ಬ್ರೇಕಿಂಗ್ ನ್ಯೂಸ್
02-08-22 10:10 pm HK News Desk ದೇಶ - ವಿದೇಶ
ಮುಂಬೈ, ಆಗಸ್ಟ್ 2 : ಸಿನಿಮಾ ರಂಗದಲ್ಲಿ ನಟ- ನಟಿಯರ ಕಾಸ್ಟಿಂಗ್ ಕೌಚ್ ಕುರಿತು ಹಲವರು ಹೇಳಿಕೊಂಡಿದ್ದರು. ಇದೀಗ ಹಾಟ್ ತಾರೆ ಎಂದೇ ಪ್ರಸಿದ್ಧಿ ಪಡೆದಿರುವ ಮಲ್ಲಿಕಾ ಶೆರಾವತ್, ಬಾಲಿವುಡ್ ಜಗತ್ತಿನ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.
ಸೆಕ್ಸ್ ಸಂಧಾನಕ್ಕೆ ಒಪ್ಪಿಕೊಳ್ಳದೇ ಇದ್ದ ಕಾರಣಕ್ಕೆ ಸಾಕಷ್ಟು ಸಿನಿಮಾಗಳಿಂದ ಅವರನ್ನು ಕೈಬಿಟ್ಟಿದ್ದ ಬಗ್ಗೆ ಹೇಳಿಕೊಂಡಿದ್ದಾರೆ. ಲೈಂಗಿಕ ಸಂಧಾನವನ್ನು ನಿರಾಕರಿಸಿದ್ದಕ್ಕೆ ಬಾಲಿವುಡ್ನ ಎ-ಪಟ್ಟಿಯಲ್ಲಿರುವ ಬಾಲಿವುಡ್ ನಟರು ನನ್ನೊಂದಿಗೆ ನಟಿಸಲು ನಿರಾಕರಿಸಿದ್ದರು ಎಂದಿದ್ದಾರೆ. ಒಬ್ಬ ಹೀರೋ ಕರೆ ಮಾಡಿ ಮಧ್ಯರಾತ್ರಿ ಆತನ ಮನೆಗೆ ಬರಲು ಹೇಳುತ್ತಾನೆ. ಆತನ ಜೊತೆ ನೀವು ಸಿನಿಮಾ ಮಾಡುತ್ತಿರುವಾಗ ಅವರದೇ ಸರ್ಕಲ್ನಲ್ಲಿ ಇರುತ್ತೀರಿ. ಆತ ಮಧ್ಯರಾತ್ರಿ ಕರೆದಾಗ ನೀವು ಹೋಗದಿದ್ದರೆ, ಆ ಸಿನಿಮಾದಿಂದ ನಿಮ್ಮನ್ನು ಹೊರಗೆ ಇಡಲಾಗುತ್ತದೆ ಎಂದಿದ್ದಾರೆ.

ನಾನು ಹಲವಾರು ಚಿತ್ರಗಳಲ್ಲಿ ಬೋಲ್ಡ್ ಆಗಿ ನಟಿಸಿದ್ದೇನೆ. ಹಾಗೆಂದು ಮಂಚದ ವಿಷಯದಲ್ಲಿ ನಾನು ರಾಜಿ ಆಗುತ್ತೇನೆ ಎಂದು ಅರ್ಥವಲ್ಲ. ಎಲ್ಲ ಎ ದರ್ಜೆಯ ನಟರು ನನ್ನೊಂದಿಗೆ ನಟಿಸಲು ನಿರಾಕರಿಸುತ್ತಾರೆ. ಯಾಕೆಂದರೆ ನಾನು ಅವರೊಂದಿಗೆ ರಾಜಿ ಆಗಲಿಲ್ಲ. ಯಾವ ನಟಿಯನ್ನು ತಾವು ಕಂಟ್ರೋಲ್ ಮಾಡಬಹುದು, ಯಾವ ನಟಿ ತಮ್ಮೊಂದಿಗೆ ರಾಜಿ ಆಗುತ್ತಾರೆ ಎಂಬುದನ್ನು ನೋಡಿಕೊಂಡು ಅಂಥವರನ್ನು ಹೀರೋಗಳು ಇಷ್ಟಪಡುತ್ತಾರೆ. ನಾನು ಅಂಥವಳಲ್ಲ. ನನ್ನ ವ್ಯಕ್ತಿತ್ವ ಆ ರೀತಿ ಇಲ್ಲ. ನಾನು ಇನ್ನೊಬ್ಬರ ಲೈಂಗಿಕಾಸಕ್ತಿಯ ವಿಷಯವಾಗಲು ಬಯಸುವುದಿಲ್ಲ ಎಂದು ಮಲ್ಲಿಕಾ ಹೇಳಿದ್ದಾರೆ.

ಅಂದಹಾಗೆ, 2002ರಲ್ಲಿ ಮಲ್ಲಿಕಾ ಶೆರಾವತ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಅವರಿಗೆ ದೊಡ್ಡ ಬ್ರೇಕ್ ಸಿಕ್ಕಿದ್ದು 2004ರ 'ಮರ್ಡರ್' ಸಿನಿಮಾ ಮೂಲಕ. ಅದರಲ್ಲಿ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದರು. ಜೋಗಿ ಪ್ರೇಮ್ ಅವರ 'ಈ ಪ್ರೀತಿ ಏಕೆ ಭೂಮಿ ಮೇಲಿದೆ..' ಚಿತ್ರದ ಐಟಂ ಸಾಂಗ್ನಲ್ಲೂ ಮಲ್ಲಿಕಾ ಹೆಜ್ಜೆ ಹಾಕಿದ್ದರು. 2011ರ ನಂತರ ಮಲ್ಲಿಕಾ ಅವರ ಸಿನಿಮಾಗಳ ಸಂಖ್ಯೆ ಕಮ್ಮಿ ಆಗುತ್ತಾ ಹೋಯಿತು. ಈ ಮಧ್ಯೆ ಅವರು ಚೈನೀಸ್, ಹಾಲಿವುಡ್ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದರು. ಅವರಿಗೆ ಈಗ 45 ವರ್ಷ ವಯಸ್ಸು. ಈಗ ಅಷ್ಟೇನೂ ಬೇಡಿಕೆ ಇಲ್ಲ. ಕಳೆದ 10 ವರ್ಷಗಳಲ್ಲಿ ಅವರು ನಟಿಸಿರುವುದು ಬರೀ 7 ಸಿನಿಮಾಗಳಲ್ಲಿ ಮಾತ್ರ.
Mallika Sherawat always has a no-holds-barred approach to answering questions. And that’s why the actor doesn’t hesitate to admit that the existence of casting couch did impact her career in the Indian film industry. “All the A-lister heroes refused to work with me, because I wouldn’t compromise,” she reveals.Elaborating further, she adds, “It’s very simple — they like actresses who they can control and who will compromise with them. I am not that, my personality isn’t that. I didn’t want to subject myself to someone’s whims and fancies,” says the 45-year-old, most recently seen in the film RK/RKay.
04-03-26 06:47 pm
HK News Staffer
ಅಡುಗೆ ವಿಚಾರದಲ್ಲಿ ಅತ್ತೆಯೊಂದಿಗೆ ಜಗಳ ಕಾದು ಯುವತಿ...
04-03-26 05:06 pm
ಚಿತ್ತೂರು ಬಳಿ ಭೀಕರ ರಸ್ತೆ ಅಪಘಾತ; ಕಂಟೇನರ್ ವಾಹನಕ್...
04-03-26 01:33 pm
ಮಾರ್ಚ್ 10ಕ್ಕೆ ಎಲ್ಲ ಶಾಸಕರು, ಸಚಿವರಿಗೆ ಡಿಕೆಶಿ ಡಿ...
04-03-26 01:27 pm
ಇರಾನ್ಗೆ ತೆರಳಿದ್ದ ಕಾಫಿನಾಡಿನ ಯುವಕ ನಾಪತ್ತೆ ; ಮಗ...
04-03-26 11:51 am
04-03-26 12:58 pm
HK News Staffer
ಯುದ್ಧಪೀಡಿತ ಮಧ್ಯಪ್ರಾಚ್ಯದಿಂದ ಪಾರಾಗಲು ಪ್ರತಿ ಸೀಟ್...
03-03-26 04:30 pm
ಊಟಕ್ಕೂ ಹಣವಿಲ್ಲ, ದಯವಿಟ್ಟು ಸಹಾಯ ಮಾಡಿ..! ಮಾಸ್ಕೋ...
03-03-26 04:14 pm
ಗಲ್ಫ್ ಉದ್ವಿಗ್ನ ; ವಿವಿಧೆಡೆ ಸಿಲುಕಿರುವ ಭಾರತೀಯರನ್...
03-03-26 04:11 pm
ಗಲ್ಫ್ ದೇಶಗಳ ತೈಲ ಘಟಕಗಳೇ ಟಾರ್ಗೆಟ್ ; ಇರಾನ್ ಕ್ಷಿಪ...
03-03-26 12:26 pm
04-03-26 10:54 am
HK News Staffer
ಬೇಸಗೆಯಲ್ಲಿ ಹಾವು ಕಡಿತ ಪ್ರಕರಣ ಹೆಚ್ಚಳ; ಕರಾವಳಿ, ಮ...
03-03-26 09:33 pm
'ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ' ಎಂದು...
03-03-26 08:42 pm
ವಿದ್ಯುತ್ ಗುತ್ತಿಗೆದಾರರಲ್ಲಿ ಪರ್ಸೆಂಟ್ ಲೆಕ್ಕದಲ್ಲಿ...
03-03-26 03:10 pm
ನಿಷ್ಠಾವಂತ ಆರೆಸ್ಸೆಸ್ ಕಾರ್ಯಕರ್ತ, ಮಂಗಳೂರಿನ ಬಿಜೆಪ...
03-03-26 02:39 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm