ಬ್ರೇಕಿಂಗ್ ನ್ಯೂಸ್
09-11-22 10:39 pm HK News Desk ದೇಶ - ವಿದೇಶ
ವಾಷಿಂಗ್ಟನ್, ನ.9: ಎಲಾನ್ ಮಸ್ಕ್ ಟ್ವಿಟರ್ಗೆ ಮುಖ್ಯಸ್ಥ ಆದ ಬಳಿಕ ಅರ್ಧದಷ್ಟು ಉದ್ಯೋಗಿಗಳನ್ನು ತೆಗೆದ ಹಾಕಿದ ಬೆನ್ನಿಗೆ ಸೋಷಿಯಲ್ ಮೀಡಿಯಾದ ಮತ್ತೊಂದು ದಿಗ್ಗಜ ಫೇಸ್ಬುಕ್ನ ಮಾತೃಸಂಸ್ಥೆ ಮೆಟಾ ಕೂಡ ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಯನ್ನು ತೆಗೆದು ಹಾಕಲಿದೆ.
ಮೆಟಾ ಸಂಸ್ಥೆಯಿಂದ 11 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ತೆಗೆದುಹಾಕಲಾಗುವುದು ಎಂದು ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಘೋಷಿಸಿದ್ದಾರೆ. ಈ ಮೂಲಕ ಸಂಸ್ಥೆಯ ಒಟ್ಟು ಉದ್ಯೋಗಿಗಳಲ್ಲಿ ಶೇ. 13 ಜನರನ್ನು ತೆಗೆದಂತಾಗುತ್ತದೆ ಎಂದೂ ಹೇಳಲಾಗಿದೆ. ಕಂಪನಿ ತನ್ನ ನಷ್ಟವನ್ನು ಸರಿದೂಗಿಸಿಕೊಳ್ಳಲು ಹಾಗೂ ವಹಿವಾಟಿನಲ್ಲಿ ಸುಧಾರಣೆ ತರಲು ಈ ಕ್ರಮಕೈಗೊಳ್ಳುತ್ತಿದೆ.
ನಾವು ಈ ನಿರ್ಣಯವನ್ನು ತೆಗೆದುಕೊಳ್ಳುತ್ತಿರುವುದಕ್ಕೆ ಮತ್ತು ಈ ಹಂತಕ್ಕೆ ತಲುಪಿರುವುದಕ್ಕೆ ನಾನು ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತೇನೆ ಎಂದಿರುವ ಮಾರ್ಕ್, ಇದು ಎಲ್ಲರಿಗೂ ಸಂಕಷ್ಟದ ಸಂಗತಿ ಎಂದು ನನಗೆ ಗೊತ್ತಿದೆ, ಅದರಲ್ಲೂ ಇದರ ಪರಿಣಾಮಕ್ಕೆ ಒಳಗಾಗುತ್ತಿರುವವರ ಕ್ಷಮೆ ಕೋರುತ್ತೇನೆ ಎಂದೂ ಹೇಳಿದ್ದಾರೆ.
ಈ ಹಿಂದೆಯೇ ಈ ಬಗ್ಗೆ ಖುದ್ದು ಸಂಸ್ಥೆಯ ಮುಖ್ಯಸ್ಥ ವಾರ್ಕ್ ಜುಕರ್ ಬರ್ಗ್ ಮಾಹಿತಿ ನೀಡಿದ್ದು, 'ಮೆಟಾ ಪ್ಲಾಟ್ ಫಾರ್ಮ್ಸ್ ಇಂಕ್ ಬುಧವಾರದಂದು ಉದ್ಯೋಗಿಗಳನ್ನು ವಜಾ ಮಾಡಲು ಪ್ರಾರಂಭಿಸುತ್ತದೆ. ಕಂಪನಿಯ ಕುಸಿತಕ್ಕೆ ತಾವು ಜವಾಬ್ದಾರರಾಗಿದ್ದು, ಕಂಪನಿಯ ತಪ್ಪು ಹೆಜ್ಜೆಗಳ ಜವಾಬ್ದಾರಿಯನ್ನು ವಹಿಸಿಕೊಂಡು ಈ ಬೆಳವಣಿಗೆಯ ಬಗ್ಗೆ ಅವರು ಅತಿಯಾದ ಆಶಾವಾದವೇ ಅತಿಯಾದ ಸಿಬ್ಬಂದಿ ನೇಮಕಕ್ಕೆ ಕಾರಣವಾಯಿತು ಎಂದು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
ಜಾಗತಿಕವಾಗಿ ಸುಮಾರು 87,000 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಮೆಟಾವು 11 ಸಾವಿರ ಉದ್ಯೋಗಿಗಳು ಅಂದರೆ ತಮ್ಮ ಒಟ್ಟಾರೆ ಉದ್ಯೋಗಿಗಳ ಪೈಕಿ ಶೇ.13ಕ್ಕಿಂತ ಹೆಚ್ಚಿನ ಪ್ರಮಾಣದ ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದು ಟೆಕ್ ಉದ್ಯಮ ಹಿಮ್ಮೆಟ್ಟುವಿಕೆ ಕಂಡ ಒಂದು ವರ್ಷದಲ್ಲಿ ಪ್ರಮುಖ ತಂತ್ರಜ್ಞಾನ ಸಂಸ್ಥೆಯಲ್ಲಿ ಇಲ್ಲಿಯವರೆಗಿನ ಅತಿದೊಡ್ಡ ಕಡಿತವಾಗಿದೆ. ಅಂತೆಯೇ ಕಂಪನಿಯ 18 ವರ್ಷಗಳ ಇತಿಹಾಸದಲ್ಲಿ ಸಂಭವಿಸಿದ ಮೊದಲ ದೊಡ್ಡ ಉದ್ಯೋಗ ಕಡಿತವಾಗಿದೆ. 2021-22ರ ವಿತ್ತೀಯ ವರ್ಷದ ಅತೀ ದೊಡ್ಡ ಉದ್ಯೋಗ ಕಡಿತವಾಗಿದೆ ಎಂದೂ ಹೇಳಲಾಗಿದೆ.
ವಜಾಗೊಂಡವರಿಗೆ 4 ತಿಂಗಳ ವೇತನ
ಇನ್ನು ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಲೋರಿ ಗೋಲರ್ ಈ ಬಗ್ಗೆ ಮಾತನಾಡಿ, ಉದ್ಯೋಗ ಕಳೆದುಕೊಳ್ಳುವ ಉದ್ಯೋಗಿಗಳಿಗೆ ಕನಿಷ್ಠ 4 ತಿಂಗಳ ವೇತನವನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ.
Facebook parent Meta is laying off 11,000 employees, or about 13% of its workforce, as it deals with declining revenue and broader tech industry woes, according to CEO Mark Zuckerberg in a letter to employees sent out Wednesday.The layoffs come just a week after Twitter’s new owner, billionaire Elon Musk, laid off a large number of employees. Several job cuts have occurred at other tech firms that hired quickly during the pandemic.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm