ಬ್ರೇಕಿಂಗ್ ನ್ಯೂಸ್
20-08-22 11:05 am HK News Desk ದೇಶ - ವಿದೇಶ
ಟೋಕಿಯೋ, ಆಗಸ್ಟ್ 20: ಜಪಾನ್ನಲ್ಲಿ ಸ್ವತಃ ಸರಕಾರವೇ ಮುಂದೆ ನಿಂತು “ಯುವಜನರನ್ನು ಮದ್ಯದಾಸರನ್ನಾಗಿ’ ಮಾಡುತ್ತಿದೆ. ಅಚ್ಚರಿಯಾದರೂ ಇದು ಸತ್ಯ. ಹೆಚ್ಚು ಹೆಚ್ಚು ಆಲ್ಕೋಹಾಲ್ ಸೇವಿಸುವಂತೆ ಅಲ್ಲಿನ ಸರಕಾರ ಯುವಜನತೆಗೆ ಕರೆ ನೀಡಿದೆ. ಇದಕ್ಕೆ ಕಾರಣವೇನಿರಬಹುದು ಎಂದು ಯೋಚಿಸುತ್ತಿದ್ದೀರಾ? ಆರ್ಥಿಕ ಬಿಕ್ಕಟ್ಟು.
ಹೌದು, ಕೊರೊನಾ ಸೋಂಕಿನ ಅನಂತರ ಬಹುತೇಕ ಎಲ್ಲ ದೇಶಗಳೂ ಆರ್ಥಿಕ ಬಿಕ್ಕಟ್ಟಿ ನಿಂದ ನರಳುತ್ತಿವೆ. ಜಪಾನ್ ಕೂಡ ಇದೇ ರೀತಿಯ ಸಂಕಷ್ಟವನ್ನು ಎದುರಿಸುತ್ತಿದೆ. ಕುಸಿಯುತ್ತಿರುವ ಆರ್ಥಿಕತೆಯನ್ನು ಹಳಿಗೆ ತರಬೇಕೆಂದರೆ ಸರಕಾರದ ಬೊಕ್ಕಸಕ್ಕೆ ಹಣ ಹರಿದುಬರಬೇಕು. ಎಲ್ಲ ದೇಶಗಳಲ್ಲೂ ಆದಾ ಯದ ದೊಡ್ಡ ಪಾಲುದಾರನೆಂದರೆ ಅಬಕಾರಿ ಇಲಾಖೆ. ಹೀಗಾಗಿ ಜನರು ಹೆಚ್ಚು ಮದ್ಯ ಸೇವಿಸಲು ಆರಂಭಿಸಿದರೆ ತನ್ನಿಂತಾನಾಗಿಯೇ ಅಬಕಾರಿ ಆದಾಯ ಹೆಚ್ಚುತ್ತದೆ ಎನ್ನುವುದು ಜಪಾನ್ ಸರಕಾರದ ಲೆಕ್ಕಾಚಾರ.
ತಗ್ಗಿದ ಮದ್ಯ ಸೇವನೆ;

ಇಲ್ಲಿನ ತೆರಿಗೆ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿದ ಅಂಕಿಅಂಶದ ಪ್ರಕಾರ, 1995ಕ್ಕೆ ಹೋಲಿಸಿದರೆ 2020 ರಲ್ಲಿ ಜಪಾನ್ ನಾಗರಿಕರ ಮದ್ಯ ಸೇವನೆ ಪ್ರಮಾಣ ಗಣನೀಯವಾಗಿ ತಗ್ಗಿದೆ. ಹಿಂದೆ ವಾರ್ಷಿಕವಾಗಿ ಸರಾಸರಿ 100 ಲೀಟರ್ಗಳಷ್ಟು ಮದ್ಯ ಸೇವನೆಯಾಗುತ್ತಿದ್ದರೆ, ಈಗ ಅದು 75 ಲೀಟರ್ಗಳಿಗೆ ಇಳಿದಿದೆ. ಮೂರನೇ ಅತಿದೊಡ್ಡ ಆರ್ಥಿಕತೆಯಾದ ಜಪಾನ್ನಲ್ಲಿ ಆಲ್ಕೋಹಾಲ್ನಿಂದ ಬರುತ್ತಿದ್ದ ತೆರಿಗೆ ಆದಾಯವೂ ಕುಸಿತವಾಗಿದೆ. ಮದ್ಯ ಮಾರಾಟದಿಂದ 2020ರಲ್ಲಿ ಸುಮಾರು 6,505 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ. ಈ ಆದಾಯ ಇಷ್ಟೊಂದು ಇಳಿಕೆಯಾಗಿರು ವುದು ಕಳೆದ 31 ವರ್ಷಗಳಲ್ಲೇ ಇದೇ ಮೊದಲು.
