ಬ್ರೇಕಿಂಗ್ ನ್ಯೂಸ್
16-06-23 01:25 pm Source: Vijayakarnataka ಸಿನಿಮಾ
ನಟ: ಪ್ರಭಾಸ್,ಸೈಫ್ ಅಲಿ ಖಾನ್,ಕೃತಿ ಸನೋನ್,ಸನ್ನಿ ಸಿಂಗ್,ದೇವದತ್ತ ನಾಗೆ
ನಿರ್ದೇಶಕ : ಓಂ ರಾವುತ್
ಚಿತ್ರದ ವಿಧ: Hindi, Telugu, Kannada, Tamil, Malayalam, Mythological, Action, Drama
ಅವಧಿ: 2 Hrs 59 Min
'ತಾನಾಜೀ' ಸಿನಿಮಾದ ನಂತರ ನಿರ್ದೇಶಕ ಓಂ ರಾವುತ್ ಅವರು 'ಆದಿಪುರುಷ್' ಕೈಗೆತ್ತಿಕೊಂಡಿದ್ದರು. ಪ್ರಭಾಸ್ ಈ ಸಿನಿಮಾದ ಹೀರೋ ಎಂದಾಗ ಸೃಷ್ಟಿಯಾದ ಅಂತಿಂಥದ್ದಲ್ಲ! ರಾಮಾಯಣದ ಕಥೆಯನ್ನು ಈಗಿನ ಅಧುನಿಕ ತಂತ್ರಜ್ಞಾನ ಬಳಸಿ ಹೊಸ ರೀತಿಯಲ್ಲಿ ತೋರಿಸುವುದು ಓಂ ರಾವುತ್ ಉದ್ದೇಶ. ಸದ್ಯ ವಿಶ್ವಾದ್ಯಂತ 'ಆದಿಪುರುಷ್' ತೆರೆಕಂಡಿದೆ. ಟೀಸರ್ ನೋಡಿದಾಗ ಒಂದಷ್ಟು ಮಂದಿ ಭಾರಿ ನೆಗೆಟಿವ್ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಸಿನಿಮಾ ರಿಲೀಸ್ ಆಗಿದ್ದು, ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ 'ಆದಿಪುರುಷ್' ಸಿನಿಮಾ ಮೂಡಿಬಂದಿದೆಯಾ?
ಇದು ರಾಮಾಯಣದ ಕಥೆ:
ನಾವೆಲ್ಲರೂ ಈಗಾಗಲೇ ಅನೇಕ ಸಿನಿಮಾಗಳು ಮತ್ತು ಧಾರಾವಾಹಿ ರೂಪದಲ್ಲಿ ರಾಮಾಯಣದ ಕಥೆಯನ್ನು ನೋಡಿದ್ದೇವೆ. ರಾಮಾಯಣ ಮಹಾಕಾವ್ಯದ ಜೊತೆಗೆ ಭಾರತೀಯರಿಗೆ ವಿಶೇಷ ನಂಟು ಇದೆ. 'ಆದಿಪುರುಷ್' ಸಿನಿಮಾದಲ್ಲೂ ರಾಮಾಯಣದ ಕಥೆಯನ್ನೇ ಹೇಳಲಾಗಿದೆ. ಸಿನಿಮಾ ಆರಂಭವಾಗುವ ವೇಳೆಗೆ ರಾಘವ (ಪ್ರಭಾಸ್) ತನ್ನ ತಂದೆ ದಶರಥನಿಗೆ ನೀಡಿದ ಮಾತಿನಂತೆ ಪತ್ನಿ ಜಾನಕಿ (ಕೃತಿ ಸನೋನ್) ಹಾಗೂ ಸಹೋದರ ಲಕ್ಷ್ಮಣನ (ಸನ್ನಿ ಸಿಂಗ್) ಜೊತೆಗೆ ವನವಾಸಕ್ಕೆ ತೆರಳುತ್ತಾನೆ. ನಂತರ ರಾವಣ (ಸೈಫ್ ಅಲಿ ಖಾನ್) ಸನ್ಯಾಸಿ ರೂಪದಲ್ಲಿ ಬಂದು ಜಾನಕಿಯನ್ನು ಅಪಹರಿಸುತ್ತಾನೆ. ಸೀತೆಯನ್ನು ಹುಡುಕುತ್ತ ರಾಮ ಮತ್ತು ಲಕ್ಷ್ಮಣ ಲಂಕೆಗೆ ಆಗಮಿಸುತ್ತಾರೆ. ಇವರೊಂದಿಗೆ ಹನುಮಂತ ಕೂಡ ತನ್ನ ವಾನರ ಸೇನೆಯೊಂದಿಗೆ ರಾಮನ ಜತೆಯಾಗುತ್ತಾನೆ. ನಂತರ ರಾವಣನ ಅಂತ್ಯವಾಗುತ್ತದೆ. ಸೀತೆಯ ಜತೆಗೆ ರಾಮ ಅಯೋಧ್ಯೆಗೆ ಮರಳುತ್ತಾನೆ. ಎಲ್ಲರಿಗೂ ಗೊತ್ತಿರುವ ಈ ಕಥೆಯನ್ನೇ 'ಆದಿಪುರುಷ್' ಸಿನಿಮಾದಲ್ಲೂ ಹೇಳಲಾಗಿದೆ.
ಆಧುನಿಕ ತಂತ್ರಜ್ಞಾನದ ಬಳಕೆ:
ಹೀಗೆ ಎಲ್ಲರಿಗೂ ಗೊತ್ತಿರುವ ಕಥೆಯನ್ನೇ ಹೇಳುವಾಗ, ಹೊಸತೇನಾದರೂ ಹೇಳುವ ಪ್ರಯತ್ನ ಮಾಡಬೇಕು, ಅದಕ್ಕೊಂದು ಹೊಸ ಆಯಾಮ, ಹೊಸ ರೂಪದ ಅವಶ್ಯಕತೆ ಇರಬೇಕು. ಅದಕ್ಕಾಗಿ ನಿರ್ದೇಶಕರು ವಿಎಫ್ಎಕ್ಸ್ನ ಮೊರೆ ಹೋಗಿದ್ದಾರೆ. ಈವರೆಗೂ ನೋಡಿರುವ ರಾಮಾಯಣ ಕುರಿತ ಸಿನಿಮಾಗಳಲ್ಲಿನ ಯಾವ ಛಾಯೆಯೂ ಇಲ್ಲಿಲ್ಲ. ಸಂಪೂರ್ಣ ಆಧುನಿಕ ತಂತ್ರಜ್ಞಾನವನ್ನೇ ನೆಚ್ಚಿಕೊಂಡಿದ್ದಾರೆ ನಿರ್ದೇಶಕ ಓಂ ರಾವುತ್. ಭಾರಿ ವಿಎಫ್ಎಕ್ಸ್ ಬಳಕೆ ಮಾಡಿ, ಹೊಸ ರೂಪದಲ್ಲಿ ಕಥೆಯನ್ನು ಹೇಳಿದ್ದಾರೆ. ಕೆಲವೊಂದು ಸಾಹಸ ದೃಶ್ಯಗಳು ಹಾಲಿವುಡ್ ಸಿನಿಮಾಗಳ ಆ್ಯಕ್ಷನ್ ದೃಶ್ಯಗಳನ್ನೂ ಮೀರಿಸುವಂತೆ ಇವೆ. ಮತ್ತೆ ಕೆಲವು ವಿಡಿಯೋ ಗೇಮ್ನಂತೆ ಮೂಡಿಬಂದಿವೆ.
ಸೀತೆಯನ್ನು ಅಪಹರಣ ಮಾಡುವ ದೃಶ್ಯಗಳು ಅದ್ಭುತವಾಗಿವೆ ಮತ್ತು ಜಟಾಯು ಹಾಗೂ ರಾವಣನ ನಡುವಿನ ಕಾಳಗ, ರಾಮ ಮತ್ತು ರಾವಣನ ನಡುವಿನ ಕ್ಲೈಮ್ಯಾಕ್ಸ್ಗೆ ರೋಮಾಂಚನಕಾರಿಯಾಗಿದೆ. ರಾಮ ಮತ್ತು ಹನುಮಂತ ಭೇಟಿಯಾಗುವ ದೃಶ್ಯಗಳು 'ವಾವ್' ಎನಿಸುವಂತೆ ಇವೆ. ಸಿನಿಮಾದ ಕೆಲವು ಭಾಗಗಳಲ್ಲಿ ಮೇಲುಗೈ ಸಾಧಿಸಿರುವ ವಿಎಫ್ಎಕ್ಸ್, ಮತ್ತೆ ಕೆಲವು ಕಡೆ ಕಳಪೆ ಎನಿಸುತ್ತದೆ! ಸೈಫ್ ಅಲಿ ಖಾನ್ ಅವರ ಲುಕ್ ಮತ್ತು ಅವರ ಹತ್ತು ತಲೆಗಳನ್ನು ತೋರಿಸಲು ಬಳಸಿರುವ ವಿಎಫ್ಎಕ್ಸ್ ಬೇಸರ ಮೂಡಿಸುತ್ತದೆ. ಆರಂಭದಲ್ಲಿ ವಿಚಿತ್ರ ಪ್ರಾಣಿಗಳ ಜೊತೆಗೆ ಪ್ರಭಾಸ್ ಫೈಟ್ ಮಾಡುವ ದೃಶ್ಯ ಏಕೆ ಬರುತ್ತದೆ ಎಂಬುದಕ್ಕೆ ನಿಖರ ಕಾರಣವಿಲ್ಲ. ಅಲ್ಲದೆ, ಕೆಲವು ಸೀನ್ಗಳಲ್ಲಿ ಪ್ರಭಾಸ್ ಅವರ ಲುಕ್ ಬಗ್ಗೆಯೂ ಗಮನ ನೀಡಲಾಗಿಲ್ಲ. ಸಿನಿಮಾದ ಅವಧಿ ದೀರ್ಘವಾಗಿರುವುದು 'ಆದಿಪುರುಷ್'ನ ಮತ್ತೊಂದು ಹಿನ್ನಡೆ. ಕಥೆಯ ಆಳಕ್ಕಿಳಿಯದೇ ಕೇವಲ ವಿಎಫ್ಎಕ್ಸ್ ಮೇಲೆಯೇ ಓಂ ರಾವುತ್ ಜಾಸ್ತಿ ಗಮನಹರಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.
ಪ್ರಭಾಸ್ & ಸೈಫ್ ಹೈಲೈಟ್:
ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್ ಮಿಂಚಿದ್ದಾರೆ. ಅಂಡರ್ ವಾಟರ್ ಸೀನ್ನಿಂದ ಅವರ ಪಾತ್ರಕ್ಕೆ ಎಂಟ್ರಿ ನೀಡಲಾಗಿದ್ದು, ಆರಂಭದಿಂದಲೇ ಚಿತ್ರದ ಮೇಲೆ ತಮ್ಮ ಹಿಡಿತ ಸಾಧಿಸುತ್ತ, ಸಿನಿಮಾವನ್ನು ಆವರಿಸಿಕೊಳ್ಳುತ್ತ ಸಾಗುತ್ತಾರೆ ಪ್ರಭಾಸ್. ಅವರು ತೆರೆಮೇಲೆ ಕಾಣಿಸಿಕೊಂಡಾಗೆಲ್ಲ ಅಭಿಮಾನಿಗಳಿಗೆ ಹಬ್ಬವೇ ಸರಿ. ಕೆಲ ದೃಶ್ಯಗಳಲ್ಲಿನ ಅವರ ಲುಕ್ ಬಗ್ಗೆ ಮಾತ್ರ ಕೊಂಚ ನಿರಾಸೆ ಉಂಟಾಗುತ್ತದೆ. ಇನ್ನು, ಸೈಫ್ ಅಲಿ ಖಾನ್ ಅವರು ಹೊಸ ಮಾದರಿಯ ರಾವಣನ ಲುಕ್ನಲ್ಲಿ ಸಖತ್ ಆಗಿಯೇ ನಟಿಸಿದ್ದಾರೆ. ರಾವಣನೇ ತಾವಾಗಿ ಪಾತ್ರವನ್ನು ಜೀವಿಸಿದ್ದಾರೆ. ಇದರ ಮಧ್ಯೆ ಸಖತ್ ಹೈಲೈಟ್ ಆಗಿರುವುದು ಹನುಮಂತನ ಪಾತ್ರ ಮಾಡಿರುವ ದೇವದತ್ತ ನಾಗೆ. ಹನುಮಂತನ ದೃಶ್ಯಗಳು ಬಂದಾಗೆಲ್ಲ ಪ್ರೇಕ್ಷಕರಿಂದ ಜೋರು ಶಿಳ್ಳೆ, ಚಪ್ಪಾಳೆ ಖಚಿತ. ಜಾನಕಿ ಪಾತ್ರವನ್ನು ಕೃತಿ ಸನೋನ್ ಸೂಕ್ತವಾಗಿ ನಿಭಾಯಿಸಿದ್ದಾರೆ. ಲಕ್ಷ್ಮಣನಾಗಿ ಸನ್ನಿ ಸಿಂಗ್ ಇಷ್ಟವಾಗುತ್ತಾರೆ.
ಟೆಕ್ನಿಕಲ್ ಟೀಮ್ ಸಿನಿಮಾದ ಜೀವಾಳ:
'ಆದಿಪುರುಷ್' ಚಿತ್ರಕ್ಕಾಗಿ ಹೊಸ ಲೋಕವನ್ನೇ ಸೃಷ್ಟಿ ಮಾಡುವಲ್ಲಿ ಛಾಯಾಗ್ರಾಹಕ ಕಾರ್ತಿಕ್ ಪಳನಿ, ಕಲಾ ನಿರ್ದೇಶಕ ಸಾಗರ್ ಮಲಿ ಹಾಗೂ ವಿಎಫ್ಎಕ್ಸ್ ತಂಡದ ಶ್ರಮ ಜಾಸ್ತಿ ಇದೆ. ಸಿನಿಮಾಕ್ಕೆ ಅತ್ಯುತ್ತಮ ಹಿನ್ನೆಲೆ ಸಂಗೀತವನ್ನು ನೀಡಿರುವ ಸಂಚಿತ್-ಅಂಕಿತ್ ಅವರಿಗೂ ಮೆಚ್ಚುಗೆ ಸಲ್ಲಬೇಕು. ಅಜಯ್- ಅತುಲ್ ಸಂಗೀತ ಸಂಯೋಜನೆಯ 'ಜೈ ಶ್ರೀರಾಮ್ ಜೈ ಶ್ರೀರಾಮ್ ರಾಜರಾಮ್..' ಹಾಡು ಗುನುಗಿಸಿಕೊಳ್ಳುತ್ತದೆ. ಚಿತ್ರಕ್ಕೆ ಮಿತಿಯಿಲ್ಲದೆ (500 ಕೋಟಿ ರೂ.) ನಿರ್ಮಾಪಕರು ಹಣ ಸುರಿದಿದ್ದಾರೆ. ತಾಂತ್ರಿಕವಾಗಿಯೂ ತಂಡ ಶ್ರೀಮಂತವಾಗಿದೆ. ಇಷ್ಟೆಲ್ಲ ಇರುವಾಗ ನಿರ್ದೇಶಕ ಓಂ ರಾವುತ್ ಸ್ಕ್ರಿಪ್ಟ್ ವಿಚಾರದಲ್ಲಿ ಇನ್ನಷ್ಟು ಅಗತ್ಯ ತಯಾರಿ ಮಾಡಿಕೊಂಡಿದಿದ್ದರೆ, 'ಆದಿಪುರುಷ್' ಹೊಸ ರೀತಿಯಲ್ಲಿ ಮೋಡಿ ಮಾಡುವ ಸಾಧ್ಯತೆಗಳಿದ್ದವು.
Prabhas Kriti sanon starrer adipurush movie review rating in Kannada.
17-09-25 06:02 pm
Bangalore Correspondent
Sadananda Gowda, Cyber Fraud: ಮಾಜಿ ಸಿಎಂ ಡಿವಿಎ...
17-09-25 05:45 pm
Lokayukta, Dinesh Gundu Rao: ಜಮೀರ್ ಅಹ್ಮದ್ ಅಕ್...
16-09-25 11:00 pm
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
17-09-25 11:05 pm
Mangalore Correspondent
Mahesh Shetty Timarodi, Arms, FIR: ಮಹೇಶ್ ಶೆಟ್...
17-09-25 10:37 pm
Poonja International Hotel, Prabhakar Poonja...
17-09-25 10:06 pm
Mangalore, Heart Attack, Puttur: ಕೊಣಾಜೆಕಲ್ಲು...
17-09-25 06:54 pm
Dharmasthala Case. Vittal Gowda: ಧರ್ಮಸ್ಥಳ ಕೇಸ...
17-09-25 03:19 pm
17-09-25 09:44 pm
HK News Desk
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm
Vijayapura Bank Robbery: ಮಹಾರಾಷ್ಟ್ರ ಗಡಿಭಾಗದ ವ...
16-09-25 10:40 pm