ಬ್ರೇಕಿಂಗ್ ನ್ಯೂಸ್
08-05-23 07:04 pm HK News Desk ದೇಶ - ವಿದೇಶ
ಯಾಂಕಿಹುವಾ, ಮೇ 8 : ಪೆರುವಿನಲ್ಲಿ ಭೀಕರ ಘಟನೆಯೊಂದು ನಡೆದಿದೆ. ದಕ್ಷಿಣ ಪೆರುವಿನ ಗ್ರಾಮವೊಂದರ ಚಿನ್ನದ ಗಣಿಯಲ್ಲಿ ಭಾರೀ ಅಗ್ನಿ ಅವಘಢ ಸಂಭವಿಸಿದ್ದು, 27 ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಪ್ರಾದೇಶಿಕ ರಾಜಧಾನಿಯಾದ ಅರೆಕ್ವಿಪಾ ನಗರದಿಂದ 10-ಗಂಟೆಗಳ ಪ್ರಯಾಣದ ದೂರದ ಕಾಂಡೆಸುಯೊಸ್ ಪ್ರಾಂತ್ಯದ ಗಣಿಯಲ್ಲಿ ಈ ಸ್ಫೋಟ ಸಂಭವಿಸಿದೆ.
ಅವಘಢದ ಬಳಿಕ ಗಣಿಯಲ್ಲಿ ಕೆಲಸ ಮಾಡುತ್ತಿದ್ದ, 175 ಕ್ಕೂ ಹೆಚ್ಚು ಕಾರ್ಮಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ದಕ್ಷಿಣ ಅಮೆರಿಕಾದ ಇತಿಹಾಸದಲ್ಲಿ ಇದೊಂದು ಘೋರ ಗಣಿ ದುರಂತವಾಗಿದೆ.
ಅವಗಢಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆ ಮುಂದುವರೆದಿದೆ ಎಂದು ಸರ್ಕಾರಿ ಅಧಿಕಾರಿಗಳು ಹೇಳಿದರೆ, ಗಣಿಯಲ್ಲಿ ಮಾಡಿದ ಸ್ಪೋಟದಿಂದ ಶಾರ್ಟ್ ಸರ್ಕ್ಯೂಟ್ ಆಗಿರಬಹುದು ಎಂದು ಅಲ್ಲಿನ ಕೆಲವು ಸುದ್ದಿ ವಾಹಿನಿಗಳು ಹೇಳಿವೆ. "ಮೃತರು ಇರುವ ಸ್ಥಳವನ್ನು ನಾವು ಸುರಕ್ಷಿತವಾಗಿರಿಸಬೇಕು. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿದ್ದೇವೆ. ಅಗ್ನಿ ದುರಂತ ತೀವ್ರವಾಗಿರುವುದರಿಂದ ಒಳ ಪ್ರವೇಶ ಮಾಡಲು ಸಾಧ್ಯವಾಗಿಲ್ಲ. ಆದರೆ ಈಗ ರಕ್ಷಣಾ ಕಾರ್ಯ ಮುಂದುವರೆದಿದೆ. ಮೃತ ದೇಹಗಳನ್ನು ಪಡೆಯುವ ಕೆಲಸ ಮಾಡಲಾಗುತ್ತಿದೆ' ಎಂದು ರಕ್ಷಣಾ ಪಡೆಯ ಅಧಿಕಾರಿ ಮ್ಯಾಟೋಸ್ ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಮೃತರ ಸಂಬಂಧಿಕರು ಆಗಮಿಸಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಗಣಿಯಿಂದ ದೇಹವನ್ನು ಹೊರ ತರುತ್ತಿದ್ದಂತೆ, ಕುಟುಂಬಸ್ಥರ ನೋವು, ರೋದನೆ, ಕಣ್ಣೀರು ಮನಕಲಕುತ್ತಿದೆ. ರಕ್ಷಣಾ ಕಾರ್ಯ ಮುಂದುವರೆದಿದೆ. ಗಣಿಯಲ್ಲಿ ಕೆಲಸ ಮಾಡುವ ಸಂಬಂಧಿಕರ ಸುರಕ್ಷತೆಯ ಬಗ್ಗೆ ಮಾಹಿತಿ ಪಡೆಯಲು, ಹತ್ತಿರದ ಪೊಲೀಸ್ ಠಾಣೆಗೆ ಜನ ಧಾವಿಸುತ್ತಿದ್ದಾರೆ.
