ಬ್ರೇಕಿಂಗ್ ನ್ಯೂಸ್
04-05-23 10:02 pm HK News Desk ದೇಶ - ವಿದೇಶ
ಲಕ್ನೋ, ಮೇ 4: ಸೋಮವಾರ ರಾತ್ರಿಯ ಲಕ್ನೋ-ಆರ್ಸಿಬಿ ನಡುವಿನ ಪಂದ್ಯ ಬೇಡದ ಕಾರಣಕ್ಕಾಗಿಯೂ ಸುದ್ದಿಯಾಯಿತು. ಇದರ ಹಿನ್ನೆಲೆಯಲ್ಲಿದ್ದವರು ವಿರಾಟ್ ಕೊಹ್ಲಿ ಮತ್ತು ಲಕ್ನೋ ತಂಡದ ಮೆಂಟರ್ ಗೌತಮ್ ಗಂಭೀರ್. ಪಂದ್ಯದ ಬಳಿಕ ಇವರಿಬ್ಬರ ನಡುವೆ ವಾಕ್ಸಮರ ನಡೆದಿದೆ. ಇಬ್ಬರೂ ಕಾಲು ಕೆರೆದು ಜಗಳಕ್ಕೆ ಮುಂದಾ ಗಿದ್ದರು. ಪರಿಣಾಮ, ಇಬ್ಬರಿಗೂ ಪಂದ್ಯದ ಸಂಭಾವನೆಯ ಶೇ. 100ರಷ್ಟು ದಂಡ ವಿಧಿಸಲಾಗಿದೆ
ಲಕ್ನೋದ ವಿಕೆಟ್ ಬಿದ್ದಾಗಲೆಲ್ಲ ವಿರಾಟ್ ಕೊಹ್ಲಿ ಅತಿರೇಕದ, ಆಕ್ರಮಣಕಾರಿ ವರ್ತನೆ ತೋರು ತ್ತಿದ್ದರು. ಇದಕ್ಕೆ ಕಾರಣ, ಬೆಂಗಳೂರಿನಲ್ಲಿ ನಡೆದ ಇತ್ತಂಡಗಳ ಮೊದಲ ಸುತ್ತಿನ ಪಂದ್ಯ. ಅಂದು ಲಕ್ನೋ ಅಂತಿಮ ಎಸೆತದಲ್ಲಿ ಆರ್ಸಿಬಿಯನ್ನು ಒಂದು ವಿಕೆಟ್ ಅಂತರದಿಂದ ರೋಚಕವಾಗಿ ಮಣಿಸಿತ್ತು. ಆಗ ಗಂಭೀರ್ ಆರ್ಸಿಬಿ ಅಭಿಮಾನಿಗಳನ್ನು ಗುರಿಯಾಗಿಸಿಕೊಂಡು, ಸನ್ನೆ ಮೂಲಕ ಸುಮ್ಮನಿರುವಂತೆ ಸೂಚಿಸಿದ್ದರು. ಗಂಭೀರ್ ಅವರ ಅಂದಿನ ಈ ವರ್ತನೆ ಸಹಜವಾಗಿಯೇ ಕೊಹ್ಲಿ ಅವರನ್ನು ಕೆಣಕುವಂತೆ ಮಾಡಿತ್ತು. ತಮ್ಮ ಆಕ್ರೋಶವನ್ನು ಅವರು ಲಕ್ನೋ ಪಂದ್ಯದ ವೇಳೆ ಹೊರಗೆಡಹಿದರು.
ಆದರೆ ಪರಿಸ್ಥಿತಿ ವಿಕೋಪಕ್ಕೆ ಹೋದದ್ದು ಪಂದ್ಯ ಮುಗಿದ ಬಳಿಕ. ಆಗ ಕೊಹ್ಲಿ ಲಕ್ನೋ ತಂಡದ ಕೈಲ್ ಮೇಯರ್ ಜತೆ ಮಾತಾಡುತ್ತಿದ್ದರು. ಅಲ್ಲಿಗೆ ಬಂದ ಗಂಭೀರ್, ಕೊಹ್ಲಿ ಜತೆ ಮಾತಾಡುವುದು ಬೇಡ ಎಂಬ ರೀತಿಯಲ್ಲಿ ಮೇಯರ್ ಅವರನ್ನು ಕರೆದುಕೊಂಡು ಹೋದರು. ಇದು ಕೊಹ್ಲಿಯನ್ನು ಇನ್ನಷ್ಟು ಕೆರಳಿಸಿತು. ಇಬ್ಬರ ನಡುವೆಯೂ ಮಾತಿಗೆ ಮಾತು ಬೆಳೆಯಿತು.
ಅದರಂತೆ ವಿರಾಟ್ ಕೊಹ್ಲಿ 1.07 ಕೋಟಿ ರೂ. ದಂಡ ಪಾವತಿಸಬೇಕಾಗಿದೆ. ಹಾಗೆಯೇ ಗೌತಮ್ ಗಂಭೀರ್ 25 ಲಕ್ಷ ದಂಡ ಕಟ್ಟಬೇಕಿದೆ. ಅಂದರೆ ಇಲ್ಲಿ ವಿರಾಟ್ ಕೊಹ್ಲಿಯ ಐಪಿಎಲ್ ಸಂಭಾವನೆ 15 ಕೋಟಿ ರೂ.ಗೆ ಅನುಗುಣವಾಗಿ ಪ್ರತಿ ಪಂದ್ಯದ ಶುಲ್ಕ ಸುಮಾರು 1.07 ಕೋಟಿ ರೂ. ಆಗಿರಲಿದೆ. ಆದರೆ ಈ ಮೊತ್ತವನ್ನು ವಿರಾಟ್ ಕೊಹ್ಲಿ ಪಾವತಿಸುವುದಿಲ್ಲ ಎಂಬ ಮಾಹಿತಿಯೊಂದು ಹೊರಬಿದ್ದಿದೆ. ಅಂದರೆ ಇಲ್ಲಿ ವಿರಾಟ್ ಕೊಹ್ಲಿಯ ಐಪಿಎಲ್ ಸಂಭಾವನೆ 15 ಕೋಟಿ ರೂ.ಗೆ ಅನುಗುಣವಾಗಿ ಪ್ರತಿ ಪಂದ್ಯದ ಶುಲ್ಕ ಸುಮಾರು 1.07 ಕೋಟಿ ರೂ. ಆಗಿರಲಿದೆ.
ಇಲ್ಲಿ ವಿರಾಟ್ ಕೊಹ್ಲಿಗೆ ಹಾಗೂ ಗಂಭೀರ್ಗೆ ದಂಡ ವಿಧಿಸಲಾಗಿದ್ದರೂ, ಅದನ್ನು ಪಾವತಿಸುವುದು ಐಪಿಎಲ್ ಮುಕ್ತಾಯದ ಬಳಿಕ. ಅಂದರೆ ಐಪಿಎಲ್ ಮುಗಿದ ನಂತರ ಪ್ರತಿ ತಂಡಗಳಿಗೆ ಹಾಗೂ ಆಟಗಾರರಿಗೆ ವಿಧಿಸಲಾದ ದಂಡ ಮೊತ್ತ ಲೆಕ್ಕವನ್ನು ಫ್ರಾಂಚೈಸ್ಗಳಿಗೆ ನೀಡಲಾಗುತ್ತದೆ. ಅದಕ್ಕನುಗುಣವಾಗಿ ಫೈನ್ ಮೊತ್ತವನ್ನು ಪಾವತಿಸಿ ಕ್ಲಿಯರ್ ಮಾಡಲಾಗುತ್ತದೆ.
ಇಲ್ಲಿ ಕುತೂಹಲಕಾರಿ ವಿಷಯ ಎಂದರೆ ಆರ್ಸಿಬಿ ಫ್ರಾಂಚೈಸ್ ವಿರಾಟ್ ಕೊಹ್ಲಿಯ ದಂಡದ ಮೊತ್ತವನ್ನು ಪಾವತಿಸಲಿದೆ. ಕೊಹ್ಲಿಗೆ ನೀಡಲಿರುವ 15 ಕೋಟಿ ರೂ. ಸಂಭಾವನೆಯಿಂದ ಆರ್ಸಿಬಿ ಯಾವುದೇ ಮೊತ್ತವನ್ನು ಕಡಿತಗೊಳಿಸುವುದಿಲ್ಲ. ಈ ನಷ್ಟದ ಹೊರೆಯನ್ನು ಆರ್ಸಿಬಿ ಫ್ರಾಂಚೈಸಿಯೇ ಭರಿಸಲಿದೆ ವರದಿಯಾಗಿದೆ.
ಹೆಚ್ಚಿನ ಫ್ರಾಂಚೈಸಿಗಳು ತಮ್ಮ ಆಟಗಾರರಿಗೆ ಹಾಗೂ ಸಿಬ್ಬಂದಿಗೆ ವಿಧಿಸಲಾಗುವ ದಂಡದ ಮೊತ್ತವನ್ನು ಪಾವತಿಸುತ್ತದೆ. ಹೀಗಾಗಿ ವಿರಾಟ್ ಕೊಹ್ಲಿ ಅವರ ವೇತನದಲ್ಲಿ ಯಾವುದೇ ಕಡಿತವಾಗುವುದಿಲ್ಲ ಎಂದು ತಿಳಿದು ಬಂದಿದೆ.
ಇದಾಗ್ಯೂ ಆರ್ಸಿಬಿ ಕಿಂಗ್ ಕೊಹ್ಲಿಯ ವೇತನದಲ್ಲಿ ಯಾವುದೇ ಕಡಿತ ಮಾಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಹೀಗಾಗಿ ವಿರಾಟ್ ಕೊಹ್ಲಿ ದಂಡ ಪಾವತಿಸುವುದಿಲ್ಲ, ಬದಲಾಗಿ ಆರ್ಸಿಬಿಯೇ ಆ ವೆಚ್ಚವನ್ನು ಭರಿಸಲಿದೆ.
It was not a pleasant sight to see India's two World Cup-winning team members - Virat Kohli and Gautam Gambhir - nearly coming to blows after an IPL 2023 match. It not only took the sheen away from a low-scoring match in an otherwise record-high-scoring tournament but also painted a grim picture of the two, the one that fans are not exactly unaware of.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm