ಬ್ರೇಕಿಂಗ್ ನ್ಯೂಸ್
15-10-22 03:52 pm HK News Desk ದೇಶ - ವಿದೇಶ
ಹೈದರಾಬಾದ್, ಅ.15: ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಹಿಂದಿ, ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿದ್ದಂತೆ ದೇಶಾದ್ಯಂತ ಸದ್ದು ಮಾಡಿದೆ. ತಮಿಳಿನ ಧನುಷ್ ಕಾಂತಾರ ಸಿನಿಮಾವನ್ನು ನೋಡಲೇಬೇಕು ಎಂದು ಟ್ವೀಟ್ ಮಾಡಿದ ಬಳಿಕ ಪಾನ್ ಇಂಡಿಯಾ ಸ್ಟಾರ್ ನಟ ಬಾಹುಬಲಿ ಪ್ರಭಾಸ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ ಸ್ಟಾ ಗ್ರಾಮಿನಲ್ಲಿ ಬರೆದುಕೊಂಡಿರುವ ಪ್ರಭಾಸ್, ತಾನು ಎರಡನೇ ಬಾರಿ ಕಾಂತಾರ ನೋಡಿದ್ದಾಗಿ ಹೇಳಿಕೊಂಡಿದ್ದಾರೆ. ಅದೊಂದು ಅದ್ಭುತ ಅನುಭವ. ನಾನು ಎರಡನೇ ಬಾರಿ ಥಿಯೇಟರಿನಲ್ಲಿ ಸಿನಿಮಾ ನೋಡಿದ್ದೇನೆ. ಥ್ರಿಲ್ಲಿಂಗ್ ಕ್ಲೈಮ್ಯಾಕ್ಸ್. ಥಿಯೇಟರಿನಲ್ಲಿ ನೋಡಲೇಬೇಕಾದ ಚಿತ್ರವಿದು ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ತಮಿಳು ಸೂಪರ್ ಸ್ಟಾರ್ ಧನುಷ್ ಕೂಡ ಟ್ವೀಟ್ ಮಾಡಿ ಹೊಗಳಿದ್ದರು. ಕಾಂತಾರ, ಮೈಂಡ್ ಬ್ಲೋವಿಂಗ್.. ನೋಡಲೇಬೇಕಾದ ಸಿನಿಮಾ.. ರಿಷಬ್ ಶೆಟ್ಟಿ ಹೆಮ್ಮೆ ಪಡುವ ರೀತಿ ನಟಿಸಿದ್ದಾರೆ. ಇಂಥ ಚಿತ್ರ ನೀಡಿದ್ದಕ್ಕಾಗಿ ಅಭಿನಂದನೆಗಳು. ಕಾಂತಾರ ಚಿತ್ರ ತಂಡದ ಎಲ್ಲರಿಗೂ ನಾನು ಅಪ್ಪುಗೆಯ ಅಭಿನಂದನೆ ಹೇಳುತ್ತೇನೆ. ದೇವರು ಒಳ್ಳೆದು ಮಾಡಲಿ ಎಂದು ಹೇಳಿದ್ದರು.
Kantara .. Mind blowing !! A must watch .. Rishab Shetty , you should be very proud of yourself. Congratulations hombale films .. keep pushing the boundaries. A big hug to all the actors and technicians of the film. God bless
— Dhanush (@dhanushkraja) October 14, 2022
ಕಡಿಮೆ ಬಜೆಟ್ಟಿನಲ್ಲಿ ತಯಾರಾಗಿದ್ದ ಕನ್ನಡ ಚಿತ್ರ ಕಾಂತಾರ ಸಿನಿಮಾ, ಐಎಂಡಿಬಿ ರ್ಯಾಂಕ್ ನಲ್ಲಿ ಕೆಜಿಎಫ್ ಚಿತ್ರಕ್ಕಿಂತ ಹೆಚ್ಚು ರೇಟಿಂಗ್ ಪಡೆದಿದೆ. ಸಿನಿಮಾದ ಬಗ್ಗೆ ಅತಿ ಹೆಚ್ಚು ವಿಮರ್ಶೆ, ಮೆಚ್ಚುಗೆಯ ಮಾತುಗಳು ಬಂದಿವೆ. ಕಳೆದ ವಾರ ಕನ್ನಡದ ಸೂಪರ್ ಸ್ಟಾರ್ ಸುದೀಪ್ ಕೂಡ ಕಾಂತಾರ ಸಿನಿಮಾ ನೋಡಿ ಸುದೀರ್ಘ ಮೆಚ್ಚುಗೆಯ ನುಡಿಗಳನ್ನು ಬರೆದುಕೊಂಡಿದ್ದರು. ಅತ್ಯದ್ಬುತ ನಟನೆ ಎಂದು ಕಾಂತಾರ ಸಿನಿಮಾ ನಟರನ್ನು ಕೊಂಡಾಡಿದ್ದರು. ಸಂಗೀತ ನಿರ್ದೇಶನ ಮಾಡಿದ್ದ ಅಜನೀಶ್ ಲೋಕನಾಥ್ ಅವರ ಬಗ್ಗೆಯೂ ಮೆಚ್ಚುಗೆ ಸೂಚಿಸಿದ್ದರು.
ತೆಲುಗು, ತಮಿಳು ಚಿತ್ರರಂಗದ ದಿಗ್ಗಜರ ಸಿನಿಮಾಗಳ ಜೊತೆಗೆ ಕಾಂತಾರ ಫೈಟ್ ಕೊಟ್ಟಿದೆ. ಮನಿರತ್ನಂ ಅವರ ಪೊನ್ನಿಯಿನ್ ಸೆಲ್ವನ್-1, ನಾಗಾರ್ಜುನ ಅವರ ದಿ ಘೋಸ್ಟ್, ಚಿರಂಜೀವಿ ಅವರ ಗಾಡ್ ಫಾದರ್ ಚಿತ್ರಗಳು ತೆರೆ ಕಂಡಿರುವಾಗಲೇ ಕಾಂತಾರ ತೆಲುಗು, ತಮಿಳು ಭಾಷಿಗರನ್ನು ಆಕರ್ಷಿಸಿದೆ. ಕೇವಲ 16 ಕೋಟಿ ಬಳಸಿ ನಿರ್ಮಿಸಲಾಗಿದ್ದ ಕಾಂತಾರ ಸಿನಿಮಾ ಒಂದೇ ವಾರದಲ್ಲಿ ಅದರ ಮೂರು ಪಟ್ಟು ಕಲೆಕ್ಷನ್ ಮಾಡಿದ್ದು, ದೇಶಾದ್ಯಂತ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ವಿಶೇಷ.
Kannada film ‘Kantara,’ starring Rishabh Shetty, has been generating a huge buzz across the country. Made on a small budget, Kantara hit the theatres on September 30. The film has been drawing everyone’s attention for its spectacular content and performances.On Friday, pan-India star Prabhas took to Instagram to share his review of the film and revealed that he had watched it twice in theatre.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 10:28 pm
HK News Desk
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm