ಬ್ರೇಕಿಂಗ್ ನ್ಯೂಸ್
05-09-22 08:00 pm HK News Desk ದೇಶ - ವಿದೇಶ
ಲಂಡನ್, ಸೆ.5 : ಭಾರೀ ಕುತೂಹಲ ಕೆರಳಿಸಿದ್ದ ಬ್ರಿಟನ್ ಪ್ರಧಾನಿ ಸ್ಥಾನಕ್ಕಾಗಿ ನಡೆದಿದ್ದ ಪೈಪೋಟಿಯಲ್ಲಿ ಭಾರತ ಮೂಲದ ರಿಷಿ ಸುನಾಕ್ ಸೋಲು ಕಂಡಿದ್ದಾರೆ. ಪ್ರತಿಸ್ಪರ್ಧಿಯಾಗಿದ್ದ ವಿದೇಶಾಂಗ ಸಚಿವೆ ಲಿಜ್ ಟ್ರಸ್ ಇಂಗ್ಲೆಂಡಿನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಆಂತರಿಕ ಸ್ಪರ್ಧೆಯಲ್ಲಿ ಗೆದ್ದ ಲಿಜ್ ಟ್ರಸ್ ಅವರನ್ನು ಬ್ರಿಟನ್ ಪ್ರಧಾನಿ ಎಂದು ಸೋಮವಾರ ಘೋಷಣೆ ಮಾಡಲಾಯಿತು. ಇದರೊಂದಿಗೆ ಮಾರ್ಗರೆಟ್ ಥ್ಯಾಚರ್ ಮತ್ತು ತೆರೆಸಾ ಮೇ ಬಳಿಕ ಮೂರನೇ ಮಹಿಳೆ ಇಂಗ್ಲೆಂಡ್ ಪ್ರಧಾನಿ ಸ್ಥಾನಕ್ಕೇರಿದ ಹೆಗ್ಗಳಿಕೆ ಪಡೆದಿದ್ದಾರೆ.
ಬೋರಿಸ್ ಜಾನ್ಸನ್ ಅವರ ಸರಕಾರದಲ್ಲಿ ಹಣಕಾಸು ಸಚಿವರಾಗಿದ್ದ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗುವ ಕನಸು ಕಂಡಿದ್ದರು. ದೇಶಾದ್ಯಂತ ಅವರಿಗೆ ಭಾರೀ ಜನ ಬೆಂಬಲವೂ ದೊರಕಿತ್ತು. ಆರಂಭಿಕ ಸ್ಪರ್ಧೆಯಲ್ಲಿ ಸಂಸತ್ ಸದಸ್ಯರು ಹೆಚ್ಚಾಗಿ ರಿಷಿ ಸುನಕ್ ಪರವಾಗಿ ಮತ ಚಲಾಯಿಸಿದ್ದರು. ಆದರೆ ಆನಂತರ ಕನ್ಸರ್ವೇಟಿವ್ ಪಕ್ಷದ ಸದಸ್ಯರ ನಡುವಿನ ಚುನಾವಣೆಯಲ್ಲಿ ಸುನಕ್ ಅವರಿಗೆ ಹಿನ್ನಡೆ ಆಗಿದ್ದು 21 ಸಾವಿರ ಹೆಚ್ಚು ಮತಗಳಿಂದ ಲಿಜ್ ಟ್ರಸ್ ಗೆಲುವು ಕಂಡಿದ್ದಾರೆ. ಚಲಾವಣೆಯಾದ 1.70 ಲಕ್ಷ ಮತಗಳ ಪೈಕಿ ಟ್ರಸ್ ಪರವಾಗಿ 81,326 ಮತಗಳು ಲಭಿಸಿದರೆ, ರಿಷಿ ಸುನಕ್ ಪರವಾಗಿ 60,399 ಮತಗಳು ಲಭಿಸಿದವು. 654 ಮತಗಳು ತಿರಸ್ಕೃತಗೊಂಡವು. ಆಮೂಲಕ ಭಾರತ ಉಪ ಖಂಡವನ್ನು ಮೂರು ಶತಮಾನ ಕಾಲ ಆಳಿದ್ದ ಬ್ರಿಟಿಷರನ್ನು ಭಾರತ ಮೂಲದ ವ್ಯಕ್ತಿಯೇ ಆಳ್ವಿಕೆ ನಡೆಸುವ ಅಪೂರ್ವ ಅವಕಾಶ ತಪ್ಪಿಹೋಯಿತು. ಬೋರಿಸ್ ಸರಕಾರದಲ್ಲಿ ವಿದೇಶಾಂಗ ಸಚಿವೆಯಾಗಿದ್ದ 47ರ ಹರೆಯದ ಲಿಜ್ ಟ್ರಸ್ ನೂತನ ಪ್ರಧಾನಿ ಸ್ಥಾನಕ್ಕೇರಿದ್ದಾರೆ.
ಆದರೆ ನೂತನ ಪ್ರಧಾನಿಗೆ ಬ್ರಿಟನ್ ಆರ್ಥಿಕ ಮುಗ್ಗಟ್ಟು ಎದುರಿಸುವುದು ಪ್ರಮುಖ ಸವಾಲಾಗಲಿದೆ. ದಿನ ದಿನಕ್ಕೂ ಬ್ರಿಟನ್ನಲ್ಲಿ ಆರ್ಥಿಕ ಬಿಕ್ಕಟ್ಟು ಹೆಚ್ಚುತ್ತಲೇ ಇದ್ದು, ಇದೀಗ ಜುಲೈನಲ್ಲಿ ಹಣದುಬ್ಬರ ರಾಕೆಟ್ ವೇಗದಲ್ಲಿ ಮೇಲೇರಿ ಶೇ. 10ಕ್ಕೆ ಏರಿಕೆಯಾಗಿದೆ. ಇದರಿಂದ ಬ್ರಿಟನ್ನಲ್ಲಿ ಜೀವನ ವೆಚ್ಚದ ಬಿಕ್ಕಟ್ಟು, ಕೈಗಾರಿಕೆಗಳ ಸಮಸ್ಯೆ, ತೀವ್ರ ಆರ್ಥಿಕ ಹಿಂಜರಿತ ಎದುರಿಸುತ್ತಿದೆ. ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ಲಿಜ್ ಟ್ರಸ್ ಬ್ರಿಟನ್ನ ಜವಾಬ್ದಾರಿ ವಹಿಸಿಕೊಂಡಿದ್ದು, ದೇಶವನ್ನು ಸಂಕಷ್ಟದಿಂದ ಮೇಲಕ್ಕೆತ್ತುವ ಜವಾಬ್ದಾರಿ ಅವರ ಮೇಲಿದೆ.
Liz Truss Monday defeated India-origin Rishi Sunak to be the new Prime Minister of Britain. She has also been named leader of the governing Conservative Party.Truss, who defeated her rival Sunak by 81,326 votes to 60,399, will take power of the government at a time when the UK faces a cost of living crisis, industrial unrest and a recession.Truss, who defeated her rival Sunak by 81,326 votes to 60,399, will take power of the government at a time when the UK faces a cost of living crisis, industrial unrest and a recession.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 03:26 pm
Bangalore Correspondent
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm