ಕೊರೊನೋತ್ತರ ಸೋಂಕು ; ವೈದ್ಯರಿಂದ ಪ್ರಬಲ ಇಂಜೆಕ್ಷನ್, ಕೇರಳದಲ್ಲಿ ಎಂಟು ತಿಂಗಳ ಮಗು ಹೃದಯಾಘಾತದಿಂದ ಮೃತ್ಯು! 

19-06-23 10:59 pm       HK News Desk   ದೇಶ - ವಿದೇಶ

ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ಎಂಟು ತಿಂಗಳ ಶಿಶು ಇಂಜೆಕ್ಷನ್ ಕಾರಣದಿಂದ ಹೃದಯಾಘಾತಕ್ಕೆ ಒಳಗಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು ಕೊಟ್ಟಾಯಂ ಮೆಡಿಕಲ್ ಕಾಲೇಜು ವಿರುದ್ಧ ಮಗುವಿನ ಕುಟುಂಬಸ್ಥರು ರಾಜ್ಯ ಆರೋಗ್ಯ ಸಚಿವರಿಗೆ ದೂರು ನೀಡಿದ್ದಾರೆ. 

ಕೊಟ್ಟಾಯಂ, ಜೂನ್ 19: ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ಎಂಟು ತಿಂಗಳ ಶಿಶು ಇಂಜೆಕ್ಷನ್ ಕಾರಣದಿಂದ ಹೃದಯಾಘಾತಕ್ಕೆ ಒಳಗಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು ಕೊಟ್ಟಾಯಂ ಮೆಡಿಕಲ್ ಕಾಲೇಜು ವಿರುದ್ಧ ಮಗುವಿನ ಕುಟುಂಬಸ್ಥರು ರಾಜ್ಯ ಆರೋಗ್ಯ ಸಚಿವರಿಗೆ ದೂರು ನೀಡಿದ್ದಾರೆ. 

ಕೊಟ್ಟಾಯಂ ಮೆಡಿಕಲ್ ಕಾಲೇಜಿಗೆ ಒಳಪಟ್ಟ ಮಕ್ಕಳ ವಿಭಾಗದ ವಿರುದ್ಧ ಕೊಟ್ಟಾಯಂ ಜಿಲ್ಲೆಯ  ಮನಾರ್ಕಾಡ್‌ ನಿವಾಸಿ ಎಬಿ ಮತ್ತು ಜೋನ್ಸಿ ಎಂಬ ದಂಪತಿ ಆರೋಗ್ಯ ಸಚಿವರಿಗೆ ದೂರು ಸಲ್ಲಿಸಿದ್ದಾರೆ. 

ಕಳೆದ ಮೇ 11ರಂದು ಎಂಟು ತಿಂಗಳ ಮಗುವನ್ನು ಜ್ವರದ ಕಾರಣಕ್ಕೆ ಪೋಷಕರು ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದರು. ಕೊರೊನೋತ್ತರ ಸೋಂಕಿನ ಎಫೆಕ್ಟ್ ನಿಂದಾಗಿ ಕವಾಸಕಿ ಎಂಬುದರ ಲಕ್ಷಣ ಗುರುತಿಸಿದ್ದ ವೈದ್ಯರು, ಅದೇ ದಿನ ರಾತ್ರಿ 9 ಗಂಟೆಗೆ ತೀವ್ರವಾದ ಇಂಜೆಕ್ಷನ್ ನೀಡಿದ್ದರು ಎನ್ನಲಾಗಿದೆ. ಆನಂತರ ಮಗುವನ್ನು ಸರಿಯಾಗಿ ನೋಡಿಕೊಂಡಿಲ್ಲ.  ಈ ಚುಚ್ಚುಮದ್ದು ನೀಡುವುದರಿಂದ ಹೃದಯಾಘಾತದ ಅಪಾಯವಿದೆ ಎಂದು ತಿಳಿದಿದ್ದರೂ ವೈದ್ಯರು ನಿರ್ಲಕ್ಷ್ಯ ವಹಿಸಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. 

ಮಗು ಉಸಿರಾಡಲು ಕಷ್ಟ ಪಡುತ್ತಿದ್ದುದನ್ನು ಗಮನಿಸಿದ ಶಿಶುವಿನ ಪೋಷಕರು ಗಲಾಟೆ ಮಾಡಿದ್ದಾರೆ‌. ಬಳಿಕ ವೈದ್ಯರು ಪರೀಕ್ಷಿಸಿದಾಗ ಮಗುವಿನ ಸ್ಥಿತಿ ಗಂಭೀರವಾಗಿತ್ತು. ಇದರ ಬೆನ್ನಲ್ಲೇ ಮಗು ಮೃತಪಟ್ಟಿದ್ದು ವೈದ್ಯರು ಮತ್ತು ಸಿಬಂದಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎನ್ನುವ ಆರೋಪವನ್ನು ದೂರಿನಲ್ಲಿ ತಿಳಿಸಿದ್ದಾರೆ.

A complaint was made against the hospital by the family of an eight-month-old infant who had a fever and was admitted; the baby later died of a heart attack. The family of Josh AB, a local of Kottayam Manarkad, has filed a complaint with the health minister against the children's hospital, which is a division of Kottayam Medical College. The baby's family claims that after receiving an extensive dose of medication, the baby's health was improperly monitored, which resulted in a heart attack.