ರಾಷ್ಟ್ರಮಟ್ಟದ ಸ್ಪರ್ಧೆ;

ಹಿಂದಿನ ತಲೆಮಾರಿಗೆ ಹೋಲಿಸಿದರೆ ಇಂದಿನ ತಲೆಮಾರಿನ ಯುವಕರ “ಮದ್ಯ ಪ್ರೇಮ’ ಕಡಿಮೆಯಾಗಿದೆ. ಹೀಗಾಗಿ, ಜಪಾನ್ ಸರಕಾರ ಈಗ “ಸೇಕ್ ವಿವಾ’ ಎಂಬ ಅಭಿಯಾನ ಆರಂಭಿಸಿದೆ. ಜಪಾನ್ನ ಅಕ್ಕಿಯ ವೈನ್, ಶೋಚು, ವಿಸ್ಕಿ, ಬಿಯರ್ ಅಥವಾ ಇತರ ವೈನ್ಗಳನ್ನು ಕುಡಿಯುವಂತೆ ಯುವಜನತೆಗೆ ಸರಕಾರ ಕರೆ ನೀಡಿದೆ. ಜತೆಗೆ, ರಾಷ್ಟ್ರಮಟ್ಟದ ಸೇಕ್ ವಿವಾ ಸ್ಪರ್ಧೆಯನ್ನೂ ಆಯೋಜಿಸಿದ್ದು, ಯುವಜನಾಂಗ ಹೆಚ್ಚು ಹೆಚ್ಚು ಕುಡಿಯುವಂತೆ ಪ್ರೇರೇಪಿಸಲು ಐಡಿಯಾಗಳನ್ನು ಕೊಡಿ ಎಂದೂ ಕೇಳಿಕೊಂಡಿದೆ.
The Japanese government has launched a nationwide competition to encourage youngsters to drink more alcohol. The campaign to promote liquor consumption comes as japan recently witnessed its biggest fall in alcohol tax income in 31 years, according to multiple reports. The “Sake Viva!” campaign, being run by the National Tax Agency (NTA), asks 20- to 39-year-old citizens to come up with proposals that help in revitalising the popularity of alcoholic drinks. The competition calls for “new products and designs” as well as ways to promote home drinking, and will run till September 9.
18-04-26 05:59 pm
HK News Staffer
ದುಬೈನಲ್ಲಿ ಕಚೇರಿ, ಟ್ರೇಡಿಂಗ್ ಹೆಸರಲ್ಲಿ ಕೋಟಿ ಕೋಟಿ...
18-04-26 02:43 pm
ರಾಹುಲ್ ಗಾಂಧಿ ದ್ವಿಪೌರತ್ವ ; ಬ್ರಿಟಿಷ್ ಪ್ರಜೆಯೆಂದು...
18-04-26 10:20 am
ಯೋಗೇಶ್ ಗೌಡ ಕೊಲೆ ಪ್ರಕರಣ ; ಶಾಸಕ ವಿನಯ್ ಕುಲಕರ್ಣಿ...
17-04-26 07:27 pm
ಯಾದಗಿರಿ ದೇವಸ್ಥಾನದಿಂದ ಮರಳುತ್ತಿದ್ದವರ ದುರಂತ ಅಂತ್...
17-04-26 01:39 pm
20-04-26 10:54 pm
HK News Staffer
ಇರಾನ್ ಸರಕು ಹಡಗು ವಶಕ್ಕೆ ಪಡೆದ ಅಮೆರಿಕ ಸೇನೆ ; ತಕ್...
20-04-26 09:37 pm
ದೆಹಲಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ; ನಾಲ್ವರು...
18-04-26 11:39 pm
ಗಲ್ಫ್ ಸಂಘರ್ಷ ಸದ್ಯಕ್ಕೆ ತೆರೆ ; ಹೊರ್ಮುಜ್ ಜಲಸಂಧಿ...
18-04-26 10:31 am
ದುರಂತ ಅಂತ್ಯ ಕಂಡ ವಿಚ್ಛೇದನ ಕಲಹ ; ಪತ್ನಿಗೆ ಗುಂಡಿಕ...
17-04-26 08:08 pm
20-04-26 09:40 pm
HK News Staffer
ಪುತ್ತೂರು ಜಾತ್ರೆ ಅಂಗಡಿ ಹಂಚಿಕೆಯಲ್ಲಿ ಭ್ರಷ್ಟಾಚಾರ...
20-04-26 05:28 pm
2026ನೇ ಸಾಲಿನ ಫೆಮಿನಾ ಮಿಸ್ ಇಂಡಿಯಾ ಕಿರೀಟ ಮುಡಿಗೇರ...
20-04-26 01:02 pm
ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳು ಖಾಸಗಿ ತೆಕ್ಕ...
19-04-26 10:41 pm
ಪುತ್ತೂರು ಜಾತ್ರೆ ; ಸುಡುಮದ್ದು ಉತ್ಸವದಲ್ಲಿ ಬೆಂಕಿ...
18-04-26 11:31 pm
20-04-26 09:35 pm
HK News Staffer
30 ನಿಮಿಷ ಕೊಟ್ಟರೆ ಮಂಗಳೂರು ಕಮಿಷನರ್ ಮುಖವಾಡ ಬಯಲು...
20-04-26 03:44 pm
ಮಣಿಪಾಲದ ಸಾಫ್ಟ್ವೇರ್ ಕಂಪನಿಗೆ ಕೋಟ್ಯಂತರ ಮೌಲ್ಯದ ಷ...
20-04-26 11:13 am
ಬೈಕಿನಲ್ಲಿ 46 ಲಕ್ಷ ಮೌಲ್ಯದ ಡ್ರಗ್ಸ್ ಇಟ್ಟುಕೊಂಡು ವ...
19-04-26 10:23 pm
ಶಿವಮೊಗ್ಗ ; ಹುಟ್ಟುಹಬ್ಬದ ಪಾರ್ಟಿ ವೇಳೆ ಚಿಕನ್ ಮೂಳೆ...
19-04-26 02:58 pm