ಬ್ರೇಕಿಂಗ್ ನ್ಯೂಸ್
07-10-23 04:14 pm HK News Desk ದೇಶ - ವಿದೇಶ
ನವದೆಹಲಿ, ಅ.7: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತ ಹೊಸ ಇತಿಹಾಸ ಸೃಷ್ಟಿಸಿದೆ. ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಪದಕಗಳ ಬೇಟೆಯಲ್ಲಿ ಭಾರತ ಶತಕ ಬಾರಿಸಿದೆ. ಭಾರತದ ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ 100 ಪದಕಗಳನ್ನು ಜಯಿಸಿದ್ದಾರೆ.
ಭಾರತದ ಕ್ರೀಡಾ ಪ್ರಾಧಿಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ, ಈ ಐತಿಹಾಸಿಕ ಸಾಧನೆಗೆ ಕಾರಣಕರ್ತರಾದ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದೆ. ಟೀಮ್ ಇಂಡಿಯಾ ಸಾಧನೆಯಲ್ಲಿ ತೊಡಗಿಸಿಕೊಂಡಿರುವ ನಮ್ಮ ಕ್ರೀಡಾಪಟುಗಳ ಶಕ್ತಿ, ಸಮರ್ಪಣೆ ಮತ್ತು ತಂಡದ ಕೆಲಸಗಳಿಗೆ ಇದು ಸಾಕ್ಷಿಯಾಗಿದೆ. ಈ ಸಾಧನೆ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿ. ಕಠಿಣ ಪರಿಶ್ರಮ ಮತ್ತು ಉತ್ಸಾಹದಿಂದ ಏನು ಸಾಧ್ಯ ಎಂಬುದನ್ನು ಇದು ತೋರಿಸುತ್ತದೆ ಎಂದು ಕ್ರೀಡಾ ಪ್ರಾಧಿಕಾರ ಬರೆದುಕೊಂಡಿದೆ.
ಇದುವರೆಗೆ ಭಾರತಕ್ಕೆ 25 ಚಿನ್ನ, 35 ಬೆಳ್ಳಿ, 40 ಕಂಚಿನ ಪದಕ ಸೇರಿದಂತೆ ಒಟ್ಟು 100 ಪದಕಗಳು ಏಷ್ಯನ್ ಗೇಮ್ಸ್ನಲ್ಲಿ ಸಿಕ್ಕಿವೆ. ಇಂಡೋನೇಷ್ಯಾದಲ್ಲಿ ಕಳೆದ ಆವೃತ್ತಿಯಲ್ಲಿ ಭಾರತ 70 ಪದಕಗಳನ್ನು ಗೆದ್ದಿತ್ತು. ಅಲ್ಲಿ ದೇಶದ ಕ್ರೀಡಾಪಟುಗಳು 16 ಚಿನ್ನ, 23 ಬೆಳ್ಳಿ ಮತ್ತು 31 ಕಂಚಿನ ಪದಕಗಳನ್ನು ಗೆದ್ದು ತಮ್ಮ ಅತ್ಯುತ್ತಮ ಪ್ರದರ್ಶನವನ್ನು ದಾಖಲಿಸಿದ್ದರು.
ಈ ಕುರಿತು ಟ್ವೀಟರ್ ನಲ್ಲಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ, “ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಮಹತ್ವದ ಸಾಧನೆ! ನಾವು 100 ಪದಕ ಗೆಲ್ಲುವ ಮೂಲಕ ಗಮನಾರ್ಹ ಮೈಲಿಗಲ್ಲನ್ನು ತಲುಪಿದ್ದು ಭಾರತದ ಜನ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಈ ಐತಿಹಾಸಿಕ ಮೈಲಿಗಲ್ಲಿಗೆ ಕಾರಣವಾದ ನಮ್ಮ ಅದ್ಭುತ ಕ್ರೀಡಾಪಟುಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಶುಕ್ರವಾರವಷ್ಟೇ ಏಷ್ಯನ್ ಗೇಮ್ಸ್ ನಲ್ಲಿ ಶತಕದ ಗಡಿಯಲ್ಲಿದ್ದ ಭಾರತ ತಂಡ ಆರ್ಚರಿ ಮತ್ತು ಮಹಿಳಾ ಕಬಡ್ಡಿಯಲ್ಲಿ ಶನಿವಾರ ಮೂರು ಬ್ಯಾಕ್ ಟು ಬ್ಯಾಕ್ ಚಿನ್ನದ ಪದಕಗಳನ್ನು ಗೆದ್ದು ದೇಶದ ಪದಕಗಳ ಸಂಖ್ಯೆಯನ್ನು 100 ಕ್ಕೆ ಒಯ್ಯುವಲ್ಲಿ ಯಶಸ್ವಿಯಾಯಿತು.
India are poised to celebrate a historic century of medals at the Asian Games after wrestlers bagged three medals, the sport of sepaktakraw added a historic bronze and the men's hockey team reclaimed the gold to take the country's tally to 95 here on Friday.
02-04-25 10:48 pm
HK News Desk
Accident in Chitradurga: ಚಿತ್ರದುರ್ಗ ; 15ಕ್ಕೂ...
02-04-25 09:54 pm
CM Siddaramaiah, Police Medal 2025: ರಾಜ್ಯದ ಅಭ...
02-04-25 07:14 pm
Lokayukta Raid, Police Inspector Kumar, Annap...
02-04-25 03:07 pm
Cobra Shocks, Chikkamagaluru: ಹೊಟೇಲ್ಗೆ ನುಗ್ಗ...
01-04-25 10:45 pm
02-04-25 07:35 pm
HK News Desk
ಇತಿಹಾಸವನ್ನು ಚರಿತ್ರೆ ಪುಸ್ತಕಗಳಿಂದ ತಿಳಿಯಬೇಕೇ ವಿನ...
31-03-25 09:34 pm
Munambam Waqf Row: ಮುನಾಂಬಮ್ ವಕ್ಫ್ ಆಸ್ತಿ ವಿವಾದ...
31-03-25 04:07 pm
BR Ambedkar birth anniversary, Holiday: ಏ.14ರ...
29-03-25 04:40 pm
ಥೈಲ್ಯಾಂಡ್ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲೂ ಭಾರೀ ಭ...
29-03-25 01:27 pm
02-04-25 11:02 pm
Mangalore Correspondent
Kora Kannada Movie, Release, P Murthy, Sunami...
02-04-25 04:11 pm
Nandi Rath Yatra, Mangalore: 95 ದಿನಗಳ ನಂದಿ ರಥ...
01-04-25 09:38 pm
Mangalore, MLA Vedavyas Kamath: ಜೈಲಿನ ಅಧಿಕಾರಿ...
01-04-25 09:12 pm
ರಾಜ್ಯದಲ್ಲಿ ಬೆಲೆ ಏರಿಕೆ ಗಗನಕ್ಕೆ ; ರೇಷನ್ ಅಂಗಡಿಗಳ...
01-04-25 07:12 pm
02-04-25 05:49 pm
Mangalore Correspondent
Chikkamagaluru murder, Three Killed: ಪತ್ನಿ ಬಿ...
02-04-25 01:11 pm
Bajpe Robbery, Mangalore crime, Mangalore: ಮನ...
01-04-25 11:07 pm
Bangalore Honeytrap, Businessman, Sridevi: ಒಂ...
01-04-25 10:42 pm
Davangere Bank Robbery, Police; ಉದ್ಯಮ ವಿಸ್ತರಣ...
01-04-25 05:32 pm