ಬ್ರೇಕಿಂಗ್ ನ್ಯೂಸ್
07-11-22 12:38 pm HK News Desk ದೇಶ - ವಿದೇಶ
ಇಂದೋರ್, ನ.7: ಬಿಜೆಪಿಯ ಹಿರಿಯ ನಾಯಕಿ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಅವರು ಎಲ್ಲ ರೀತಿಯ ಕೌಟುಂಬಿಕ ಸಂಬಂಧಗಳಿಂದ ದೂರವಾಗುತ್ತಿರುವುದಾಗಿ ತಿಳಿಸಿದ್ದಾರೆ. ಬ.17ರಂದು ಜೈನ ಧರ್ಮ ಸ್ವೀಕರಿಸುತ್ತಿದ್ದು ಇನ್ಮುಂದೆ 'ದೀದಿ ಮಾ' ಎಂದು ಮಾತ್ರ ಗುರುತಿಸಿಕೊಳ್ಳಲು ಇಚ್ಛಿಸುತ್ತೇನೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಜೈನ ಗುರು ಆಚಾರ್ಯ ವಿದ್ಯಾಸಾಗರ ಮಹಾರಾಜ್ ಅವರ ಆದೇಶದ ಮೇರೆಗೆ ತಮ್ಮ ಕುಟುಂಬದೊಂದಿಗಿನ ಎಲ್ಲ ರೀತಿಯ ಸಂಬಂಧಗಳನ್ನು ತೊರೆಯುತ್ತೇನೆ. ಇಡೀ ವಿಶ್ವವೇ ನನ್ನ ಕುಟುಂಬ. ವಿಶ್ವದ ಎಲ್ಲ ಜನರೂ ನನ್ನ ಕುಟುಂಬಸ್ಥರು ಎಂದು ತಿಳಿಸಿದ್ದಾರೆ. ಉಮಾ ಭಾರತಿ 30 ವರ್ಷಗಳ ಹಿಂದೆ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರಿಂದ ಸನ್ಯಾಸ ದೀಕ್ಷೆ ಪಡೆದಿದ್ದರು. ಅದಕ್ಕೂ ಮೊದಲು 1997ರಲ್ಲಿ ಆನಂದಮಯಿ ಮಾ ಅವರಿಂದ ಬ್ರಹ್ಮಚರ್ಯ ದೀಕ್ಷೆ ಪಡೆದಿದ್ದರು.
ಆನಂತರ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲಿ ಸಚಿವೆಯಾಗಿ ಸುದೀರ್ಘ ಕಾಲ ರಾಜಕಾರಣದಲ್ಲಿದ್ದರು. ಕಳೆದ ಹತ್ತು ವರ್ಷಗಳಲ್ಲಿ ಉಮಾಭಾರತಿ ಪಕ್ಷದಲ್ಲಿ ಸೈಡ್ ಲೈನ್ ಆಗಿದ್ದರು. ಈಗ ತಮ್ಮ ಗುರುವಿನ ಅಣತಿಯಂತೆ ನ.17ರಿಂದ ಹೆಸರು ಬದಲಿಸಿಕೊಂಡು ಕುಟುಂಬವನ್ನು ತ್ಯಜಿಸುತ್ತೇನೆಂದು ಪ್ರಕಟಿಸಿದ್ದಾರೆ. ಆದರೆ, ರಾಜಕಾರಣದಲ್ಲಿ ಮುಂದುವರೆಯುತ್ತೇನೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಿಲ್ಲ. ನನ್ನ ಕುಟುಂಬ, ಸಹೋದರರು, ಸೋದರಳಿಯರು ಮತ್ತು ಸೊಸೆಯಂದಿರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನನಗೆ ರಾಜಕೀಯದಲ್ಲಿ ಸಾಕಷ್ಟು ಬೆಂಬಲ ನೀಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಆಡಳಿತದಲ್ಲಿಯೂ ಸಾಕಷ್ಟು ಸುಳ್ಳು ಪ್ರಕರಣ, ಕಿರುಕುಳ ಮತ್ತು ಅನೇಕ ತೊಂದರೆಗಳನ್ನು ಅನುಭವಿಸಿದ್ದೇನೆ. ನನ್ನ ಪೋಷಕರು ಕಲಿಸಿದ ಉತ್ತಮ ಮೌಲ್ಯಗಳು, ನನ್ನ ಗುರುಗಳ ಸಲಹೆ, ನನ್ನ ಜಾತಿ ಮತ್ತು ಕುಲದ ಘನತೆ, ನನ್ನ ಪಕ್ಷದ ಸಿದ್ಧಾಂತ ಮತ್ತು ದೇಶಕ್ಕಾಗಿ ನನ್ನ ಜವಾಬ್ದಾರಿ ಇದ್ಯಾವುದರಿಂದಲೂ ನನಗೆ ಮುಕ್ತಿ ಸಿಗುವುದಿಲ್ಲ ಎಂದು ಹೀಗೆ ಕೌಟುಂಬಿಕ ಬಂಧದಿಂದ ಮುಕ್ತರಾಗುವ ಬಗ್ಗೆ ಸಾಕಷ್ಟು ಟ್ವೀಟ್ ಮಾಡಿದ್ದಾರೆ.
15. मैं अपने परिवार जनों को सभी बंधनों से मुक्त करती हूं एवं मैं स्वयं भी 17 तारीख को मुक्त हो जाऊंगी।
— Uma Bharti (@umasribharti) November 4, 2022
16. मेरा संसार एवं परिवार बहुत व्यापक हो चुका है। अब मैं सारे विश्व समुदाय की दीदी मां हूं मेरा निजी कोई परिवार नहीं है।
Senior BJP leader Uma Bharti has declared in a series of tweets that she will renounce all ties and will be known only as "Didi Maa". The fiery politician, one of the most prominent leaders of the Ram Temple movement that catalyzed the BJP's rise in national politics, posted 27 tweets over two days, fueling speculation of her political retirement.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm