ಬ್ರೇಕಿಂಗ್ ನ್ಯೂಸ್
16-10-26 01:47 pm HK News Staffer ಕರಾವಳಿ
ಮಂಗಳೂರು, ಅ.16: ಕುದ್ರೋಳಿಯಲ್ಲಿ ದಸರಾ ಉತ್ಸವಕ್ಕೆ ಸಿಎಂ ಡಿಕೆ ಶಿವಕುಮಾರ್ ಆಗಮಿಸಿದ್ದ ವೇಳೆ ಅದೇ ಪರಿಸರದ ನಿವಾಸಿ ವ್ಯಕ್ತಿಯೊಬ್ಬರಿಗೆ ಹೃದಯಾಘಾತ ಸಂಭವಿಸಿದ್ದು, ಭಾರೀ ಜನಸಂದಣಿ ಮತ್ತು ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ರೋಗಿಯನ್ನು ಕರೆದೊಯ್ಯಲು ಪ್ರಯಾಸಪಟ್ಟ ಘಟನೆ ನಡೆದಿದೆ.
ಈ ಬಗ್ಗೆ ನಗರದ ಖ್ಯಾತ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್, ಇಂತಹ ಉತ್ಸವ ಅಥವಾ ಮುಖ್ಯಮಂತ್ರಿ ಆಗಮನದಂತಹ ಸಂದರ್ಭದಲ್ಲಿ ತುರ್ತು ನಿರ್ಗಮನ ದ್ವಾರಕ್ಕೆ ಅವಕಾಶ ನೀಡಬೇಕೆಂದು ಬಹಿರಂಗ ಪತ್ರ ಬರೆದಿದ್ದಾರೆ. ನಿನ್ನೆ ರಾತ್ರಿ 8.30ರ ಸುಮಾರಿಗೆ ಕುದ್ರೋಳಿ ದೇವಸ್ಥಾನದ ಬಳಿಯಲ್ಲೇ ವಾಸವಿರುವ ರಾಜಸ್ಥಾನಿ ಕುಟುಂಬದ ವ್ಯಕ್ತಿಯೊಬ್ಬರಿಗೆ ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಪರಿಸರದಲ್ಲಿ ಭಾರೀ ಜನ ಸೇರಿದ್ದರಿಂದ ತುರ್ತಾಗಿ ಕಾರಿನಲ್ಲಿ ಹೊರಗೆ ಕರೆದೊಯ್ಯಲು ಸಾಧ್ಯವಾಗದ ಸ್ಥಿತಿಯಿತ್ತು.
ಒಂದೆಡೆ ಪೊಲೀಸರ ನಿಯೋಜನೆ ಮತ್ತೊಂದೆಡೆ ಭಾರೀ ಸಂಖ್ಯೆಯಲ್ಲಿದ್ದ ಜನರ ಪ್ರವಾಹದಿಂದಾಗಿ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಇರಲಿಲ್ಲ. ಹೀಗಾಗಿ ವ್ಯಕ್ತಿಯ ಮಗ ಮತ್ತು ಸೋದರಿ ಸೇರಿ ಕುಸಿದು ಬಿದ್ದ ವ್ಯಕ್ತಿಯನ್ನು ದ್ವಿಚಕ್ರ ವಾಹನದಲ್ಲಿ ಕುಳ್ಳಿರಿಸಿ ಪಕ್ಕದ ರಸ್ತೆಯ ವರೆಗೆ ಪ್ರಯಾಸದಲ್ಲಿ ಕರೆತಂದಿದ್ದಾರೆ. ಆನಂತರ, ಪಕ್ಕದಲ್ಲಿ ವಾಸವಿದ್ದ ವೈದ್ಯರೊಬ್ಬರು ತುರ್ತಾಗಿ ಸ್ಪಂದಿಸಿ ಯೇನಪೋಯ ಆಸ್ಪತ್ರೆಗೆ ಕರೆದೊಯ್ದಿದ್ದು ಆನಂತರ ನಡುರಾತ್ರಿಯೇ ಆಂಜಿಯೋ ಪ್ಲಾಸ್ಟಿ ಮಾಡಿದ್ದರಿಂದ ಸದ್ಯಕ್ಕೆ ಬದುಕುಳಿದಿದ್ದಾರೆ.
ಈ ಹಿನ್ನೆಲೆಯಲ್ಲಿ ಯಾವುದೇ ದೇವಸ್ಥಾನ ಇನ್ನಿತರ ಉತ್ಸವ ಅಥವಾ ಯಾವುದೇ ಜನಸೇರುವ ಸಂದರ್ಭದಲ್ಲಿ ತುರ್ತಾಗಿ ನಿರ್ಗಮನ ದ್ವಾರವನ್ನು ಇರಿಸಿಕೊಳ್ಳಬೇಕು, ಆಂಬುಲೆನ್ಸ್ ಹೋಗುವುದಕ್ಕಾದರೂ ಅವಕಾಶ ಇರುವಂತೆ ಪೊಲೀಸರು ನೋಡಿಕೊಳ್ಳಬೇಕು. ಧಾರ್ಮಿಕ ಆಚರಣೆಗಳು, ಉತ್ಸವಗಳು ಅಗತ್ಯ. ಹಾಗಂತ, ಜನಸಾಮಾನ್ಯರ ಜೀವಕ್ಕೂ ಬೆಲೆ ನೀಡಬೇಕಾಗುತ್ತದೆ. ತುರ್ತು ಸಂದರ್ಭದಲ್ಲಿ ವೈದ್ಯಕೀಯ ನೆರವು ದೊರಕದ ಸ್ಥಿತಿಯಾಗಬಾರದು. ಈ ಬಗ್ಗೆ ದೇವಸ್ಥಾನ ಸಮಿತಿಯವರು, ಪೊಲೀಸರು, ಜಿಲ್ಲಾಡಳಿತ ಸೂಕ್ತ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು ಎಂದು ಡಾ.ಪದ್ಮನಾಭ ಕಾಮತ್ ತನ್ನ ಪತ್ರದಲ್ಲಿ ಕಾಳಜಿ ವ್ಯಕ್ತಪಡಿಸಿದ್ದಾರೆ.
ಕುದ್ರೋಳಿ ಪರಿಸರದಲ್ಲಿ ದಸರಾ ಉತ್ಸವ ಸಂದರ್ಭದಲ್ಲಿ ದಿನವೂ ಸಂಜೆ ವೇಳೆಗೆ ಅತಿಯಾದ ಜನದಟ್ಟಣೆ ಇರುತ್ತದೆ. ಪ್ರತಿ ದಿನವೂ ದೇವಸ್ಥಾನ ಆವರಣದ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ಇಲ್ಲದ ಸ್ಥಿತಿಯಾಗುತ್ತದೆ. ಈ ವೇಳೆ, ಯಾವುದೇ ಅವಘಡ ಸಂಭವಿಸಿದರೆ ಜನರು ಜೀವ ಉಳಿಸುವುದಕ್ಕೆ ಪ್ರಯಾಸ ಪಡಬೇಕಾಗುತ್ತದೆ. ಹೀಗಾಗಿ ಪೊಲೀಸರು ಜನರ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂಬ ಆಗ್ರಹ ಸಾರ್ವಜನಿಕರ ಕಡೆಯಿಂದ ಕೇಳಿಬಂದಿದೆ.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 01:47 pm
HK News Staffer
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
16-10-26 11:04 am
HK News Staffer
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm