RTI Dharmasthala Hostels, Mahesh Thimarodi: ಧರ್ಮಸ್ಥಳ ವಸತಿ ಗೃಹಗಳಲ್ಲಿ ನಾಲ್ಕು ಅಸಹಜ ಸಾವು ; ಆರ್ಟಿಐ ದಾಖಲೆ ಆಧರಿಸಿ ಎಸ್ಐಟಿಗೆ ದೂರಿತ್ತ ಮಹೇಶ್ ಶೆಟ್ಟಿ ತಿಮರೋಡಿ 

12-09-25 07:43 pm       Mangalore Correspondent   ಕರಾವಳಿ

ಧರ್ಮಸ್ಥಳ ಗ್ರಾಮದ ವಸತಿ ಗೃಹಗಳಲ್ಲಿ 2006ರಿಂದ 2010ರ ಅವಧಿಯಲ್ಲಿ ಸಂಭವಿಸಿದ ನಾಲ್ಕು ಅಸಹಜ ಸಾವು ಪ್ರಕರಣಗಳ ತನಿಖೆ ನಡೆಸುವಂತೆ ಒತ್ತಾಯಿಸಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ.

ಮಂಗಳೂರು, ಸೆ.12 : ಧರ್ಮಸ್ಥಳ ಗ್ರಾಮದ ವಸತಿ ಗೃಹಗಳಲ್ಲಿ 2006ರಿಂದ 2010ರ ಅವಧಿಯಲ್ಲಿ ಸಂಭವಿಸಿದ ನಾಲ್ಕು ಅಸಹಜ ಸಾವು ಪ್ರಕರಣಗಳ ತನಿಖೆ ನಡೆಸುವಂತೆ ಒತ್ತಾಯಿಸಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ತೆರಳಿ ದೂರು ನೀಡಿದ್ದಾರೆ.

2006ರಿಂದ 2010ರ ಅವಧಿಯಲ್ಲಿ ಸಂಭವಿಸಿದ ನಾಲ್ಕು ಅಸಹಜ ಸಾವು ಪ್ರಕರಣಗಳ ಆರ್ಟಿಐ ಮಾಹಿತಿ ಆಧರಿಸಿ, ಅವುಗಳನ್ನು ಕೊಲೆಯಾಗಿರಬಹುದೆಂದು ಶಂಕಿಸಿ ಹೆಚ್ಚಿನ ತನಿಖೆಗೆ ದೂರಿನಲ್ಲಿ ಒತ್ತಾಯಿಸಿದ್ದಾರೆ. ಇದರ ಜೊತೆಗೆ ಮಾಹಿತಿ ಹಕ್ಕಿನಲ್ಲಿ ಗ್ರಾಪಂ ಕಚೇರಿಯಿಂದ ಪಡೆದ ದಾಖಲೆಗಳನ್ನು ನೀಡಿದ್ದಾರೆ. 

ಗಾಯತ್ರಿ, ಶರಾವತಿ ಮತ್ತು ವೈಶಾಲಿ ವಸತಿ ಗೃಹಗಳಲ್ಲಿ ನಡೆದ ನಾಲ್ಕು ಅಸಹಜ ಸಾವುಗಳ ಬಗ್ಗೆ ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ. ಇವುಗಳನ್ನು ಅಪರಿಚಿತ ಶವಗಳೆಂದು ಘೋಷಿಸಿ ಗ್ರಾಮ ಪಂಚಾಯಿತಿ ಮೂಲಕ ತರಾತುರಿಯಲ್ಲಿ ದಫನ ಮಾಡಲಾಗಿದೆ. ಈ ಬಗ್ಗೆ ಕೇವಲ ಅಸಹಜ ಮರಣ ಪ್ರಕರಣ ದಾಖಲಿಸಲಾಗಿದ್ದು, ಕೊಲೆ ಅಥವಾ ಆತ್ಮಹತ್ಯೆಯ ಸಂಶಯವಿದ್ದರೂ ಈ ಬಗ್ಗೆ ಎಫ್.ಐ‌.ಆರ್ ದಾಖಲಿಸದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಕಾನೂನು ಪ್ರಕಾರ ವಸತಿ ಗೃಹಗಳಲ್ಲಿ ಕೊಠಡಿ ಪಡೆದವರ ಹೆಸರು ವಿಳಾಸ ನೀಡಬೇಕಾಗುತ್ತದೆ. ಹಾಗಿದ್ದ ಮೇಲೆ ಇವರನ್ನು ಅಪರಿಚಿತ ಎಂದು ಹೇಳಲು ಹೇಗೆ ಸಾಧ್ಯ. ಇದು ಉದ್ದೇಶಪೂರ್ವಕ ಮಾಹಿತಿ ಮುಚ್ಚಿಟ್ಟಿರುವ ರೀತಿ ಕಾಣುತ್ತದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ದೂರಿನಲ್ಲಿ ಆರೋಪಿಸಿದ್ದಾರೆ.

In a startling development, activist Mahesh Shetty Timarodi, who has been actively supporting Sowjanya’s cause, has filed a formal complaint with the Special Investigation Team (SIT) in Beltangady, urging a deeper probe into four unnatural deaths that allegedly occurred in hostels in Dharmasthala between 2006 and 2010.