ಬ್ರೇಕಿಂಗ್ ನ್ಯೂಸ್
06-08-22 09:37 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 6: ದೇಶದ 14ನೇ ಉಪ ರಾಷ್ಟ್ರಪತಿಯಾಗಿ ಜಗದೀಪ್ ಧನ್ಕರ್ ಆಯ್ಕೆಯಾಗಿದ್ದಾರೆ. ಶನಿವಾರ ಬೆಳಗ್ಗಿನಿಂದ ಮತದಾನ ನಡೆದಿದ್ದು, ಸಂಜೆ ವೇಳೆಗೆ ಫಲಿತಾಂಶ ಪ್ರಕಟಿಸಲಾಗಿದೆ. ನಿರೀಕ್ಷೆಯಂತೆ ಜಗದೀಪ್ ಧನ್ಕರ್ ಭಾರೀ ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.
ರಾಜ್ಯಸಭೆ ಸದಸ್ಯರು ಮತ್ತು ಸಂಸದರು ಮತ ಚಲಾಯಿಸಿದ್ದು, ಒಟ್ಟು 725 ಮತಗಳು ಚಲಾವಣೆ ಆಗಿದ್ದವು. ಈ ಪೈಕಿ 528 ಮತಗಳನ್ನು ಜಗದೀಪ್ ಧನ್ಕರ್ ಪಡೆದಿದ್ದರೆ, ವಿರೋಧಿ ಒಕ್ಕೂಟದ ಅಭ್ಯರ್ಥಿ ಮಾರ್ಗರೆಟ್ ಆಳ್ವಾ 182 ಮತಗಳನ್ನಷ್ಟೇ ಪಡೆದಿದ್ದಾರೆ. ಲೋಕಸಭೆಯ ಜನರಲ್ ಸೆಕ್ರಟರಿ ಉತ್ಪಾಲ್ ಸಿಂಗ್ ಮತದಾನದ ಬಳಿಕ ಫಲಿತಾಂಶ ಪ್ರಕಟಿಸಿದ್ದಾರೆ. ಒಟ್ಟು 780 ಸಂಸತ್ ಪ್ರತಿನಿಧಿಗಳ ಪೈಕಿ 725 ಮಂದಿ ಮತ ಚಲಾಯಿಸಿದ್ದರು. ಈ ಪೈಕಿ 15 ಮತಗಳು ಅಸಿಂಧು ಆಗಿದ್ದು, 92.94 ಶೇ. ಮತ ಚಲಾವಣೆಯಾಗಿತ್ತು ಎಂದು ಹೇಳಿದ್ದಾರೆ. ಧನ್ಕರ್, ಪ್ರತಿಸ್ಪರ್ಧಿ ಮಾರ್ಗರೆಟ್ ಆಳ್ವಾ ವಿರುದ್ಧ 346 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.
ಬೆಳಗ್ಗೆ ಮೊದಲಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೊಟ್ಟಮೊದಲಿಗೆ ಮತ ಚಲಾವಣೆ ಮಾಡಿದ್ದರು. ಧನ್ಕರ್ ಗೆಲುವು ಘೋಷಣೆ ಆಗುತ್ತಲೇ ಅವರ ನಿವಾಸಕ್ಕೆ ತೆರಳಿ ಶುಭ ಹಾರೈಕೆ ಮಾಡಿದ್ದಾರೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಪ್ರಮುಖ ನಾಯಕರು ಧನ್ಕರ್ ನಿವಾಸಕ್ಕೆ ತೆರಳಿ ಗೌರವ ಸಲ್ಲಿಸಿದ್ದಾರೆ. ಬಿಜೆಪಿ ವಿರೋಧಿ ಟಿಎಂಸಿ ಸೇರಿದಂತೆ ಉತ್ತರ ಭಾರತದ ಬಹುತೇಕ ಪಕ್ಷಗಳು ಜಗದೀಪ್ ಧನ್ಕರ್ ಪರವಾಗಿ ಮತ ಚಲಾಯಿಸಿದ್ದವು.
ಫಲಿತಾಂಶ ಪ್ರಕಟವಾದ ಬಳಿಕ ಪ್ರತಿಕ್ರಿಯೆ ನೀಡಿದ ವಿಪಕ್ಷಗಳ ಅಭ್ಯರ್ಥಿ ಮಾರ್ಗರೆಟ್ ಆಳ್ವಾ, ದುರಾದೃಷ್ಟ ಎಂದರೆ ವಿಪಕ್ಷಗಳ ಸಾಲಿನಲ್ಲಿರುವ ಕೆಲವು ಪಕ್ಷಗಳು ಕೂಡ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಿದವು. ಆಮೂಲಕ ವಿಪಕ್ಷಗಳ ಒಕ್ಕೂಟದ ಅಭ್ಯರ್ಥಿಯನ್ನು ಸೋಲುವಂತೆ ಮಾಡಿತ್ತು. ಆಮೂಲಕ ತಮ್ಮ ಘನತೆಯನ್ನು ಕುಂದಿಸಿವೆ ಎಂದು ಹೇಳಿದರು.
NDA candidate Jagdeep Dhankhar was declared elected as the Vice President of India on Saturday after he bagged 528 votes against his rival candidate Margaret Alva’s 182. Dhankhar, 71, will succeed M Venkaiah Naidu who demits office August 10. Prime Minister Narendra Modi met the vice president-elect to congratulate him soon after his win.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 07:33 pm
Mangalore Correspondent
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm