ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊನೆಗೂ ಆರೆಸ್ಸೆಸ್ ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ ; ನ.16ರಂದು ದಿನ ನಿಗದಿ, 300 ಕಾರ್ಯಕರ್ತರಿಗೆ ಸೀಮಿತ, ಹೊರಗಿನವರಿಗೆ ಅವಕಾಶ ಇಲ್ಲ! 

13-11-25 08:33 pm       HK News Desk   ಕರ್ನಾಟಕ

ಆರ್‌ಎಸ್‌ಎಸ್ ನೂರನೇ ವರ್ಷದ ನಿಮಿತ್ತ ಚಿತ್ತಾಪುರದಲ್ಲಿ ಆಯೋಜಿಸಿದ್ದ ಪಥ ಸಂಚಲನಕ್ಕೆ ಕೊನೆಗೂ ಹೈಕೋರ್ಟ್ ಅನುಮತಿ ನೀಡಿದೆ. ರಾಜ್ಯ ಸರ್ಕಾರದ ಕೋರಿಕೆಯಂತೆ ನವೆಂಬರ್ 16ರಂದು 300 ಗಣ ವೇಷಧಾರಿಗಳು ಹಾಗೂ 50 ಜನರ ಬ್ಯಾಂಡ್ ನೊಂದಿಗೆ ಪಥಸಂಚಲನಕ್ಕೆ ಅನುಮತಿ ನೀಡಿ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠ ತೀರ್ಪು ನೀಡಿದೆ. 

ಕಲಬುರಗಿ, ನ.13 : ಆರ್‌ಎಸ್‌ಎಸ್ ನೂರನೇ ವರ್ಷದ ನಿಮಿತ್ತ ಚಿತ್ತಾಪುರದಲ್ಲಿ ಆಯೋಜಿಸಿದ್ದ ಪಥ ಸಂಚಲನಕ್ಕೆ ಕೊನೆಗೂ ಹೈಕೋರ್ಟ್ ಅನುಮತಿ ನೀಡಿದೆ. ರಾಜ್ಯ ಸರ್ಕಾರದ ಕೋರಿಕೆಯಂತೆ ನವೆಂಬರ್ 16ರಂದು 300 ಗಣ ವೇಷಧಾರಿಗಳು ಹಾಗೂ 50 ಜನರ ಬ್ಯಾಂಡ್ ನೊಂದಿಗೆ ಪಥಸಂಚಲನಕ್ಕೆ ಅನುಮತಿ ನೀಡಿ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠ ತೀರ್ಪು ನೀಡಿದೆ. 

ಭೀಮ್ ಆರ್ಮಿ ಸೇರಿ ಹಲವು ಸಂಘಟನೆಗಳು ಆರೆಸ್ಸೆಸ್ ಪಥಸಂಚಲನ ದಿನವೇ ರೂಟ್ ಮಾರ್ಚ್ ನಡೆಸಲು ಅನುಮತಿ ಕೋರಿದ್ದರಿಂದ ವಿಷಯ ಜಟಿಲವಾಗಿತ್ತು. ಆರೆಸ್ಸೆಸ್ ಕಲಬುರಗಿ ಜಿಲ್ಲಾ ಮುಖಂಡ ಅಶೋಕ ಪಾಟೀಲ್ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಚೆಂಡು ರಾಜ್ಯ ಸರ್ಕಾರದ ಬಾಗಿಲಿಗೆ ಬಂದಿತ್ತು. ಕೊನೆಗೆ, ರಾಜ್ಯ ಸರ್ಕಾರದ ಪರವಾಗಿ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಎಲ್ಲ ಸಂಘಟನೆಗಳಿಗೂ ರೂಟ್ ಮಾರ್ಚ್ ಗೆ ದಿನ ನಿಗದಿ ಮಾಡುತ್ತೇವೆ ಎಂದು ಕೋರ್ಟಿಗೆ ತಿಳಿಸಿದ್ದರು. 

ಚಿತ್ತಾಪುರ ತಹಸೀಲ್ದಾರ್ ಮೂಲಕ ದಿನ ನಿಗದಿಗೊಳಿಸಿ ಹೈಕೋರ್ಟಿಗೆ ಸಲ್ಲಿಸಲಾಗಿತ್ತು. ಅದರಲ್ಲಿ ನ.16ಕ್ಕೆ ದಿನ ನಿಗದಿ ಮಾಡಿದ್ದಲ್ಲದೆ, 300 ಜನರು ಹಾಗೂ ಬ್ಯಾಂಡ್ ಗೆ 25 ಜನರು ಪಾಲ್ಗೊಳ್ಳಬೇಕು ಎಂದು ತಿಳಿಸಿದ್ದರು. ಗರಿಷ್ಟ 600 ಜನರಿಗೆ ಅವಕಾಶ ನೀಡುವಂತೆ ಆರ್‌ಎಸ್‌ಎಸ್‌ ಪರ ಅರ್ಜಿದಾರರು ಕೋರಿದ್ದರು. ಆದರೆ, ಕಾನೂನು ಸುವ್ಯವಸ್ಥೆ ನೋಡಿಕೊಂಡು 350 ಜನ ಸೇರಿದಂತೆ, 16 ರಂದು ಮಧ್ಯಾಹ್ನ 3.30ರಿಂದ 5.30ರ ವರೆಗೆ ನಡೆಸಲು ಕೋರ್ಟ್ ಸೂಚನೆ ನೀಡಿದೆ. 

ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರದಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ನಿರಾಕರಣೆ ಮಾಡಿದ್ದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ವಿಚಾರಣೆ ಆರಂಭಗೊಂಡು ಕೋರ್ಟ್‌ ನಾಲ್ಕು ಬಾರಿ ಮುಂದೂಡಿಕೆ ಮಾಡಿದ್ದಲ್ಲದೆ ಶಾಂತಿಯುತ ಸಮಸ್ಯೆ ಬಗೆಹರಿಸಲು ಸೂಚಿಸಿತ್ತು. ನ.7 ರಂದು ನಡೆದ ವಿಚಾರಣೆಯಲ್ಲಿ ಜಿಲ್ಲಾಡಳಿತಕ್ಕೆ ಎಲ್ಲ ಸಂಘಟನೆಗಳಿಗೂ ಪ್ರತ್ಯೇಕ ದಿನಾಂಕ ನಿಗದಿ ಮಾಡುವಂತೆ ಸೂಚಿಸಿ ನವೆಂಬರ್ 13ಕ್ಕೆ ವಿಚಾರಣೆ ಮುಂದೂಡಿತ್ತು. ಗುರುವಾರ ಮಧ್ಯಾಹ್ನ ನಡೆದ ವಿಚಾರಣೆಯಲ್ಲಿ ಜಿಲ್ಲಾಡಳಿತ ದಿನಾಂಕ ನಿಗದಿ ಮಾಡಿರುವ ಕುರಿತು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. 

ಕೋರ್ಟ್‌ ಸೂಚನೆಯಂತೆ ಎಜಿ ಶಶಿಕಿರಣ್‌ ಶೆಟ್ಟಿ ಅವರ ಬೆಂಗಳೂರಿನ ಕಚೇರಿಯಲ್ಲಿ ಎರಡನೇ ಶಾಂತಿ ಸಭೆ ನಡೆದಿತ್ತು. ನ.16ರಂದು ಪಥಸಂಚಲನ ನಡೆಸಲು ಅವಕಾಶ ನೀಡುವಂತೆ ಅಶೋಕ ಪಾಟೀಲ್‌ ಸಭೆಯಲ್ಲಿ ಕೇಳಿಕೊಂಡಿದ್ದರು.

The Karnataka High Court’s Kalaburagi Bench has granted permission for the Rashtriya Swayamsevak Sangh (RSS) to conduct its route march in Chittapur, the constituency of Minister Priyanka Kharge. The march, part of the RSS centenary celebrations, will be held on November 16 with strict restrictions — only 300 uniformed participants and a 50-member band will be allowed to join, with no permission for outsiders to participate.