ಬ್ರೇಕಿಂಗ್ ನ್ಯೂಸ್
18-04-23 07:27 pm HK News Desk ದೇಶ - ವಿದೇಶ
ಮುಂಬೈ, ಎ.18 : ಸೆಕ್ಸ್ ರಾಕೆಟ್ ಜಾಲವನ್ನು ಭೇದಿಸಿರುವ ಮುಂಬೈ ಪೊಲೀಸರು ಕಾಸ್ಟಿಂಗ್ ಡೈರೆಕ್ಟರ್ ಮತ್ತು ನಟಿ ಆರತಿ ಮಿತ್ತಲ್ ರನ್ನು ಬಂಧಿಸಿದ್ದಾರೆ.
ಮುಂಬೈ ಪೊಲೀಸ್ನ ಸಾಮಾಜಿಕ ಸೇವಾ ಶಾಖೆಯು ಈ ರಾಕೆಟ್ ಅನ್ನು ಭೇದಿಸಿದ್ದು ಇಬ್ಬರು ಮಾಡೆಲ್ಗಳನ್ನು ರಕ್ಷಿಸಿದೆ. ಅಲ್ಲದೆ ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಆರತಿ ತಮಗೆ ತಲಾ 15 ಸಾವಿರ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು ಎಂದು ರೂಪದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. 27 ವರ್ಷದ ಆರೋಪಿ ಆರತಿ ಮಿತ್ತಲ್ ಓಶಿವಾರದ ಆರಾಧನಾ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದಾರೆ. ಬೇರೆ ಬೇರೆ ಪ್ರಾಜೆಕ್ಟ್ಗಳಿಗಾಗಿ ಮಾಡೆಲ್ಗಳನ್ನು ಭೇಟಿಯಾಗುತ್ತಿದ್ದಳು ಮತ್ತು ವೇಶ್ಯಾವಾಟಿಕೆಗೆ ದೂಡಲು ದೊಡ್ಡ ಮೊತ್ತದ ಹಣವನ್ನು ನೀಡುತ್ತಿದ್ದಳು.

ಪ್ರಾಜೆಕ್ಟ್ ಮಾಡಬೇಕು ಎಂದು ಬಂದ ಮಾಡೆಲ್ಗಳನ್ನು ಆರತಿ ಪುಸಲಾಯಿಸಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು. ಆರತಿ ಮಾಡೆಲ್ಗಳ ಜೊತೆ ಮಾತನಾಡಿ, ಅವರನ್ನು ತನ್ನ ಕಡೆಗೆ ವಾಲಿಸಿಕೊಂಡು, ಭಾರೀ ಹಣ ಕೂಡ ನೀಡುತ್ತಿದ್ದರು. ಹಾಗಾಗಿ ಮಾಡೆಲ್ಗಳು ಕೂಡ ನಿರಾಕರಣೆ ಮಾಡುತ್ತಿರಲಿಲ್ಲ.
ಮೊದಲು ಗ್ರಾಹಕರಿಗೆ ಮಾಡೆಲ್ ಫೋಟೋ ಕಳಿಸಿ, ಅವರು ಓಕೆ ಅಂದರೆ ಹೋಟೆಲ್ಗೆ ಮಾಡೆಲ್ಗಳನ್ನು ಕಳಿಸುತ್ತಿದ್ದಳು.

ಪೊಲೀಸ್ ಅಧಿಕಾರಿ ಮನೋಜ್ ಸುತರ್ ಅವರಿಗೆ ಈ ಜಾಲದ ಮೊದಲ ಮಾಹಿತಿ ಸಿಕ್ಕಿತ್ತು. ಮನೋಜ್ ಅವರೇ ಆರತಿ ಅವರನ್ನು ಕಾಂಟ್ಯಾಕ್ಟ್ ಮಾಡಿ ತಾವೇ ಗ್ರಾಹಕ ಎಂದು ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೆ ನನ್ನ ಸ್ನೇಹಿತರಿಗೋಸ್ಕರ ಇಬ್ಬರು ಹುಡುಗಿಯರನ್ನು ಕಳಿಸಿ ಎಂದು ಹೇಳಿದ್ದರು. ಇಬ್ಬರು ಹುಡುಗಿಯರನ್ನು ಕಳಿಸಲು 27 ವರ್ಷದ ಕಾಸ್ಟಿಂಗ್ ಡೈರೆಕ್ಟರ್ 60,000 ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ.
ಹೋಟೆಲ್ವೊಂದರಲ್ಲಿ ಇಬ್ಬರು ಹುಡುಗಿಯರನ್ನು ಕಳಿಸುತ್ತೇವೆ ಎಂದು ಆರತಿ ಅವರು ಮನೋಜ್ಗೆ ಹೇಳಿದ್ದರಂತೆ. ಮನೋಜ್ ಅವರು ಆ ಹೋಟೆಲ್ಗೆ ಹೋಗಿ, ರೂಮ್ ಬುಕ್ ಮಾಡಿದ್ದಾರೆ. ಇಬ್ಬರು ಮಾಡೆಲ್ಗಳ ಜೊತೆ ಆರತಿ ಹೋಟೆಲ್ಗೆ ಬಂದಾಗ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಆರತಿ ಹೇಳಿದಂತೆ ನಾವು ಕೇಳಿದರೆ ಪ್ರತಿಯೊಬ್ಬರಿಗೂ 15000 ರೂಪಾಯಿ ಕೊಡುತ್ತಾರೆ ಎಂದು ಮಾಡೆಲ್ಗಳು ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾರೆ.
ಆರತಿ ಕಾಸ್ಟಿಂಗ್ ಡೈರೆಕ್ಟರ್ ಆಗಿ ಗುರುತಿಸಿಕೊಂಡಿದ್ದು, ನಟನೆ ಕೂಡ ಮಾಡುತ್ತಿದ್ದಾರೆ. ಈ ಹಿಂದೆ ಅವರು 'Appnapan- Badalate Rishton Ka Bandhan' ಧಾರಾವಾಹಿಯಲ್ಲಿ ನಟಿಸಿದ್ದರು. ಈಗ ಅವರು ಆರ್ ಮಾಧವನ್ ಜೊತೆ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರಂತೆ. ಮುಂಬೈ ಮೂಲದ ಆರತಿ ಅವರು ಓಶಿವಾರದಲ್ಲಿ ನೆಲೆಸಿದ್ದಾರೆ.
A sex racket operating within the film industry was busted by Crime Branch Unit 11 as informed by the Mumbai Crime Branch officials, according to reports. Mumbai Crime Branch has also informed that the prostitution racket was being managed by casting director and actor Aarti Mittal.
17-01-26 08:02 pm
HK News Desk
ದೇವನಹಳ್ಳಿ - ಬೂದಿಗೆರೆ ರಸ್ತೆಯಲ್ಲಿ ಭೀಕರ ಅಪಘಾತ ; ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm