ಬ್ರೇಕಿಂಗ್ ನ್ಯೂಸ್
27-02-23 08:07 pm HK News Desk ದೇಶ - ವಿದೇಶ
ನವದೆಹಲಿ, ಫೆ.27: ಜಗತ್ತಿನ ಮೂರನೇ ಅತಿ ದೊಡ್ಡ ಶ್ರೀಮಂತ ಎನ್ನಿಸಿದ್ದ ಉದ್ಯಮಿ ಗೌತಮ್ ಅದಾನಿ ಅವರ ರ‍್ಯಾಂಕ್ ಈಗ 38ನೇ ಸ್ಥಾನಕ್ಕೆ ಕುಸಿದಿದೆ.
ಸತತ ಆರನೇ ವಾರವೂ ಅದಾನಿ ಸಮೂಹದ ಷೇರುಗಳ ಕುಸಿತ ಮುಂದುವರಿದಿದ್ದು, ಹೂಡಿಕೆದಾರರ ಮನಗೆಲ್ಲಲು ಗೌತಮ್ ಅದಾನಿ ನಡೆಸುತ್ತಿರುವ ಯಾವ ಪ್ರಯತ್ನವೂ ಫಲ ನೀಡುವಂತೆ ಕಾಣಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಏಷ್ಯಾದ ಸ್ಥಿರ-ಆದಾಯದ ಹೂಡಿಕೆದಾರರನ್ನು ಮೋಡಿ ಮಾಡಲು ಹೊರಟಿರುವ ಅದಾನಿ ಗ್ರೂಪ್, ಜಾಗತಿಕ ಪ್ರವಾಸಕ್ಕೆ ಸಜ್ಜಾಗಿದೆ.
ಅಮೆರಿಕದ ಶಾರ್ಟ್‌ಸೆಲ್ಲರ್ ಹಿಂಡೆನ್‌ಬರ್ಗ್ ರಿಸರ್ಚ್ ಅದಾನಿ ಸಮೂಹದ ವಿರುದ್ಧ ಲೆಕ್ಕಪತ್ರ ವಂಚನೆ ಮತ್ತು ಷೇರು ತಿರುಚುವಿಕೆಯ ಆರೋಪಗಳನ್ನು ಮಾಡಿದ ಬಳಿಕ ಗ್ರೂಪ್‌ನ ಎಲ್ಲಾ 10 ಕಂಪನಿಗಳ ಷೇರುಗಳು ಒಂದೇ ಸಮನೆ ಕುಸಿತ ಕಾಣುತ್ತಿವೆ.
ಅವಧಿಗೂ ಮುನ್ನ ಸಾಲ ಪಾವತಿ, ಸಾಕಷ್ಟು ನಗದು ಹರಿವು ಇದೆ ಎನ್ನುವುದು ಸೇರಿದಂತೆ ಹೂಡಿಕೆದಾರರ ಮನಗೆಲ್ಲಲು ಈಗಾಗಲೇ ಹಲವು ತಂತ್ರಗಳನ್ನು ಅದಾನಿ ಗ್ರೂಪ್ ಮಾಡಿದೆ. ಆದರೆ ಇವ್ಯಾವುದೂ ನಿರೀಕ್ಷಿತ ಫಲ ಕೊಟ್ಟಿಲ್ಲ. ಹೀಗಾಗಿ ಇದೀಗ ಮಹತ್ವದ ಪ್ರಯತ್ನವಾಗಿ ಜಾಗತಿಕ ಪ್ರವಾಸ ಆಯೋಜನೆಯಾಗಿದೆ.
ಸುಮಾರು ಒಂದು ಡಜನ್ ಜಾಗತಿಕ ಬ್ಯಾಂಕುಗಳು ಸೋಮವಾರ ಸಿಂಗಾಪುರದ ಕ್ಯಾಪಿಟಲ್ ಕೆಂಪಿನ್ಸ್‌ಕಿ ಹೋಟೆಲ್‌ನಲ್ಲಿ ಹೂಡಿಕೆದಾರರ ಸಭೆಗಳನ್ನು ಆಯೋಜಿಸಲು ಸಹಾಯ ಮಾಡಿವೆ. ಬಿಲಿಯನೇರ್ ಗೌತಮ್ ಅದಾನಿ ಬೆಂಬಲಿತ ಸಂಸ್ಥೆಯು ಮಂಗಳವಾರ ಮತ್ತು ಬುಧವಾರ ಹಾಂಕಾಂಗ್‌ನ ಬಾರ್ಕ್ಲೇಸ್ ಪಿಎಲ್‌ಸಿ ಕಚೇರಿಯಲ್ಲಿ ಸಭೆಗಳನ್ನು ನಡೆಸಲಿದೆ. ಗುಂಪಿನ ಮುಖ್ಯ ಹಣಕಾಸು ಅಧಿಕಾರಿ ಜುಗೇಶಿಂದರ್ ಸಿಂಗ್ ಮತ್ತು ಕಾರ್ಪೊರೇಟ್ ಹಣಕಾಸು ಮುಖ್ಯಸ್ಥ ಅನುಪಮ್ ಮಿಶ್ರಾ ಅವರು ಈ ಸಭೆಗಳಿಗೆ ಹಾಜರಾಗಲಿದ್ದಾರೆ.
ಸಿರಿವಂತರ ಪಟ್ಟಿಯಲ್ಲಿ 38ನೇ ಸ್ಥಾನಕ್ಕೆ ಜಾರಿದ ಅದಾನಿ ;
ಈ ಭಾರೀ ಕುಸಿತದೊಂದಿಗೆ ಗೌತಮ್ ಅದಾನಿ ವೈಯಕ್ತಿಕ ಸಂಪತ್ತು 33.4 ಬಿಲಿಯನ್ ಡಾಲರ್‌ಗೆ ಕುಸಿತ ಕಂಡಿದ್ದು, ಫೋರ್ಬ್ಸ್ ರಿಯಲ್ ಟೈಮ್ ಸಿರಿವಂತರ ಪಟ್ಟಿಯಲ್ಲಿ 38ನೇ ಸ್ಥಾನಕ್ಕೆ ಕುಸಿದಿದ್ದಾರೆ. ಒಂದು ಹಂತದಲ್ಲಿ ಅವರ ವೈಯಕ್ತಿಕ ಸಂಪತ್ತು 130 ಬಿಲಿಯನ್ ಡಾಲರ್ ಆಸುಪಾಸಿನಲ್ಲಿತ್ತು, ಜಗತ್ತಿನ ಸಿರಿವಂತರಲ್ಲೇ 3ನೇ ಸ್ಥಾನದಲ್ಲಿ ಅದಾನಿ ಇದ್ದರು.
Billionaire Gautam Adani has lost more than a third of his total fortune in just a month as his net worth dropped below $40 billion on Monday, showed updated data on the Bloomberg Billionaires Index. Adani, 60, has seen his net worth deplete over $80 billion during a month – from $120 billion to $39.9 billion. With this, Gautam Adani’s net worth has hit a two-year low. His net worth was last seen at the current level in February 2021.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm