ಬ್ರೇಕಿಂಗ್ ನ್ಯೂಸ್
26-03-23 02:28 pm HK News Desk ದೇಶ - ವಿದೇಶ
ನವದೆಹಲಿ, ಮಾ.26 : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಇಂಗ್ಲೆಂಡ್ ಮೂಲದ 36 ಉಪಗ್ರಹಗಳನ್ನು ಹೊತ್ತ ದೇಶದ ಅತಿದೊಡ್ಡ ಉಡಾವಣಾ ವಾಹನ ಮಾರ್ಕ್ -3 (ಎಲ್ ವಿಎಂ3) ಯನ್ನು ಭಾನುವಾರ ಬೆಳಗ್ಗೆ ಆಂಧ್ರಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಒನ್ ವೆಬ್ ಇಂಡಿಯಾ-3 ಉದ್ದೇಶದ 36 ಉಪಗ್ರಹಗಳನ್ನು ತನ್ನ ಒಡಲಲ್ಲಿ ಒಟ್ಟುಕೊಂಡ ಈ ರಾಕೆಟ್ ನಭಕ್ಕೆ ನೆಗೆದಿದೆ.
ಎಲ್‌ವಿಎಂ3 ರಾಕೆಟ್‌ನ ಎರಡನೇ ವಾಣಿಜ್ಯ ಉಡಾವಣೆಯ ಕ್ಷಣಗಣನೆಯನ್ನು ಶನಿವಾರ ಆರಂಭಿಸಲಾಗಿತ್ತು. 43.5 ಮೀಟರ್ ಎತ್ತರದ ರಾಕೆಟ್ ಅನ್ನು ಇಂದು ಬೆಳಗ್ಗೆ 9 ಗಂಟೆಗೆ ಲಾಂಚ್ ಮಾಡಲಾಯಿತು. 5,805 ಕೆಜಿ ತೂಕದ 36 ಮೊದಲ ತಲೆಮಾರಿನ ಉಪಗ್ರಹಗಳನ್ನು ಸುಮಾರು 450 ಕಿಲೋಮೀಟರ್ ವೃತ್ತಾಕಾರದ ಕಕ್ಷೆಯಲ್ಲಿ ಸ್ಥಾಪಿಸಲಾಗುತ್ತದೆ ಎಂದು ಇಸ್ರೋ ಮಾಹಿತಿ ನೀಡಿದೆ.
![]()
ಇಂಗ್ಲೆಂಡ್ ಮೂಲದ ನೆಟ್‌ವರ್ಕ್ ಆಕ್ಸೆಸ್ ಅಸೋಸಿಯೇಟೆಡ್ ಲಿಮಿಟೆಡ್ (ಒನ್‌ವೆಬ್) ಗೆ ಸೇರಿದ 36 ಉಪಗ್ರಹಗಳನ್ನು ಭೂಮಿಯ ಕೆಳ ಭೂಸ್ಥಾಯಿ ಕಕ್ಷೆಯಲ್ಲಿ ಉಡಾವಣಾ ವಾಹಕ ಇಳಿಸಲಿದೆ. ಒನ್‌ವೆಬ್ ಗ್ರೂಪ್‌ನ 72 ಉಪಗ್ರಹಗಳನ್ನು ಕೆಳ ಭೂಸ್ಥಾಯಿ ಕಕ್ಷೆಗೆ ತಲುಪಿಸುವ ಒಪ್ಪಂದವನ್ನು ಈ ಕಂಪನಿಯು ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್‌ನೊಂದಿಗೆ ಮಾಡಿಕೊಂಡಿದೆ.
ಒನ್‌ವೆಬ್ ಎನ್ನುವುದು ಉಪಗ್ರಹಗಳ ಮೂಲಕ ಇಂಟರ್ನೆಟ್ ವ್ಯವಹಾರಗಳನ್ನು ನಿರ್ವಹಿಸುವ ಜಾಗತಿಕ ಜಾಲವಾಗಿದೆ. ಒನ್‌ವೆಬ್‌ಗೆ ಭಾರತದ ಕಡೆಯಿಂದ ಭಾರ್ತಿ ಎಂಟರ್‌ಪ್ರೈಸಸ್ ಹೂಡಿಕೆದಾರ ಕಂಪನಿಯಾಗಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಒನ್ ವೆಬ್‌ನ ಮೊದಲ ಹಂತದ ಉಪಗ್ರಹಗಳನ್ನು ಇಸ್ರೊ ರಾಕೆಟ್ ಯಶಸ್ವಿಯಾಗಿ ಕಕ್ಷೆಗೆ ತಲುಪಿಸಿತ್ತು. 36 ಒನ್‌ವೆಬ್ ಉಪಗ್ರಹಗಳನ್ನು ತನ್ನ ಬೃಹತ್ ರಾಕೆಟ್ ಜಿಎಸ್‌ಎಲ್‌ವಿ ಮಾರ್ಕ್ 3 ಮೂಲಕ ನಿಗದಿತ ಕಕ್ಷೆಗೆ ತಲುಪಿಸಿತ್ತು. ಇದೀಗ ಮತ್ತೆ 35 ಉಪಗ್ರಹಗಳನ್ನು ಒನ್ ವೆಬ್ ಇಂಡಿಯಾ ಮಿಷನ್- ೨ ಭಾಗವಾಗಿ ಬಾಹ್ಯಾಕಾಶ ಕಕ್ಷೆಗೆ ಸೇರಿಸಲಾಗಿದೆ. ಭವಿಷ್ಯದಲ್ಲಿ ಅಂತರ್ಜಾಲವನ್ನು ಉಪಗ್ರಹಗಳ ಮೂಲಕ ಪಡೆಯುವ ದೂರಗಾಮಿ ಗುರಿಯನ್ನು ಇದರ ಹಿಂದಿನ ಉದ್ದೇಶವಾಗಿದೆ.
The Indian Space Research Organisation (ISRO) on Sunday successfully launched India’s largest Launch Vehicle Mark-III (LVM3) rocket/OneWeb India-2 Mission with 36 satellites onboard from Satish Dhawan Space Centre in Sriharikota, Andhra Pradesh.
17-01-26 08:02 pm
HK News Desk
ದೇವನಹಳ್ಳಿ - ಬೂದಿಗೆರೆ ರಸ್ತೆಯಲ್ಲಿ ಭೀಕರ ಅಪಘಾತ ; ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm