ಬ್ರೇಕಿಂಗ್ ನ್ಯೂಸ್
06-02-23 09:16 pm HK News Desk ದೇಶ - ವಿದೇಶ
ಇಸ್ತಾನ್ ಬುಲ್, ಫೆ.6: ಆಧುನಿಕ ಟರ್ಕಿಯ ಪಾಲಿಗೆ ಫೆ.6, 2023 ಕರಾಳವಾಗಿ ಪರಿಣಮಿಸಿದೆ. ಟರ್ಕಿ ಆಸುಪಾಸಿನಲ್ಲಿ ಒಂದೇ ದಿನ ಮತ್ತೆ ಎರಡು ಬಾರಿ ಭೂಮಿ ಜೋರಾಗಿ ಕಂಪಿಸಿದೆ. ಬೆಳ್ಳಂಬೆಳಗ್ಗೆ 7.8 ತೀವ್ರತೆಯಲ್ಲಿ ಭೂಕಂಪನ ಆಗಿದ್ದರಿಂದ ಭಾರೀ ಸಾವು- ನೋವು ಉಂಟಾಗಿತ್ತು. ಆನಂತರ, ಮಧ್ಯಾಹ್ನ ಸುಮಾರಿಗೆ 7.6 ತೀವ್ರತೆಯಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದೆ. ಸಂಜೆಯ ವೇಳೆ ಇನ್ನೊಂದು ಬಾರಿ ರಿಕ್ಟರ್ ಮಾಪಕದಲ್ಲಿ 6 ತೀವ್ರತೆಯಲ್ಲಿ ಭೂಮಿ ಕಂಪನವಾಗಿದೆ.
ಇದೇ ವೇಳೆ, ಟರ್ಕಿ ಮತ್ತು ನೆರೆರಾಷ್ಟ್ರ ಸಿರಿಯಾದಲ್ಲಿ ಒಟ್ಟು ಸಾವಿನ ಸಂಖ್ಯೆ 2500ಕ್ಕೂ ಹೆಚ್ಚಿದೆ. ಟರ್ಕಿ ಒಂದರಲ್ಲೇ ಒಂದೂವರೆ ಸಾವಿರದಷ್ಟು ಜನರು ಸಾವಿಗೀಡಾದ ಅಧಿಕೃತ ಅಂಕಿ ಅಂಶಗಳು ಲಭ್ಯವಾಗಿವೆ. 900ಕ್ಕೂ ಹೆಚ್ಚು ಸಾವು ಸಿರಿಯಾದಲ್ಲಿ ಆಗಿರುವುದು ದೃಢಪಟ್ಟಿದೆ. ಇದಲ್ಲದೆ, ಹಲವಾರು ಕಡೆಗಳಲ್ಲಿ ಬೃಹತ್ ಕಟ್ಟಡಗಳು ನೆಲಕ್ಕುರುಳಿದ್ದು, ಅದರಡಿ ಇನ್ನೂ ಜನರು ಸಿಕ್ಕಿಕೊಂಡಿರುವ ಮಾಹಿತಿಗಳಿವೆ.
ಟರ್ಕಿಯಲ್ಲೇ ಯಾಕೆ ಪದೇ ಪದೇ ಕಂಪನ ?
ಭೂಕಂಪ ಸಾಮಾನ್ಯವಾಗಿ ಭೂಮಿಯೊಳಗಿನ ಟೆಕ್ಟೋನಿಕ್ ಪ್ಲೇಟ್ ಗಳ ಘರ್ಷಣೆಯಿಂದಾಗಿ ಸಂಭವಿಸುತ್ತದೆ. ಟರ್ಕಿ ಅನ್ನುವ ದೇಶದ ಭೂಭಾಗ ನಾಲ್ಕು ಟೆಕ್ಟೋನಿಕ್ ಪ್ಲೇಟ್ ಗಳನ್ನು ಹೊಂದಿಕೊಂಡಿರುವ ಜಾಗದಲ್ಲಿ ಇರುವುದರಿಂದ ಸಣ್ಣ ಮಟ್ಟಿನ ಘರ್ಷಣೆ ಆದರೂ ಇಲ್ಲಿ ಪ್ರಬಲ ಕಂಪನ ಉಂಟಾಗುತ್ತದೆ. ಉತ್ತರದಿಂದ ಯುರೋಪ್ ಖಂಡ ಇರುವ ಯುರೇಶಿಯಾ, ದಕ್ಷಿಣದಿಂದ ಆಫ್ರಿಕಾ, ಪೂರ್ವದಿಂದ ಏಶ್ಯಾ ಮತ್ತು ಅರೇಬಿಕ್ ಪ್ಲೇಟ್ ಗಳು ಒಂದೇ ಕಡೆಯಲ್ಲಿ ಘರ್ಷಣೆಯಲ್ಲಿ ತೊಡಗಿದ್ದು, ಇದರಿಂದಾಗಿ ಆ ಭಾಗದಲ್ಲಿ ಪದೇ ಪದೇ ಕಂಪನಗಳಾಗುತ್ತವೆ ಅನ್ನುವುದು ತಜ್ಞರ ಮಾಹಿತಿ.
ಸಾಮಾನ್ಯವಾಗಿ ಭೂಕಂಪಗಳನ್ನು 1ರಿಂದ ಹತ್ತರ ನಡುವೆ ರಿಕ್ಟರ್ ಮಾಪಕದಲ್ಲಿ ಅಳೆಯುತ್ತಾರೆ. 1ರಿಂದ ನಾಲ್ಕರ ನಡುವೆ ಕಂಪನ ಉಂಟಾಗುವುದು ಸಾಮಾನ್ಯ. ಅದರಿಂದ ಹಾನಿಯೇನೂ ಆಗುವುದಿಲ್ಲ. ಐದರಿಂದ ಆರು ಗಂಭೀರ ಸ್ವರೂಪದ್ದು. ಅದಕ್ಕಿಂತ ಹೆಚ್ಚಿನದ್ದು ತೀರಾ ಗಂಭೀರ ಸ್ವರೂಪದ್ದು ಮತ್ತು ಅತಿಹೆಚ್ಚು ಹಾನಿಗಳನ್ನು ಮಾಡಬಲ್ಲದು ಎಂದು ವಿಭಾಗಿಸಲಾಗಿದೆ. ಈತನಕದ ಅತಿಹೆಚ್ಚು ಹಾನಿ ಮಾಡಲ್ಪಟ್ಟ 9.5ರ ಭೂಕಂಪನ 1960ರಲ್ಲಿ ಚಿಲಿ ದ್ವೀಪ ಸಮೂಹದಲ್ಲಿ ಸಂಭವಿಸಿತ್ತು. ವಾಲ್ದಿವಿಯಾ ಎನ್ನುವ ದ್ವೀಪದಲ್ಲಿ ನಡೆದ ಈ ಕಂಪನ ಹತ್ತು ನಿಮಿಷಗಳ ಕಾಲ ಭೂಮಿಯನ್ನು ಅದುರಿಸಿತ್ತು.
ಟರ್ಕಿಯಲ್ಲಿ ಈ ಹಿಂದೆ 1939ರಲ್ಲಿ ಇದೇ ರೀತಿ 7.8 ತೀವ್ರತೆಯ ಭೂಕಂಪನ ಆಗಿತ್ತು. ಆಗಿನ ಕಾಲದಲ್ಲಿ 32,700 ಜನರು ಸಾವು ಕಂಡಿದ್ದರು. 1999ರಲ್ಲಿ ನಡೆದ 7.6 ತೀವ್ರತೆಯ ಕಂಪನದಲ್ಲಿ 17 ಸಾವಿರ ಜನರು ಪ್ರಾಣ ಕಳಕೊಂಡಿದ್ದರು. ಕಳೆದ ಒಂದು ಶತಮಾನದಲ್ಲಿ ಹತ್ತಕ್ಕೂ ಅಧಿಕ ಬಾರಿ ಗಂಭೀರ ಸ್ವರೂಪದ ಕಂಪನಗಳಾಗಿದ್ದು ಸಾವಿರಾರು ಜನರು ಅಲ್ಲಿ ಸಾವಿಗೀಡಾಗಿದ್ದು ಇತಿಹಾಸ. ಈ ಬಾರಿ ಫೆ.6ರ ದಿನ ಟರ್ಕಿ ಮತ್ತು ಸಿರಿಯಾ ಪಾಲಿಗೆ ಮರಣ ಮೃದಂಗ ಬಾರಿಸಿದೆ. ಮೂರು ಬಾರಿ ಕಂಪನ ಆಗಿರುವುದರಿಂದ ಸಾವಿನ ಸಂಖ್ಯೆ ಲೆಕ್ಕಕ್ಕೆ ಸಿಗದಷ್ಟು ಹೆಚ್ಚುವ ಸಾಧ್ಯತೆಯಿದೆ.
Another massive 7.6 magnitude earthquake struck the Elbistan district in Turkey's Kahramanmaras province on Monday, the Turkish Disaster and Management Authority said. Fresh tremors were also felt in Damascus, Latakia, and other Syrian provinces, Syria's SANA news agency reported. The US Geological Survey said it measured the strength of the second earthquake to be 7.5 magnitudes, higher than the first one that struck in the early hours of Monday.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am