ಬ್ರೇಕಿಂಗ್ ನ್ಯೂಸ್
02-02-23 06:35 pm HK News Desk ದೇಶ - ವಿದೇಶ
ಕ್ಯಾಲಿಫೋರ್ನಿಯಾ, ಫೆ.2: ಆತ 45 ವರ್ಷದ ಸಾಫ್ಟ್ ವೇರ್ ಉದ್ಯಮಿ. ಹಲವಾರು ಸಂಸ್ಥೆಗಳಿಗೆ ಸಿಇಓ ಆಗಿದ್ದಾನೆ. ಕೆಲವು ಸಂಸ್ಥೆಗಳನ್ನು ತಾನೇ ನಡೆಸುತ್ತಿದ್ದಾನೆ. ಅಮೆರಿಕದ ಕ್ಯಾಲಿಫೋರ್ನಿಯಾದ ಮಿಲಿಯನೇರ್ ಆಗಿರುವ ಬ್ರ್ಯಾನ್ ಜಾನ್ಸನ್ ಅನ್ನುವ ಈ ವ್ಯಕ್ತಿಗೆ ವಿಚಿತ್ರ ಆಸೆಯೊಂದು ಮೂಡಿದೆ. ತನಗೇಕೆ ವಯಸ್ಸಾಗುತ್ತಿದೆ, ಚರ್ಮ ಸುಕ್ಕುಗಟ್ಟುವುದು, ಕೂದಲು ಬೆಳ್ಳಗಾಗುವುದನ್ನು ಯಾಕೆ ನಿಲ್ಲಿಸಬಾರದು. ತನ್ನ ಚರ್ಮ, ಹೃದಯ, ಶಾರೀರ ಪೂರ್ತಿ 18ರ ಯುವಕನಂತೆ ಯಾಗಾಕಬಾರದು ಎನ್ನುವ ಗುರಿ ಇಟ್ಟುಕೊಂಡು ತನ್ನನ್ನೇ ತಾನು ಪ್ರಯೋಗಕ್ಕೆ ಒಡ್ಡಿಕೊಂಡಿದ್ದಾನೆ.
ಇದಕ್ಕಾಗಿ 30 ಮಂದಿ ವಿವಿಧ ರೀತಿಯ ತಜ್ಞರನ್ನು ನೇಮಕ ಮಾಡಿದ್ದು, ಅವರು ಹೇಳಿದಂತೆ ನಿಯಮಿತ ಆಹಾರ, ವ್ಯಾಯಾಮದಲ್ಲಿ ತೊಡಗಿದ್ದಾನೆ. ವೈದ್ಯರು ಜಾನ್ಸನ್ ಇರುವ ವೆನೀಸ್ ನಗರದ ಮನೆಯಲ್ಲೇ ಇದ್ದುಕೊಂಡು ಆತನ ದೇಹದ ಮೇಲೆ ನಿಗಾ ವಹಿಸಿದ್ದಾರೆ. ದಿನಕ್ಕೊಂದು ಗಂಟೆ ವ್ಯಾಯಾಮ, ರಾತ್ರಿ 8 ಗಂಟೆ ನಿದ್ದೆ, ವಾರದಲ್ಲಿ ಮೂರು ದಿನ ಕಠಿಣ ವ್ಯಾಯಾಮ, ರಾತ್ರಿಯ ನಿದ್ದೆಯ ಮಧ್ಯೆ ಎರಡು ಗಂಟೆಗಳಿಗೊಮ್ಮೆ ಬ್ಲೂ ಲೈಟ್ ತಪ್ಪಿಸಲು ಕಣ್ಣಿಗೆ ಗ್ಲಾಸ್ ಹಾಕುವುದು, ದಿನದಲ್ಲಿ 1977 ಕ್ಯಾಲರಿ ಇರುವಷ್ಟು ಆಹಾರ ತೆಗೆದುಕೊಳ್ಳುವುದು ಹೀಗೆ ಪೂರ್ತಿಯಾಗಿ ಡಯಟ್ ಅಭ್ಯಾಸ ಮಾಡುತ್ತಿದ್ದಾರೆ.
ಇದಲ್ಲದೆ, ಶರೀರದಲ್ಲಿ ಆಗುತ್ತಿರುವ ಬದಲಾವಣೆ ತಿಳಿಯಲು ದೇಹದಲ್ಲಿಯೇ ಬ್ಯಾಟರಿ ಸೆಲ್ ಇಟ್ಟು ತನ್ನಿಂತಾನೇ ವರ್ಕ್ ಆಗುವಂತೆ ಪರೀಕ್ಷೆ ನಡೆಸುತ್ತಿದ್ದಾರೆ. ಪ್ರತಿ ತಿಂಗಳು ಸ್ಕ್ಯಾನಿಂಗ್, ಎಕ್ಸ್ ರೇ ಮತ್ತಿತರ ಪರೀಕ್ಷೆಗಳನ್ನು ನಡೆಸುತ್ತಿದ್ದು, ಆಮೂಲಕ ದೇಹದ ರಕ್ತದ ಗತಿಯ ಮೇಲೆ ನಿಗಾ ಇಟ್ಟಿದ್ದಾರೆ. ಹಾಲಿವುಡ್ ಸೂಪರ್ ಸ್ಟಾರ್ ಮತ್ತು ಅತ್ಲೀಟ್ ಗಳಿಗೆ ಚಿಕಿತ್ಸೆ ನೀಡುತ್ತಿದ್ದ ಜೆಫ್ ಟಾಲ್, ಮೆಡಿಕಲ್ ಟರ್ಮ್ ಪ್ರಕಾರ ಬ್ರ್ಯಾನ್ ಜಾನ್ಸನ್ ಯುವಕನಾಗುತ್ತಿದ್ದಾರೆ, ನಮ್ಮ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಜಾನ್ಸನ್ ಗುರಿ ಎಷ್ಟಿದೆಯಂದ್ರೆ, ತನ್ನ ದೇಹದ ಗಾತ್ರವೂ 18ರ ಯುವಕನ ರೀತಿಯಲ್ಲೇ ಕಿರಿದಾಗಬೇಕು. ಶಿಶ್ನ, ಹೃದಯ, ಶ್ವಾಸಕೋಶದಿಂದ ಹಿಡಿದು ಲಿವರ್, ಕಿಡ್ನಿ, ಹಲ್ಲು, ಚರ್ಮ ಎಲ್ಲವೂ ಹರೆಯದ ಯುವಕನಂತೆ ಆಗಬೇಕು ಅನ್ನುವ ಕನಸು ಹೊತ್ತಿದ್ದಾನೆ. ಇದಕ್ಕೆಲ್ಲ ಒಂದು ವರ್ಷಕ್ಕೆ ಸುಮಾರು 2 ಮಿಲಿಯನ್ ಡಾಲರ್ ಹಣವನ್ನು ಹೂಡಿಕೆ ಮಾಡುತ್ತಿದ್ದಾನೆ. ಇಷ್ಟಕ್ಕೂ ಇದನ್ನೆಲ್ಲ ಮಾಡುತ್ತಿರೋದು ಅತ್ಯಂತ ಸ್ವಸ್ಥ ಶರೀರವನ್ನು ಹೊಂದಿರುವ ವ್ಯಕ್ತಿಯೇ ಆಗಿದ್ದು, ಮತ್ತೆ ಹರೆಯದ ಯುವಕನಾಗಬೇಕೆಂಬ ಹುಚ್ಚಿನಿಂದ ಇಂಥ ಪ್ರಯತ್ನಕ್ಕೆ ಕೈಹಾಕಿದ್ದಾನೆ.
ಅಮೆರಿಕದಲ್ಲಿ ಖ್ಯಾತಿವೆತ್ತ ಉದ್ಯಮಿಯಾಗಿರುವ ಬ್ರ್ಯಾನ್ ಜಾನ್ಸನ್ ಹಲವು ಕಂಪನಿಗಳ ಪಾಲಿಗೆ ಸಿಇಓ ಆಗಿದ್ದಾನೆ. ಬ್ರೈನ್ ಟ್ರೀ ಎನ್ನುವ ಸಂಸ್ಥೆ ಸ್ಥಾಪಿಸಿದ್ದ ಜಾನ್ಸನ್, ವೆಬ್ ಡೆವಲಪರ್ ಕೂಡ. ಆನ್ಲೈನ್ ಪಾವತಿ ವ್ಯವಸ್ಥೆಗಾಗಿ ತನ್ನದೇ ವೆಬ್ ಪೇಮೆಂಟ್ ಸಿಸ್ಟಮ್ ಅನ್ನೂ ಡೆವಲಪ್ ಮಾಡಿದ್ದ. ಜೊತೆಗೆ, ಕಾದಂಬರಿಯನ್ನೂ ಬರೆದಿದ್ದು ಲೇಖಕನಾಗಿಯೂ ಗುರುತಿಸಿದ್ದಾನೆ.
His is 45 years old, but his organs would ‘argue otherwise’. Bryan Johnson, a rich software entrepreneur is on a mission to defy his body’s ageing process - and 18 - the prime age, is his goal. As detailed in a report by Bloomberg, Johnson has employed more than 30 medical professionals keeping an eye on every aspect of his health. Oliver Zolman, a specialist specialising in regenerative medicine, and his group have pledged to work to slow down the ageing process in each of Johnson’s organs.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am