ಬ್ರೇಕಿಂಗ್ ನ್ಯೂಸ್
11-11-22 09:17 pm HK News Desk ದೇಶ - ವಿದೇಶ
ಇಂದೋರ್, ನ.11 : ಇಬ್ಬರು ಮಹಿಳೆಯರು ತಮ್ಮ ಸ್ವ ಇಚ್ಛೆಯಿಂದ ಒಟ್ಟಿಗೆ ವಾಸಿಸಲು ಬಯಸಿದರೆ ನ್ಯಾಯಾಲಯದಿಂದ ಅವರನ್ನು ತಡೆಯಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ.
22ರ ಹರೆಯದ ಮಹಿಳೆಯೊಂದಿಗೆ ಬದುಕುತ್ತೇನೆಂದು ಮನೆ ಬಿಟ್ಟು ಹೋಗಿದ್ದ 18 ವರ್ಷದ ಯುವತಿಯ ತಂದೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿದ್ದು ಈ ರೀತಿ ಅಭಿಪ್ರಾಯ ನೀಡಿದೆ. ಜಬಲ್ ಪುರದ ಹದಿಹರೆಯದ ಹುಡುಗಿ ಮತ್ತು ಆಕೆಯೊಂದಿಗಿನ ಮಹಿಳೆ ಇಬ್ಬರೂ ಜೊತೆಗೇ ಬೆಳೆದವರು. ಒಟ್ಟಿಗೇ ಅಧ್ಯಯನ ಮಾಡಿದ್ದರು. ಈಗ ಭಾವನಾತ್ಮಕವಾಗಿ ಅವರು ಒಂದಾಗಿದ್ದು, ಈಗ ಪ್ರತ್ಯೇಕ ಬದುಕಲು ಸಿದ್ಧರಿಲ್ಲ. ಒಟ್ಟಿಗೆ ಇರಲು ಬಯಸಿದ್ದಾರೆ.
ಮನೆಯವರು ವಿಷಯ ತಿಳಿದು ತಮ್ಮ ಮಗಳನ್ನು ಕಸ್ಟಡಿಗೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ತನ್ನ ಮಗಳು ಸ್ನೇಹಿತೆ ಜೊತೆಯಲ್ಲಿ ಉಳಿಯುವ ಬದಲು ಕುಟುಂಬದೊಂದಿಗೆ ಇರುವಂತೆ ಮನವೊಲಿಸಲು ಪ್ರಯತ್ನಿಸಿದೆ. ಆದರೆ ಅವಳು ಒಪ್ಪಲಿಲ್ಲ. ತಮ್ಮದೇ ಕಸ್ಟಡಿಗೆ ನೀಡುವಂತೆ ಆಕೆಯ ತಂದೆ ನ್ಯಾಯಾಲಯಕ್ಕೆ ಕೇಳಿಕೊಂಡಿದ್ದಾರೆ. ಅರ್ಜಿಯನ್ನು ಸ್ವೀಕರಿಸಿದ ಹೈಕೋರ್ಟ್ ಬಾಲಕಿಗೆ ನೋಟಿಸ್ ಜಾರಿ ಮಾಡಿ, ಕೋರ್ಟಿಗೆ ಹಾಜರಾಗುವಂತೆ ಸೂಚಿಸಿದೆ. ಆದರೆ, ಕೋರ್ಟಿಗೆ ಹಾಜರಾದ ಹುಡುಗಿ, ತನ್ನ ಸ್ನೇಹಿತೆಯೊಂದಿಗೆ ವಾಸಿಸಲು ಅವಕಾಶ ನೀಡುವಂತೆ ಆಕೆ ಮನವಿ ಮಾಡಿದ್ದಾಳೆ.
ಹುಡುಗಿ ವಯಸ್ಕಳಾಗಿದ್ದು, ಜೀವನದ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳಬಹುದು. ತಮ್ಮ ಸ್ವಂತ ಇಚ್ಛೆಯಿಂದ ಒಟ್ಟಿಗೆ ವಾಸಿಸಲು ಬಯಸಿದರೆ ನ್ಯಾಯಾಲಯ ಅವರನ್ನು ತಡೆಯಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
If two women want to live together of their own free will, the court cannot stop them, the Madhya Pradesh High Court said today. The court was hearing a custody plea filed by the father of an 18-year-old girl who had fled home with a 22-year-old woman.The teen, from the state’s Jabalpur, and the woman she ran away with grew up together since the two were children. They studied together and, over time, became so emotionally attached that they are now not ready to live separately.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm