇಡಿ- ಸುದೀಪ್
ದಯವಿಟ್ಟು ಈ ವಿಚಾರದಲ್ಲಿ ನನ್ನ ಮೇಲೆ ಒತ್ತಡ ಹಾಕದೆ ನ್ಯಾಯಾಲಯದಲ್ಲೇ ಬಗೆಹರಿಸಿಕೊಳ್ಳಿ ಎಂದು ಸುದೀಪ್ ಪತ್ರದಲ್ಲಿ ಬರೆದಿದ್ದಾರೆ. ನಾನೇನಾದ್ರೂ ತಪ್ಪು ಮಾಡಿದ್ರೆ ನ್ಯಾಯಾಲಯದಲ್ಲೇ ಶಿರಬಾಗಿ ತಪ್ಪು ಒಪ್ಪಿಕೊಂಡು ದಂಡ ಕಟ್ಟುತ್ತೇನೆ. ನಾನು ಸರಿಯಾಗಿಯೇ ಇದ್ದೇನೆ. ನ್ಯಾಯ, ಸತ್ಯ ಯಾವುದು ಎಂದು ತಿಳಿಸಲು ಕೊಂಚ ಸಮಯ ಬೇಕಿದೆ ಎಂದು ಸುದೀಪ್ ಪತ್ರದಲ್ಲಿ ಬರೆದಿದ್ದಾರೆ.
Complaint from Actor Sudeep Fans Against the Producers.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm