ಬ್ರೇಕಿಂಗ್ ನ್ಯೂಸ್
14-04-23 03:00 pm HK News Desk ದೇಶ - ವಿದೇಶ
ಟೆಕ್ಸಾಸ್, ಎ.14: ಡೈರಿ ಫಾರ್ಮ್ನಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದಾಗಿ ಅದರಲ್ಲಿದ್ದ ಬರೋಬ್ಬರಿ 18 ಸಾವಿರಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿರುವ ಭೀಕರ ಘಟನೆ ಅಮೆರಿಕದ ಟೆಕ್ಸಾಸ್ನಲ್ಲಿ ನಡೆದಿದೆ.
ಡೈರಿಯಲ್ಲಿ ಸ್ಫೋಟವಾದ ಬೆನ್ನಲ್ಲೇ, ಬೆಂಕಿ ಹೊತ್ತಿ ಉರಿದಿದೆ.
ಘಟನೆಯಲ್ಲಿ ಅನೇಕ ಹಸುಗಳು ಸಜೀವ ದಹನಗೊಂಡಿವೆ. ಇನ್ನೂ ಅನೇಕ ಹಸುಗಳು ಉಸಿರುಗಟ್ಟಿ ಮೃತಪಟ್ಟಿವೆ. ಆದರೆ ಸ್ಫೋಟಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯ ಬಗ್ಗೆ ಡೈರಿಯ ಮಾಲೀಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸ್ಫೋಟಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಫೋಟೋಗಳು ಹರಿದಾಡಿವೆ. ಸ್ಫೋಟದ ಬಳಿಕ ಸ್ಥಳದಲ್ಲಿ ಭಾರೀ ಬೆಂಕಿ ಉದ್ಭವವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಧಾವಿಸಿದ್ದು, ಫಾರ್ಮ್ನಲ್ಲಿ ಸಿಲುಕಿಕೊಂಡಿದ್ದ ಒಬ್ಬ ವ್ಯಕ್ತಿಯನ್ನು ರಕ್ಷಿಣೆ ಮಾಡಿದ್ದಾರೆ.
ಇದೀಗ ಸಾರ್ವಜನಿಕರ ಸುರಕ್ಷತೆಗಾಗಿ ಫಾರ್ಮ್ನ ಸುತ್ತಮುತ್ತಲಿನ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಅಮೆರಿಕದಲ್ಲಿ ಜಾನುವಾರುಗಳ ಕೊಟ್ಟಿಗೆಗಳಲ್ಲಿ ಬೆಂಕಿ ದುರಂತಗಳು ನಡೆದಿರುವುದು ಇದು ಮೊದಲೇನಲ್ಲ. ಆದರೆ ಟೆಕ್ಸಾಸ್ನಲ್ಲಿ ನಡೆದ ಸ್ಫೋಟವು ಅಮೆರಿಕದ ಡೈರಿ ಫಾರ್ಮ್ನಲ್ಲಿ ನಡೆದಿರುವ ಅತ್ಯಂತ ಭೀಕರ ಘಟನೆ ಎನಿಸಿಕೊಂಡಿದೆ.
ಪ್ರತಿವರ್ಷವೂ ಹೀಗೆ ಒಂದಲ್ಲ ಒಂದು ಕಡೆ ಕೊಟ್ಟಿಗೆ, ಹಾಲು ಉತ್ಪಾದಕ ಕೇಂದ್ರಗಳಿಗೆ ಬೆಂಕಿ ಬಿದ್ದು, ಸಾವಿರಾರು ಮೂಕ ಪ್ರಾಣಿಗಳು ಕೊಲ್ಲಲ್ಪಡುತ್ತಿವೆ. ಹೀಗಾಗಿ ಇಂಥ ಕೇಂದ್ರವಿರುವ ಕಟ್ಟಡಗಳಲ್ಲಿ ಹೆಚ್ಚು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು, ಈ ನಿಟ್ಟಿನಲ್ಲಿ ಕಠಿಣ ಕಾನೂನು ರೂಪಿಸಬೇಕು ಎಂದು ಅಲ್ಲಿನ ಪ್ರಾಣಿ ಕಲ್ಯಾಣ ಸಂಸ್ಥೆ ಆಗ್ರಹಿಸಿದೆ. ಕಳೆದ ಒಂದು ದಶಕದಲ್ಲಿ ಸುಮಾರು 6.5 ಮಿಲಿಯನ್ ಪ್ರಾಣಿಗಳು ಹೀಗೆ ಬೆಂಕಿಗೆ ಆಹುತಿಯಾಗಿ ಸಾವನ್ನಪ್ಪಿವೆ ಎಂದೂ ಹೇಳಲಾಗಿದೆ.
ಮೃತವಾದ ಒಂದು ಹಸುವಿನ ಬೆಲೆ 1.63 ಲಕ್ಷ ಇತ್ತು ಎಂದು ತಿಳಿದು ಬಂದಿದೆ. ಅಗ್ನಿಶಾಮಕ ಇಲಾಖೆಯವರು ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದು ತನಿಖೆ ಕೈಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
Explosion at South Fork Dairy Farm in Dimmitt Texas last night. The fire spread into the dairy cow holding pens, and an unknown amount of dairy cattle were killed by the fire and smoke. The cause of the fire is unknown.
— Janebond (@Janebon34813396) April 11, 2023
Yet another incident affecting food supply. pic.twitter.com/4syPJicbng
In a horrific incident, over 18,000 cows died in an explosion leading to a fire at a family dairy farm in the southern US state of Texas, reports said. The explosion, which caused the deadliest barn fire in the history of Texas, injured one agricultural worker, authorities said on Thursday. According to a report in AFP, the explosion and fire ripped through the Southfork Dairy Farms near the town of Dimmitt in the Texas Panhandle on Monday night.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm