ಅಪರಾಧ ನಿಗ್ರಹ ಕಾಯ್ದೆಗಳಿಗೆ ಹೊಸ ರೂಪ ಕೊಡಲು ಮೋದಿ ಸರ್ಕಾರ ಪ್ಲಾನ್ ; ಐಪಿಸಿ ಇನ್ನು ಇತಿಹಾಸ ಮಾತ್ರ, ಬ್ರಿಟಿಷರ ಕಾಲದ 3 ಕಾಯ್ದೆಗೆ ಫುಲ್ ಸ್ಟಾಪ್ 

14-08-23 09:15 pm       HK News Desk   ದೇಶ - ವಿದೇಶ

ಮೋದಿ ಸರ್ಕಾರ ಕ್ರಿಮಿನಲ್‌ಗಳ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗ ಮಾಡಲು ಮುಂದಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಐಪಿಸಿ, ಸಿಆರ್‌ಪಿಸಿ ಕಾಯ್ದೆಗಳಿಗೆ ಹೊಸ ರೂಪ ಕೊಡುವ ಮಸೂದೆಯನ್ನ ಸಂಸತ್‌ನಲ್ಲಿ ಮಂಡಿಸಿದ್ದಾರೆ.

ನವದೆಹಲಿ, ಆಗಸ್ಟ್14: ಮೋದಿ ಸರ್ಕಾರ ಕ್ರಿಮಿನಲ್‌ಗಳ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗ ಮಾಡಲು ಮುಂದಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಐಪಿಸಿ, ಸಿಆರ್‌ಪಿಸಿ ಕಾಯ್ದೆಗಳಿಗೆ ಹೊಸ ರೂಪ ಕೊಡುವ ಮಸೂದೆಯನ್ನ ಸಂಸತ್‌ನಲ್ಲಿ ಮಂಡಿಸಿದ್ದಾರೆ. ಕೋರ್ಟ್‌ಗಳಲ್ಲಿ ವರ್ಷಗಳ ಕಾಲ ಬಾಕಿ ಉಳಿಯುವ ಕೇಸ್‌ಗಳನ್ನ ಅದಷ್ಟು ಬೇಗ ವಿಲೇವಾರಿ ಮಾಡೋಕೆ ಹೊಸ ಕಾನೂನನ್ನ ಸರ್ಕಾರ ರೂಪಿಸ್ತಿದೆ. ಇನ್ಮುಂದೆ ವಂಚನೆ ಪ್ರಕರಣಕ್ಕೆ 420 ಕೇಸ್ ಅನ್ನೋ ಹಾಗಿಲ್ಲ! ಅಸಲಿಗೆ ಐಪಿಸಿ ಅನ್ನೋದೇ ಇರೋದಿಲ್ಲ. ಐಪಿಸಿ ಬದಲಿಗೆ ಬಿಎನ್‌ಎಸ್‌ ಬರಲಿದೆ. ಸಿಆರ್‌ಪಿಸಿ ಕೂಡಾ ಬದಲಾಗಲಿದೆ. ಕೇಂದ್ರ ಸರ್ಕಾರದ ಈ ಹೊಸ ಕಾನೂನುಗಳಲ್ಲಿ ಏನಿರುತ್ತೆ? ಕ್ರಿಮಿನಲ್‌ಗಳಿಗೆ ವರವಾಗುವ ಲೂಪ್‌ ಹೋಲ್‌ಗಳನ್ನು ಸರ್ಕಾರ ನಿವಾರಣೆ ಮಾಡುತ್ತಾ?

Bharatiya Nyaya Sanhita ಅನ್ನೋದು ಬಿಎನ್‌ಎಸ್‌ನ ಹ್ರಸ್ವ ರೂಪ. ಇನ್ನು Criminal Procedure Code ಅನ್ನು ಸಿಆರ್‌ಪಿಸಿ ಅಂತಾ ಹೇಳಲಾಗುತ್ತೆ. ಇದನ್ನು ಕನ್ನಡದಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆ ಎನ್ನಲಾಗುತ್ತೆ. ಇನ್ಮುಂದೆ ಈ ಕಾನೂನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಆಗಲಿದೆ. Bharatiya Nagrik Suraksha Sanhita ಅನ್ನೋದು ಬಿಎನ್‌ಎಸ್‌ಎಸ್‌ನ ಹ್ರಸ್ವ ರೂಪ. ಮೂರನೆಯ ಕಾನೂನಾದ ಭಾರತೀಯ ಸಾಕ್ಷ್ಯ ಅಧಿನಿಯಮವು ಇನ್ಮುಂದೆ ಭಾರತೀಯ ಸಾಕ್ಷ್ಯ ಕಾಯ್ದೆಯಾಗಿ ಬದಲಾಗಲಿದೆ.

ಹೊಸ ಕಾನೂನಿನಲ್ಲಿದೆ. ಕೋಮು ಗಲಭೆ ಸೇರಿದಂತೆ ಹಿಂಸಾಚಾರಕ್ಕೆ ಕಾರಣವಾಗುವ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ದ್ವೇಷ ಭಾಷಣಕ್ಕೆ 3 ವರ್ಷ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾಪ ಹೊಸ ಕಾನೂನಿನಲ್ಲಿ ಇದೆ. ಇದೇ ಮೊದಲ ಸಲ ಅಪರಾಧ ಮಾಡಿ ಕೋರ್ಟ್‌ ಕಟಕಟೆಯಲ್ಲಿ ನಿಲ್ಲುವ ಅಪರಾಧಿಗಳು ಶೇ. 35ರಷ್ಟು ಜೈಲು ಶಿಕ್ಷೆ ಅನುಭವಿಸಿದ್ದರೆ ಅವರು ಜಾಮೀನು ಅರ್ಜಿ ಸಲ್ಲಿಸಬಹುದಾಗಿದೆ. ಕೆಲವು ಪ್ರಕರಣಗಳಲ್ಲಿ ಆರೋಪಿಗಳು ಅಪರಾಧ ಎಸಗಿ ತಲೆಮರೆಸಿಕೊಂಡಿರುತ್ತಾರೆ. ವಿದೇಶಗಳಿಗೆ ಪರಾರಿಯಾಗುತ್ತಾರೆ. ಇಂಥಾ ಸಂದರ್ಭದಲ್ಲೂ ಕೋರ್ಟ್‌ನಲ್ಲಿ ವಿಚಾರಣೆ ನಡೆಸಬಹುದಾಗಿದೆ. ಯಾವುದೇ ಅಪರಾಧ ಕೃತ್ಯದ ಪ್ರಮುಖ ಸಾಕ್ಷಿಗಳಿಗೆ ಜೀವ ಬೆದರಿಕೆ ಇದ್ದರೆ ಅಂಥವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ರಕ್ಷಣೆ ನೀಡಬಹುದಾಗಿದೆ. ಸರ್ಕಾರದ ಅನುಮತಿ ಕೇಳುವ ಅಗತ್ಯ ಇಲ್ಲ ಎಂದು ಹೊಸ ಕಾಯ್ದೆ ಹೇಳುತ್ತಿದೆ.

ರೂಪ ಕೊಡಲಿವೆ. ಸಾಮಾನ್ಯವಾಗಿ ಮೋಸಗಾರರಿಗೆ ನಮ್ಮ ಜನ 420 ಅಂತಾ ಕರೆಯುತ್ತಿದ್ದರು. ಆದರೆ, ಈಗ ಆ ನಂಬರ್ ಕೂಡಾ ಬದಲಾಗಿದೆ.

ವಂಚನೆ ಪ್ರಕರಣಗಳಿಗೆ ಐಪಿಸಿಯಲ್ಲಿ ಸೆಕ್ಷನ್ 420 ಅನ್ವಯ ಆಗುತ್ತಿದೆ. ಇದೀಗ ಬಿಎನ್‌ಎಸ್‌ನಲ್ಲಿ ಸೆಕ್ಷನ್ 316 ಅನ್ವಯ ಆಗಲಿದೆ. ಕೊಲೆ ಕೇಸ್‌ ಅನ್ನು ಐಪಿಸಿ ಸೆಕ್ಷನ್ 302 ಅಡಿ ದಾಖಲು ಮಾಡಲಾಗುತ್ತಿದೆ. ಇದೀಗ ಬಿಎನ್‌ಎಸ್‌ನಲ್ಲಿ ಸೆಕ್ಷನ್ 99 ಅಡಿ ಕೇಸ್ ದಾಖಲಾಗಲಿದೆ. ಕೊಲೆ ಯತ್ನ ಪ್ರಕರಣಕ್ಕೆ ಐಪಿಸಿ ಸೆಕ್ಷನ್ 307 ಅನ್ವಯ ಆಗುತ್ತಿದೆ. ಮುಂದಿನ ದಿನಗಳಲ್ಲಿ ಬಿಎನ್‌ಎಸ್ ಸೆಕ್ಷನ್ ಅಡಿ 107 ಅಡಿ ಪ್ರಕರಣ ದಾಖಲಾಗಲಿದೆ. ಅತ್ಯಾಚಾರಕ್ಕೆ ಇದೀಗ ಐಪಿಸಿ ಸೆಕ್ಷನ್ 375, 376 ಅಡಿ ಆರೋಪಿಗಳ ವಿರುದ್ದ ಪ್ರಕರಣ ದಾಖಲು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಿಎನ್‌ಎಸ್‌ನಲ್ಲಿ ಸೆಕ್ಷನ್ 63 ಅಡಿ ಕೇಸ್ ದಾಖಲಾಗಲಿದೆ. ಕರ್ಫ್ಯೂ ವಿಧಿಸೋದಕ್ಕೆ ಈಗ ಐಪಿಸಿ ಸೆಕ್ಷನ್ 144 ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಿಎನ್‌ಎಸ್ ಸೆಕ್ಷನ್ 187 ಬರಲಿದೆ. ಮಾನಹಾನಿ, ಮಾನನಷ್ಟ ಪ್ರಕರಣಗಳನ್ನು ಐಪಿಸಿ ಸೆಕ್ಷನ್ 499 ಅಡಿ ದಾಖಲು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಿಎನ್‌ಎಸ್ ಸೆಕ್ಷನ್ 354 ಅಡಿ ಪ್ರಕರಣ ದಾಖಲಾಗಲಿದೆ.

Union home minister Amit Shah on Friday introduced three Bills in the Lok Sabha to replace the colonial-era Indian Penal Code (IPC), 1860; Criminal Procedure Code (CrPC), 1898; and the Indian Evidence Act, 1872. The Bharatiya Nyaya Sanhita (BNS) Bill, 2023, Bharatiya Nagarik Suraksha Sanhita (BNSS) Bill, 2023, and the Bharatiya Sakshya (BS) Bill, 2023, seek to replace the IPC, CrPC and the Evidence Act, respectively.