ಬ್ರೇಕಿಂಗ್ ನ್ಯೂಸ್
26-07-22 05:05 pm HK News Desk ದೇಶ - ವಿದೇಶ
ದೆಹಲಿ, ಜುಲೈ 26: ರಾಜ್ಯಸಭೆಯಲ್ಲಿ ಸಭಾಪತಿ ಪೀಠದ ಎದುರು ನಾಮಫಲಕ ಪ್ರದರ್ಶನ ಮಾಡಿದ್ದಕ್ಕೆ 11 ಸದಸ್ಯರನ್ನು ಒಂದು ವಾರ ಕಲಾಪದಿಂದ ಅಮಾನತು ಮಾಡಲಾಗಿದೆ.
ತೃಣಮೂಲ ಕಾಂಗ್ರೆಸ್ ಪಕ್ಷದ (TMC) ಸದಸ್ಯೆ ಸುಶ್ಮಿತಾ ದೇವ್, ಡಾ ಶಂತನು ಸೇನ್, ಡೋಲಾ ಸೇನ್, ಡಿಎಂಕೆ ಸದಸ್ಯೆ ಕನಿಮೋಳಿ ಸೇರಿದಂತೆ 11 ಸದಸ್ಯರನ್ನು ಅಮಾನತು ಮಾಡಲಾಗಿದೆ. ಜಿಎಸ್ಟಿ, ಬೆಲೆ ಏರಿಕೆ ವಿರು ದ್ಧ ಇವರು ಪ್ಲೆಕಾರ್ಡ್ ಹಿಡಿದು ಸದನದ ಬಾವಿಗಿಳಿದು ಘೋಷಣೆ ಕೂಗಿದ್ದಾರೆ. ಈ ರೀತಿ ಸದನದ ಬಾವಿಗಿಳಿದಿರುವುದು ದುರ್ನಡತೆ ಎಂದು ಹೇಳಿ ಇವರನ್ನು ಒಂದು ವಾರ ಕಲಾಪದಿಂದ ಅಮಾನತು ಮಾಡಲಾಗಿದೆ .
ಸೋಮವಾರ ಇದೇ ರೀತಿ ಪ್ಲೆಕಾರ್ಡ್ ಹಿಡಿದು ಘೋಷಣೆ ಕೂಗಿದ ನಾಲ್ವರು ಸಂಸದರನ್ನು ಲೋಕಸಭೆಯ ಕಲಾಪದಿಂದ ಅಮಾನತು ಮಾಡಲಾಗಿತ್ತು. ಇದಕ್ಕಿಂತ ಮುಂಚೆ ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಪ್ರತಿಪಕ್ಷಗಳು ಜಿಎಸ್ಟಿ ರೋಲ್ಬ್ಯಾಕ್ ಎಂದು ಘೋಷಣೆ ಕೂಗಿವೆ. ಉಪಸಭಾಪತಿಯವರು ದಯವಿಟ್ಟು ನಿಮ್ಮ ಸ್ಥಾನಗಳಿಗೆ ಹಿಂತಿರುಗಿ. ನೀವು ಸದನವನ್ನು ಕಾರ್ಯರೂಪಕ್ಕೆ ತರಲು ಬಿಡುತ್ತಿಲ್ಲ ಎಂಬುದನ್ನು ಇಡೀ ರಾಷ್ಟ್ರವೇ ನೋಡುತ್ತಿದೆ ಎಂದು ಹೇಳಿದ್ದಾರೆ.
ಟಿಎಂಸಿ ಸಂಸದರಾದ ಮೌಸಂ ನೂರ್, ಶಾಂತ ಚೇಟ್ರಿ, ನದಿಮುಲ್ ಹಖ್ , ಅಬೀರ್ ರಂಜನ್ ಬಿಸ್ವಾಸ್, ಡಿಎಂಕೆ ಸಂಸದರಾದ ಕನಿಮೊಳಿ, ಎಂ ಮೊಹಮ್ಮದ್ ಅಬ್ದುಲ್ಲಾ, ಸಿಪಿಐ(ಎಂ)ನ ಎಎ ರಹೀಂ ಅವರನ್ನು ಅಮಾನತು ಮಾಡಲಾಗಿದೆ.
‘ಕಾರ್ಗಿಲ್ ವಿಜಯ್ ದಿವಸ್’ನಂದು ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ 11 ಗಂಟೆಗೆ ಸದನದ ಕಲಾಪ ಪ್ರಾರಂಭವಾಯಿತು. ಸಭಾಪತಿ ಎಂ.ವೆಂಕಯ್ಯ ನಾಯ್ಡು ಅಮಾನತು ನೋಟಿಸ್ ಓದಲು ಆರಂಭಿಸಿದ ಕೂಡಲೇ ಪ್ರತಿಪಕ್ಷ ಸದಸ್ಯರು ಘೋಷಣೆಗಳನ್ನು ಕೂಗಲಾರಂಭಿಸಿದರು. ಘೋಷಣೆಗಳು ಮುಂದುವರಿದಿದ್ದರಿಂದ ಸಭಾಪತಿಯವರು ಸದನವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು.
ಜಿಎಸ್ಟಿ ದರ ಏರಿಕೆ, ಹಣದುಬ್ಬರ, ಕೇಂದ್ರೀಯ ಸಂಸ್ಥೆಗಳ ದುರುಪಯೋಗ ಮತ್ತು ಇತರ ವಿಷಯಗಳ ಕುರಿತು ಚರ್ಚಿಸಲು ರಾಜ್ಯಸಭೆಯಲ್ಲಿ ನಿಯಮ 267 ರ ಅಡಿಯಲ್ಲಿ ವ್ಯವಹಾರವನ್ನು ಸ್ಥಗಿತಗೊಳಿಸುವಂತೆ ವಿರೋಧ ಪಕ್ಷದ ಸದಸ್ಯರು ನೋಟಿಸ್ ನೀಡಿದ್ದಾರೆ.
Rajya Sabha proceedings were adjourned till 12 noon on Tuesday as opposition members continued to protest demanding discussion on price rise, inflation, GST and other issues.The proceedings of the House began at 11 a.m. after paying tribute to the soldiers for supreme sacrifice on 'Kargil Vijay Diwas'. Thereafter papers and reports listed for the day were laid. Opposition members started sloganeering as soon as Chairman M. Venkaiah Naidu started reading out suspension notices. As sloganeering continued, the Chairman adjourned the House till 12 noon.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
22-04-25 07:13 pm
HK News Desk
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm