ಬ್ರೇಕಿಂಗ್ ನ್ಯೂಸ್
20-02-23 01:40 pm Source: News18 Kannada ಸಿನಿಮಾ
ಕನ್ನಡ ಚಿತ್ರರಂಗದ ಮಹಾನ್ ನಿರ್ದೇಶಕ ಭಗವಾನ್ (Director Bhagavan No More) ಅವರು ಇನ್ನಿಲ್ಲ. ಈ ಒಂದು ವಿಷಯ ತಿಳಿದ ಸಿನಿಮಾರಂಗ ಬೇಸರದಲ್ಲಿ ಇದೆ. ಕೆಲವರಿಗೆ ಇವರ ಅಗಲಿಕೆ ನೋವುತಂದಿದೆ. ಇನ್ನು ಕೆಲವರಿಗೆ ಇವರ ಅಗಲಿಕೆಯ ವಿಷಯ ತಡವಾಗಿಯೇ ತಿಳಿದಿದೆ. (Director Bhagavan) ಭಗವಾನ್ ಅವರು ಸಿನಿಮಾರಂಗಕ್ಕೆ ಕೊಟ್ಟ ಕೊಡುಗೆ ಅಷ್ಟಿಷ್ಟಲ್ಲ. ಅವರ ಸಿನಿಮಾ ಪ್ರೀತಿ ಅಪಾರವಾಗಿಯೇ ಇತ್ತು. ಸಿನಿಮಾಗಳನ್ನ (Bhagavan Movies) ತುಂಬಾನೆ ಪ್ರೀತಿಸುತ್ತಿದ್ದ ಭಗವಾನ್ ಅವರು, ಬಾಂಡ್ ಸಿನಿಮಾಗಳನ್ನ ಕನ್ನಡಕ್ಕೆ ತಂದ ಮೊದಲಿಗ ಅನ್ನುವ ಖ್ಯಾತಿನೂ ಇದೆ. ಭಗವಾನ್ ಅವರು ರಾಜ್ಕುಮಾರ್ ಫ್ಯಾಮಿಲಿಗೆ ತುಂಬಾ (Rajkumar Movie Director) ಆತ್ಮೀಯರು ಆಗಿದ್ದರು. ರಾಜಕುಮಾರ್ ಅವರ 50ಕ್ಕೂ ಹೆಚ್ಚು ಸಿನಿಮಾಗಳನ್ನ ನಿರ್ದೇಶನ ಮಾಡಿದ್ದರು. ಆ ಚಿತ್ರಗಳಲ್ಲಿ ಯಾರಿವನು ಚಿತ್ರವೂ ಕೂಡ ಒಂದು.
ಇದನ್ನ ನೆನಪಿಸಿಕೊಂಡ ಈ ಚಿತ್ರದ ನಾಯಕಿ ನಟಿ ಬಿ.ಸರೋಜಾ ದೇವಿ ಅವರ ಆ ದಿನಗಳನ್ನ ನೆನಪಿಸಿಕೊಂಡರು.
ಭಗವಾನ್ ಇನ್ನಿಲ್ಲ-ಅವರ ಕ್ಲಾಸಿಕ್ ಚಿತ್ರಗಳೇ ಇನ್ನೆಲ್ಲ!
ಭಗವಾನ್ ಅಂದ್ರೆ ಸಡನ್ ಆಗಿ ಯಾರಿಗೂ ತಿಳಿಯೋದಿಲ್ಲ. ದೊರೆ-ಭಗವಾನ್ ಅಂದ್ಮೇಲೆ ಅದು ಕಂಪ್ಲೀಟ್ ಆಗುತ್ತಿತ್ತು. ಸ್ನೇಹಿತರಾದ ದೊರೆ ಮತ್ತು ಭಗವಾನ್ ಒಟ್ಟಿಗೇನೆ ಸಿನಿಮಾ ಮಾಡಿದ್ದರು.
ದೊರೆ ಹೋದ್ಮೇಲೆ ಭಗವಾನ್ ಒಬ್ಬಂಟಿ ಆದರು, ಸಿನಿಮಾ ನಿರ್ದೇಶನದಿಂದಲೂ ದೂರವೇ ಆಗಿದ್ದರು. ಆದರೆ ಇವರು ಇಳಿವಯಸ್ಸಿನಲ್ಲೂ ಸಿನಿಮಾರಂಗದ ನಂಟು ಇಟ್ಟುಕೊಂಡಿದ್ದರು. ವಿನಯ್ ರಾಜ್ಕುಮಾರ್ ಅಭಿನಯದ ಚಿತ್ರದಲ್ಲೂ ಅಭಿನಯಿಸಿದ್ದರು.
ಕನ್ನಡ ಚಿತ್ರರಂಗ ಕಂಡ ಮಹಾನ್ ಡೈರೆಕ್ಟರ್ ಭಗವಾನ್
ಸಿನಿಮಾ ಬಗ್ಗೆ ತುಂಬಾನೇ ಪ್ರೀತಿ ಇಟ್ಟುಕೊಂಡಿದ್ದ ನಿರ್ದೇಶಕ ಭಗವಾನ್ ಅವರು, ಯಾರಿವನು ಸಿನಿಮಾವನ್ನ ಡೈರೆಕ್ಟ್ ಮಾಡಿದ್ದರು. ಡಾಕ್ಟರ್ ರಾಜ್ಕುಮಾರ್ ಮತ್ತು ಬಿ.ಸರೋಜಾ ದೇವಿ, ರೂಪಾ ದೇವಿ ಈ ಚಿತ್ರದಲ್ಲಿ ಅಭಿನಯಿಸಿದ್ದರು.
ಇದೇ ಚಿತ್ರದಲ್ಲಿಯೇ ಪುನೀತ್ ರಾಜ್ಕುಮಾರ್ ಅವರು ಅಭಿನಯಿಸಿದ್ದರು. ಇವರ ಈ ಚಿತ್ರವನ್ನ ದೊರೆ-ಭಗವಾನ್ ಒಟ್ಟಿಗೆ ನಿರ್ದೇಶನ ಮಾಡಿದ್ದರು. ಇವರ ನಿರ್ದೇಶನದ ಈ ಚಿತ್ರ 1984 ರಲ್ಲಿ ರಿಲೀಸ್ ಆಗಿತ್ತು. ಪುನೀತ್ ಮತ್ತು ಬಿ ಸರೋಜಾ ದೇವಿ ಅಭಿನಯಸಿದ್ದರು.
ಕನ್ನಡದ ಬಾಂಡ್ ಚಿತ್ರಗಳ ಡೈರೆಕ್ಟರ್ ಭಗವಾನ್ ಇನ್ನಿಲ್ಲ
ಆದರೆ ಈ ಚಿತ್ರದ ನಿರ್ದೇಶಕರಾದ ದೊರೆ ಕೂಡ ಇಲ್ಲ. ಭಗವಾನ್ ಅವರು 20.02.2023 ರಂದು ಬೆಳಗ್ಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರಿಂದ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಈ ವಿಷಯವನ್ನ ತಿಳಿದ ನಟಿ ಬಿ.ಸರೋಜಾ ದೇವಿ ಬೇಸರಪಟ್ಟುಕೊಂಡರು. ಭಗವಾನ್ ಅವರು ಒಳ್ಳೆ ನಿರ್ದೇಶಕರು. ಇವರು ಅತ್ತ್ಯತ್ತಮ ಸಿನಿಮಾಗಳನ್ನ ಕೊಟ್ಟಿದ್ದಾರೆ. ಕನ್ನಡ ಇಂಡಸ್ಟ್ರೀಯಲ್ಲಿ ಅವರು ಉತ್ತಮ ಚಿತ್ರಗಳನ್ನ ಕೊಟ್ಟಿರೋದು ಹೆಮ್ಮೆಯ ವಿಷಯವೇ ಆಗಿದೆ ಅಂತಲೇ ಹಿರಿಯ ನಟಿ ಬಿ.ಸರೋಜಾ ದೇವಿ ಹೇಳಿದರು.
ಭಗವಾನ್ ನಿರ್ದೇಶನದ ಯಾರಿವನು ಚಿತ್ರದಲ್ಲಿ ನಾನು ನಟಿಸಿದ್ದೇನೆ
ನಾನು ಮತ್ತು ಅಪ್ಪು ಇವರ ಯಾರಿವನು ಚಿತ್ರದಲ್ಲಿ ಅಭಿನಯಿಸಿದ್ದೇವೆ. ನಮ್ಮ ಈ ಚಿತ್ರವನ್ನ ಭಗವಾನ್ ತುಂಬಾ ಚೆನ್ನಾಗಿಯೇ ತೆಗೆದಿದ್ದರು. ಇವರ ಚಿತ್ರಗಳು ತುಂಬಾ ಚೆನ್ನಾಗಿಯೇ ಬಂದಿದ್ದವು.
ಒಬ್ಬ ನಿರ್ದೇಶಕ ಒಳ್ಳೆ ಸಿನಿಮಾ ತೆಗೆಯೋದೇ ಮುಖ್ಯವಾಗುತ್ತದೆ. ದೊರೆ-ಭಗವಾನ್ ಈ ವಿಷಯದಲ್ಲಿ ಗೆದ್ದಿದ್ದಾರೆ. ಇಂಡಸ್ಟ್ರೀಗೆ ತುಂಬಾ ಒಳ್ಳೆ ಒಳ್ಳೆಯ ಸಿನಿಮಾಗಳನ್ನೆ ಭಗವಾನ್ ಕೊಟ್ಟಿದ್ದಾರೆ ಅಂತ ಬಿ.ಸರೋಜಾ ದೇವಿ ತಿಳಿಸಿದರು.