"ಮೃತಪಟ್ಟವರ ಪೈಕಿ ನನ್ನ ಪತಿಯೂ ಇದ್ದಾರೆ. ಗಣಿಯಲ್ಲಿ ಅಪಾಯ ಇರುವ ಬಗ್ಗೆ ಅವರು ಆಗಾಗ ಹೇಳುತ್ತಿದ್ದರು. ಇಂದು ನಮ್ಮನ್ನು ಬಿಟ್ಟು ಹೋಗಿದ್ದಾರೆ. ಇಬ್ಬರು ಮಕ್ಕಳನ್ನು ಅನಾಥರನ್ನಾಗಿ ಮಾಡಿದ್ದಾರೆ. ನಾವು ದುಃಖಿತರಾಗಿದ್ದೇವೆ" ಎಂದು ಮಹಿಳೆಯೊಬ್ಬರು ಕಣ್ಣೀರಿಟ್ಟಿದ್ದಾರೆ.
ಮೈನೆರಾ ಯಾಂಕಿಹುವಾ ಎನ್ನುವ ಕಂಪನಿ ಇಲ್ಲಿ 23 ವರ್ಷಗಳಿಂದ ಗಣಿಗಾರಿಕೆ ನಡೆಸುತ್ತಿದ್ದು, ಇದು ಕಾನೂನು ಬದ್ಧವಾಗಿದೆ. ಇಲ್ಲಿ ಇನ್ನು ಕೆಲವು ಅಕ್ರಮ ಗಣಿಗಾರಿಕೆಗಳಿವೆ.
ಗಣಿಗಾರಿಕೆಯು ಪೆರುವಿನ ಆರ್ಥಿಕತೆಯ ಪ್ರಮುಖ ಎಂಜಿನ್ಗಳಲ್ಲಿ ಒಂದಾಗಿದೆ. ಇದು ಜಿಡಿಪಿಯ ಎಂಟು ಪ್ರತಿಶತಕ್ಕಿಂತ ಹೆಚ್ಚಿನದಾಗಿದೆ. ಪೆರು ಜಗತ್ತಿನ ಎರಡನೇ ಅತೀ ದೊಡ್ಡ ತಾಮ್ರ, ಬೆಳ್ಳಿ ಉತ್ಪಾದಿಸುವ ದೇಶವೂ ಹೌದು. ಇಲ್ಲಿ ಗಣಿಗಾರಿಕೆ ಹೆಚ್ಚು ನಡೆಯುವುದರಿಂದ, ಅಗ್ನಿ ಅವಘಢಗಳು ಸಂಭವಿಸುತ್ತಲೇ ಇರುತ್ತದೆ. ಕಳೆದ ವರ್ಷ ಗಣಿ ದುರಂತದಲ್ಲಿ 39 ಮಂದಿ ಸಾವನ್ನಪ್ಪಿದ್ದರು. 2020 ರಲ್ಲಿ, ಅರೆಕ್ವಿಪಾದಲ್ಲಿ ಗಣಿ ಕುಸಿತ ಸಂಭವಿಸಿ, ನಾಲ್ಕು ಕಾರ್ಮಿಕರು ಸಾವನ್ನಪ್ಪಿದರು.
ಲಾಸ್ ಬಾಂಬಾಸ್ ಗಣಿ ಪೆರುವಿನ ಅತಿದೊಡ್ಡ ಗಣಿಗಳಲ್ಲಿ ಒಂದಾಗಿದೆ ಮತ್ತು ವಿಶ್ವದ ತಾಮ್ರದ 2% ಅನ್ನು ಉತ್ಪಾದಿಸುತ್ತದೆ. 2015 ರಲ್ಲಿ, ಲಾಸ್ ಬಾಂಬಾಸ್ ತಾಮ್ರದ ಗಣಿ ದೊಡ್ಡ ಪ್ರಮಾಣದ ಪ್ರತಿಭಟನೆಗಳನ್ನು ಎದುರಿಸಿತು. ಇದು 3 ಜನರ ಸಾವಿಗೂ ಕಾರಣವಾಯಿತು ಮತ್ತು 17 ಮಂದಿ ಗಾಯಗೊಂಡಿದ್ದರು.
A fire broke out deep in a gold mine in southern Peru and killed at least 27 workers during an overnight shift, Peruvian authorities reported. The Yanaquihua mining company said in a statement that a total of 175 workers had been safely evacuated after the accident, which happened late Friday or early Saturday, May 6, 2023. It said the 27 dead worked for a contractor that specialises in mining.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm