ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂಗ, 25 ವ್ಯಕ್ತಿಗಳ ಹೆಸರು ಉಲ್ಲೇಖ, ನಾಲ್ಕು ಸ್ಥಳಗಳಲ್ಲಿ ಸರಣಿ ಸ್ಫೋಟಕ್ಕೆ ಸಂಚು, ಕಾರು ಚಲಾಯಿಸಿದ್ದ ವ್ಯಕ್ತಿ ಡಾ.ಉಮರ್ ಡಿಎನ್ಎ ವರದಿಯಲ್ಲಿ ದೃಢ

13-11-25 08:41 pm       HK News Desk   ದೇಶ - ವಿದೇಶ

ಕೆಂಪು ಕೋಟೆ ಬಳಿ ಕಾರು ಸ್ಫೋಟ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಉಗ್ರರ ಡೈರಿಯನ್ನು ಪತ್ತೆ ಮಾಡಿದ್ದು, ಡೈರಿಯಲ್ಲಿ ಸ್ಫೋಟಕ ಮಾಹಿತಿಗಳು ಬಹಿರಂಗಗೊಂಡಿವೆ.

ನವದೆಹಲಿ, ನ.13 : ಕೆಂಪು ಕೋಟೆ ಬಳಿ ಕಾರು ಸ್ಫೋಟ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಉಗ್ರರ ಡೈರಿಯನ್ನು ಪತ್ತೆ ಮಾಡಿದ್ದು, ಡೈರಿಯಲ್ಲಿ ಸ್ಫೋಟಕ ಮಾಹಿತಿಗಳು ಬಹಿರಂಗಗೊಂಡಿವೆ.

ಉಗ್ರ ಮುಜಾಮಿಲ್ ಹಾಗೂ ಆತ್ಮಾಹುತಿ ಉಗ್ರ ಉಮರ್'ಗೆ ಸೇರಿದ್ದ ಡೈರಿ ಇದಾಗಿದ್ದು, ಡೈರಿಯಲ್ಲಿ ಉಗ್ರರ ಷಡ್ಯಂತ್ರ ಹಾಗೂ ಹಲವು ಕೋಡ್ ವರ್ಡ್ ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಡೈರಿಯಲ್ಲಿ ಹಲವು ಬಾರಿ ಆಪರೇಷನ್ ಪದವನ್ನು ಉಗ್ರರು ಬಳಕೆ ಮಾಡಿದ್ದು, ಉಕಾಸ (ಅರೇಬಿಕ್ ಭಾಷೆಯಲ್ಲಿ ಉಕಾಸ ಎಂದರೆ ಜೇಡ ಎಂದು ಅರ್ಥ) ಎಂಬ ಹ್ಯಾಂಡ್ಲರ್ ಹೆಸರು ಕೂಡ ಡೈರಿಯಲ್ಲಿ ಉಲ್ಲೇಖವಾಗಿದೆ. ಇದಲ್ಲದೆ, 25 ವ್ಯಕ್ತಿಗಳ ಹೆಸರಿದ್ದು, ಇವರಲ್ಲಿ ಹೆಚ್ಚಿನವರು ಜಮ್ಮು ಮತ್ತು ಕಾಶ್ಮೀರ ಹಾಗೂ ಫರೀದಾಬಾದ್ ಮೂಲದವರಾಗಿದ್ದಾರೆಂದು ಮೂಲಗಳು ತಿಳಿಸಿವೆ.

Delhi 'serial-blast' plot uncovered! 4-city plan, multiple IEDs, 32  vehicles and coded diary — 8 major revelations | Today News

Delhi car blast: What we know about Building 17, Room 13 of Al Falah  University — how it links multiple suspects | India News - The Times of  India

Delhi blast: Dr Umar Mohammad of Faridabad terror module was driving car,  say sources | India News – India TV

ಈ ಡೈರಿಗಳನ್ನ ಡಾ.ಉಮರ್ ಅವರ ಕೊಠಡಿ ಸಂಖ್ಯೆ ನಾಲ್ಕು ಮತ್ತು ಮುಜಮ್ಮಿಲ್ ಅವರ ಕೊಠಡಿ ಸಂಖ್ಯೆ 13ರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಇದರ ಪ್ರಕಾರ, ಎಂಟು ಮಂದಿ ಉಗ್ರರು ನಾಲ್ಕು ಸ್ಥಳಗಳಲ್ಲಿ ಸರಣಿ ದಾಳಿ ನಡೆಸಲು ಯೋಜನೆ ರೂಪಿಸಿದ್ದು, ಪ್ರತೀ ಸ್ಥಳಕ್ಕೆ ತಲಾ ಇಬ್ಬರು ಉಗ್ರರನ್ನು ರವಾನಿಸಲು ಸಂಚು ರೂಪಿಸಿದ್ದರು ಎನ್ನಲಾಗಿದೆ.

ಕಾರು ಚಲಾಯಿಸಿದ್ದ ವ್ಯಕ್ತಿ ಡಾ. ಉಮರ್ ದೃಢ 

ಈ ನಡುವೆ, ಸ್ಫೋಟ ಘಟನೆ ವೇಳೆ ಹುಂಡೈ ಐ20 ಕಾರನ್ನು ಚಲಾಯಿಸುತ್ತಿದ್ದ ಎನ್ನಲಾಗಿದ್ದ ವ್ಯಕ್ತಿ ಪುಲ್ವಾಮಾ ಜಿಲ್ಲೆಯ ಮೂಲದ ಡಾ. ಉಮರ್ ಉನ್ ನಬಿ ಎನ್ನುವುದು ವಿಧಿವಿಜ್ಞಾನ ಪರೀಕ್ಷೆಯಿಂದ ಬಹಿರಂಗಗೊಂಡಿದೆ. ಉಮರ್ ಅವರ ತಾಯಿಯ ಡಿಎನ್ಎ ಮಾದರಿಗಳು, ಸ್ಫೋಟದ ಸ್ಥಳದಿಂದ ವಶಪಡಿಸಿಕೊಂಡ ಮೂಳೆಗಳು ಮತ್ತು ಹಲ್ಲುಗಳಿಂದ ಹೊರತೆಗೆಯಲಾದ ಡಿಎನ್ಎ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು ಹೋಲಿಕೆಯಿಂದ ದೃಢಪಟ್ಟಿದೆ.

ಕಾರನ್ನು ಚಲಾಯಿಸಿದ ವ್ಯಕ್ತಿ ಉಮರ್‌ ಎಂದು ತನಿಖಾಧಿಕಾರಿಗಳು ಈ ಮೊದಲೇ ಶಂಕಿಸಿದ್ದರು. ಹೀಗಿದ್ದರೂ ಮೃತ ವ್ಯಕ್ತಿ ಉಮರ್‌ ಎನ್ನುವುದಕ್ಕೆ ವೈಜ್ಞಾನಿಕವಾಗಿ ಸಾಬೀತುಪಡಿಸುವ ಅಗತ್ಯವಿತ್ತು. ಹೀಗಾಗಿ ಉಮರ್‌ ಕುಟುಂಬಸ್ಥರ ಡಿಎನ್‌ಎ ಸಂಗ್ರಹಿಸಿ ಹೋಲಿಕೆ ಮಾಡಲಾಗಿದೆ.

In a major breakthrough in the Red Fort car explosion case, the National Investigation Agency (NIA) has recovered diaries belonging to the two terrorists involved — Dr. Umar and Mujammil. The diaries contain highly sensitive information, coded entries, and details of a wider terror network.