ಭಗವಾನ್ ಡೈರೆಕ್ಟರ್ ಆಗಿ ವ್ಯಕ್ತಿಯಾಗಿ ತುಂಬಾ ಒಳ್ಳೆಯವರು, ಭಗವಾನ್ ಒಬ್ಬ ಡೈರೆಕ್ಟರ್ ಆಗಿ ಒಳ್ಳೆಯವರು, ಒಬ್ಬ ವ್ಯಕ್ತಿಯಾಗಿಯೂ ಭಗವಾನ್ ತುಂಬಾ ಒಳ್ಳೆಯವರು ಇಂತಹ ವ್ಯಕ್ತಿ ಈಗ ಇಲ್ಲ ಅನ್ನೋದೇ ಬೇಸರದ ಸಂಗತಿ ಆಗಿದೆ.
ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ, ಅವರನ್ನ ಕಳೆದುಕೊಂಡ ಅವರ ಕುಟುಂಬಕ್ಕೆ ಅದನ್ನ ಭರಿಸೋ ಶಕ್ತಿಯನ್ನ ದೇವರು ಕೊಡಲಿ ಅಂತ ನಟಿ ಬಿ.ಸರೋಜಾ ದೇವಿ ಕೇಳಿಕೊಂಡರು.
ನಾನು ಭಗವಾನ್ ಅವರ ಜೊತೆಗೆ ಒಂದೇ ಸಿನಿಮಾ ಮಾಡಿದ್ದೇನೆ!
ನಾನು ಭಗವಾನ್ ಅವರ ಜೊತೆಗೆ ಯಾರಿವನು ಸಿನಿಮಾ ಮಾತ್ರ ಮಾಡಿದ್ದೇನೆ. ಆದರೆ ನಾನು ಅಭಿನಯಿಸಿದ್ದ ಜಗಜ್ಯೋತಿ ಬಸವೇಶ್ವರ ಚಿತ್ರದಲ್ಲಿ ಭಗವಾನ್ ಅಸಿಸ್ಟಂಟ್ ಡೈರೆಕ್ಟರ್ ಆಗಿಯೇ ಇದ್ದರು. ಆದರೆ ಭಗವಾನ್ ಮತ್ತು ದೊರೆ ಸೇರಿ ಒಳ್ಳೆ ಚಿತ್ರಗಳನ್ನ ಕೊಟ್ಟಿದ್ದಾರೆ.
ಇವರ ನಿರ್ದೇಶನದಲ್ಲಿ ಕನ್ನಡಕ್ಕೆ ಒಳ್ಳೆ ಸಿನಿಮಾಗಳೇ ಬಂದಿವೆ. ಇದೇ ಅಲ್ಲವೇ ಒಬ್ಬ ನಿರ್ದೇಶಕರಿಂದ ನಾವು ನಿರೀಕ್ಷೆ ಮಾಡೋದು. ಆ ವಿಷಯದಲ್ಲಿ ಭಗವಾನ್ ಅತ್ಯುತ್ತಮ ಚಿತ್ರಗಳನ್ನ ಕೊಟ್ಟಿದ್ದಾರೆ ಎಂದು ಬಿ.ಸರೋಜಾ ದೇವಿ ಹೇಳಿದರು.
Kannada cinema's greatest director Bhagavan No More is no more. Knowing this one thing, the film industry is in a state of despair. For some, his passing away is painful said B Saroja Devi.
10-08-25 09:12 pm
HK News Desk
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
PM Modi, Operation Sindhoor: ಆಪರೇಶನ್ ಸಿಂಧೂರಕ್...
10-08-25 06:06 pm
ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ...
10-08-25 01:57 pm
ಗಿಟಾರಿಗೆ ಹೊದಿಕೆ ಹೊದಿಸಿ ಏಳನೇ ಕ್ಲಾಸ್ ಹುಡುಗನ ಸಾವ...
09-08-25 10:12 pm
09-08-25 11:09 pm
HK News Desk
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
10-08-25 04:32 pm
Udupi Correspondent
Six Arrested, Dharmasthala Incident, Kudla Ra...
10-08-25 02:26 pm
Dharmasthala, Janardhan Poojary, SIT Probe: ದ...
10-08-25 01:01 pm
Mangalore Dharmasthala Case: ಧರ್ಮಸ್ಥಳ ಕೇಸ್ ;...
10-08-25 12:37 pm
No Evidence, Bahubali Hill in Dharmasthala: ಬ...
09-08-25 10:53 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm