ಬ್ರೇಕಿಂಗ್ ನ್ಯೂಸ್
24-08-22 09:12 pm HK News Desk ದೇಶ - ವಿದೇಶ
ಮುಂಬೈ, ಆಗಸ್ಟ್ 24: ಮುಂಬೈ ನಗರದಲ್ಲಿ ಗೌಡ ಸಾರಸ್ವತ ಸಮಾಜದ ವತಿಯಿಂದ ಆರಾಧಿಸಲ್ಪಡುವ ಗಣಪತಿ ದೇಶದಲ್ಲೇ ಅತ್ಯಂತ ಸಿರಿವಂತ ಗಣಪತಿ ಎಂದು ಹೆಸರಾಗಿದ್ದಾನೆ. ಮುಂಬೈ ನಗರದ ಕಿಂಗ್ಸ್ ಸರ್ಕಲ್ ನಲ್ಲಿ ಆರಾಧಿಸುವ ಜಿಎಸ್ ಬಿಯವರ ಗಣಪತಿ ಉತ್ಸವಕ್ಕೆ ಬರೋಬ್ಬರಿ 316 ಕೋಟಿ ರೂಪಾಯಿ ವಿಮೆ ಮಾಡಲಾಗಿದೆ.
ಆಗಸ್ಟ್ 31ರಿಂದ ಇಲ್ಲಿ ಐದು ದಿನಗಳ ಕಾಲ ಉತ್ಸವ ನಡೆಯಲಿದೆ. ಇದಕ್ಕಾಗಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಸಂಸ್ಥೆಯಿಂದ ಇನ್ಶೂರೆನ್ಸ್ ಮಾಡಲಾಗಿದ್ದು, ಈ ಬಾರಿ ವಿಮಾ ಮೌಲ್ಯ 316 ಕೋಟಿ ರೂಪಾಯಿಗೇರಿದೆ. 2016ರಲ್ಲಿ ಇದೇ ಜಿಎಸ್ ಬಿ ತಂಡ 300 ಕೋಟಿ ರೂಪಾಯಿ ಇನ್ಶೂರೆನ್ಸ್ ಮಾಡಿತ್ತು. ಈ ಬಾರಿ ಗಣಪತಿಗೆ ತೊಡಿಸುವ ಬಂಗಾರ ಇನ್ನಿತರ ಆಭರಣಗಳ ಮೌಲ್ಯ ಹೆಚ್ಚಿರುವುದರಿಂದ ಇನ್ಶೂರೆನ್ಸ್ ಮೊತ್ತವೂ ಹೆಚ್ಚಿದೆ.
ಗಣಪತಿಗೆ 66 ಕೇಜಿ ಬಂಗಾರ, 295 ಕೇಜಿ ಬೆಳ್ಳಿಯ ಆಭರಣಗಳನ್ನು ತೊಡಿಸಲಾಗುವುದು. ಇದಲ್ಲದೆ, ಇನ್ನಿತರ ಲೋಹಗಳ ಆಭರಣಗಳೂ ಇವೆ. 316 ಕೋಟಿ ಮೌಲ್ಯದ ಇನ್ಶೂರೆನ್ಸ್ ಮಾಡಿಸಲು ಪ್ರೀಮಿಯಂ ಎಷ್ಟು ಬರುತ್ತದೆ ಎನ್ನುವ ಬಗ್ಗೆ ಗಣೇಶೋತ್ಸವ ಸಮಿತಿಯವರು ಮಾಹಿತಿ ನೀಡಿಲ್ಲ. ಆದರೆ, ಇಷ್ಟೊಂದು ವಿಮಾ ಮೊತ್ತ ಬೇರೆ ಬೇರೆ ವಿಭಾಗಕ್ಕೆ ತಗಲುತ್ತದೆ. ಗಣಪತಿಗೆ ತೊಡಿಸುವ ಚಿನ್ನ, ಬೆಳ್ಳಿಯ ಆಭರಣಗಳಿಗಾಗಿ 31 ಕೋಟಿ ರೂಪಾಯಿ ಮೊತ್ತ ಇದ್ದರೆ, ಇತರ 263 ಕೋಟಿ ರೂಪಾಯಿ ಮೊತ್ತದ ಇನ್ಶೂರೆನ್ಸ್ ಉತ್ಸವಕ್ಕಾಗಿ ಕೆಲಸ ಮಾಡುವ ಅರ್ಚಕರು, ಸ್ವಯಂಸೇವಕರು, ಅಡುಗೆ ಕೆಲಸಗಾರರು, ಚಪ್ಪಲಿ ಸ್ಟಾಲ್ ಕೆಲಸಗಾರರು, ಪಾರ್ಕಿಂಗ್ ನೋಡಿಕೊಳ್ಳುವವರು, ಸೆಕ್ಯುರಿಟಿ ಗಾರ್ಡ್ ಮೇಲೆ ಇರುತ್ತದೆ.
ಇದಲ್ಲದೆ, ಬೆಂಕಿ ಬಿದ್ದರೆ ಅಥವಾ ಭೂಕಂಪದಿಂದ ಹಾನಿಯಾದಲ್ಲಿ ಒಂದು ಕೋಟಿ ಮೊತ್ತದ ಪ್ರತ್ಯೇಕ ಇನ್ಶೂರೆನ್ಸ್ ಕವರ್ ಇರುತ್ತದೆ. ಅದರಲ್ಲಿ ಫರ್ನಿಚರ್, ಸಿಸಿಟಿವಿ, ಸ್ಕ್ಯಾನರ್, ವಿವಿಧ ರೀತಿಯ ಡೆಕೋರೇಟಿಂಗ್ ಐಟಮ್ಸ್, ಕಂಪ್ಯೂಟರ್, ಗ್ರೋಸರಿ, ತರಕಾರಿ ಇತ್ಯಾದಿ ಎಲ್ಲವೂ ಕವರ್ ಆಗಲಿದೆ. ಪೆಂಡಾಲ್, ಸ್ಟೇಡಿಯಂ, ಭಕ್ತರಿಗೆ ಏನಾದರೂ ಆದಲ್ಲಿ 20 ಕೋಟಿ ಇನ್ಶೂರೆನ್ಸ್ ಕವರ್ ಸಿಗುವಂತೆ ಮಾಡಲಾಗಿದೆ.
ವಡಾಲದ ರಾಮ ಮಂದಿರದಲ್ಲಿ ಜಿಎಸ್ ಬಿ ಸಮಾಜದ ವತಿಯಿಂದ ಇಡಲಾಗುವ ಗಣಪತಿಗೂ 250 ಕೋಟಿ ಇನ್ಶೂರೆನ್ಸ್ ಮಾಡಲಾಗಿದೆ. ಅಲ್ಲಿನ ಇನ್ಶೂರೆನ್ಸ್ ಮೊತ್ತಕ್ಕೆ 7-8 ಲಕ್ಷ ರೂಪಾಯಿ ಪ್ರೀಮಿಯಂ ವ್ಯಯಿಸಲಾಗಿದೆ. ಇಲ್ಲಿ ಗಣಪತಿಯನ್ನು ಹತ್ತು ದಿನಗಳ ಕಾಲ ಆರಾಧಿಸಲಾಗುವುದು ಎಂದು ಟ್ರಸ್ಟಿ ಉಲ್ಲಾಸ್ ಕಾಮತ್ ಹೇಳುತ್ತಾರೆ. ಮುಂಬೈನಲ್ಲಿ ಗಣೇಶೋತ್ಸವ ಅತ್ಯಂತ ವೈಭವದಿಂದ ನಡೆಯುವುದರಿಂದ ಹಲವು ಕಡೆ ಕೋಟ್ಯಂತರ ರೂಪಾಯಿಗಳ ವಿಮಾ ಮೊತ್ತ ಮಾಡಿಕೊಳ್ಳುತ್ತಾರೆ. ಏನೇ ತೊಂದರೆ ಎದುರಾದರೂ, ಇನ್ಶೂರೆನ್ಸ್ ಪಡೆಯುತ್ತಾರೆ. 25 ಕೋಟಿ, 50 ಕೋಟಿ ವಿಮೆ ಮಾಡುವುದು ಮಾಮೂಲಿ. ತಿಂಗಳ ಕಾಲ ಗಣಪತಿ ಇಟ್ಟು ಆರಾಧಿಸುವುದರಿಂದ ಮುಂಬೈನಲ್ಲಿ ಗಣೇಶನ ಹಬ್ಬ ಅಂದ್ರೆ, ದೊಡ್ಡ ಹಬ್ಬ.
The richest Ganesh pandal in Mumbai Goud Saraswat Brahmin (GSB) Seva Mandal has taken an insurance cover of a record Rs 316.40 crore for this year's Ganesh Chaturthi celebrations, according to media reports.The mandal has taken insurance from New India Assurance for a range of risks. Gold, silver, and jewellery are covered under the risk insurance policy for Rs 31.97 crore of the total amount. Personal accident insurance for security guards, priests, cooks, shoe store employees, and volunteers is worth Rs 263 crore.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm