ಬ್ರೇಕಿಂಗ್ ನ್ಯೂಸ್
05-07-22 04:06 pm HK News Desk ದೇಶ - ವಿದೇಶ
ಚಿಕಾಗೋ, ಜುಲೈ 5: ಅಮೆರಿಕದ ಚಿಕಾಗೋ ನಗರದಲ್ಲಿ ದೇಶದ ಸ್ವಾತಂತ್ರ್ಯ ದಿನದ ಪರೇಡ್ ನಡೆಯುತ್ತಿರುವಾಗಲೇ ಯುವಕನೊಬ್ಬ ರೈಫಲ್ ಹಿಡಿದು ಯದ್ವಾತದ್ವಾ ಗುಂಡು ಹಾರಿಸಿದ್ದು, ಆರು ಮಂದಿ ಸ್ಥಳದಲ್ಲೇ ಸಾವು ಕಂಡ ದುರಂತ ಘಟನೆ ನಡೆದಿದೆ. ಘಟನೆಯಲ್ಲಿ 30ಕ್ಕೂ ಹೆಚ್ಚು ಮಂದಿ ಮಕ್ಕಳು, ವೃದ್ಧರು, ಮಹಿಳೆಯರು ಗಾಯಗೊಂಡಿದ್ದಾರೆ.
ಜುಲೈ 4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯ ದಿನವನ್ನು ವಿಶೇಷವಾಗಿ ಸಂಭ್ರಮಿಸಲಾಗುತ್ತದೆ. ಅದರಂತೆ, ಚಿಕಾಗೋ ನಗರದ ಹೈಲ್ಯಾಂಡ್ ಪಾರ್ಕ್ ನಲ್ಲಿ ಜುಲೈ 4ರ ಸ್ಥಳೀಯ ಕಾಲಮಾನ ಬೆಳಗ್ಗೆ 10.30ರ ಸುಮಾರಿಗೆ ನೂರಾರು ಮಂದಿ ಸೇರಿ ಸಂಗೀತ ವಾದ್ಯಗಳ ನುಡಿಯೊಂದಿಗೆ ಹೆಜ್ಜೆ ಹಾಕುತ್ತಿದ್ದರು. ಸ್ವಾತಂತ್ರ್ಯ ಪೆರೇಡ್ ನೋಡುವುದಕ್ಕಾಗಿ ಬಹಳಷ್ಟು ಮಂದಿ ವೃದ್ಧರು, ಮಕ್ಕಳು, ಮಹಿಳೆಯರು ಅಲ್ಲಿ ಸೇರಿದ್ದರು. ಇದೇ ಸಂದರ್ಭದಲ್ಲಿ 22 ವರ್ಷದ ಯುವಕನೊಬ್ಬ ಕೈಯಲ್ಲಿ ರೈಫಲ್ ಹಿಡಿದು ಕಟ್ಟಡದ ಮೇಲೆ ನಿಂತು ಪ್ರೋಗ್ರಾಂ ನಡೆಯುತ್ತಿದ್ದಲ್ಲಿಗೆ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಮಡಿದವರಲ್ಲಿ 76 ವರ್ಷದ ವೃದ್ಧ ವ್ಯಕ್ತಿಯೂ ಇದ್ದರು. ಅವರು ವೀಲ್ ಚೇರ್ ನಲ್ಲಿ ಕುಳಿತು ಕಾರ್ಯಕ್ರಮ ನೋಡುತ್ತಿದ್ದರು. ಗಾಯಗೊಂಡವರಲ್ಲಿ 12 ಮಂದಿಯ ಸ್ಥಿತಿ ಗಂಭೀರ ಇದೆ.
ಶೂಟೌಟ್ ಸದ್ದು ಕೇಳುತ್ತಲೇ ಜನರು ಎಲ್ಲೆಂದರಲ್ಲಿ ಓಡಿದ್ದಾರೆ. ಈ ವೇಳೆ, ಗುಂಡು ಹಲವರಿಗೆ ತಾಗಿದ್ದು, 5 ವರ್ಷದ ಮಕ್ಕಳು ಸೇರಿ ಮಹಿಳೆಯರು, ವೃದ್ಧರು ಗಾಯಗೊಂಡಿದ್ದಾರೆ. ಯುವಕ ದೂರದ ಕಟ್ಟಡದ ಮೇಲೆ ನಿಂತು ಗುಂಡು ಹಾರಿಸಿದ್ದಾನೆ. ಹಾಗಾಗಿ ಹೆಚ್ಚಿನ ದುರಂತ ಆಗಿಲ್ಲ. ಆರೋಪಿ ರಾಬರ್ಟ್ ಕ್ರಿಮೋ ಎಂಬ 22 ವರ್ಷದ ಯುವಕನನ್ನು ಕೆಲವೇ ಹೊತ್ತಿನಲ್ಲಿ ಪೊಲೀಸರು ಸೆರೆಹಿಡಿದಿದ್ದಾರೆ. ಯಾಕಾಗಿ ಗುಂಡು ಹಾರಾಟ ನಡೆಸಿದ್ದಾನೆ ಅನ್ನುವುದು ಗೊತ್ತಾಗಿಲ್ಲ. ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಹಲವರು ಮೊಬೈಲಿನಲ್ಲಿ ಸ್ಥಳದ ಚಿತ್ರೀಕರಣ ನಡೆಸುತ್ತಿದ್ದರು. ಹೀಗಾಗಿ ಒಮ್ಮಿಂದೊಮ್ಮೆಲೇ ಶೂಟೌಟ್ ನಡೆಯುತ್ತಲೇ ಜನರು ದಿಕ್ಕಾಪಾಲಾಗಿ ಓಡಿದ್ದೂ ರೆಕಾರ್ಡ್ ಆಗಿದೆ. ಹೆಚ್ಚಿನವರಿಗೆ ಎಲ್ಲಿ ಏನಾಗುತ್ತಿದೆ ಅನ್ನುವುದೇ ತಿಳಿಯದೆ ಓಡಿದ್ದರು.
ಆದರೆ ಅಮೆರಿಕದಲ್ಲಿ ಗನ್ ಲೈಸನ್ಸ್ ಸುಲಭದಲ್ಲಿ ಸಿಗುತ್ತಿರುವುದೇ ಇಂತಹ ಕೃತ್ಯಕ್ಕೆ ಕಾರಣ ಎನ್ನಲಾಗುತ್ತಿದೆ. ಅಮೆರಿಕದ ಟೆಕ್ಸಾಸ್ ನಲ್ಲಿ ಕಳೆದ ಮೇ ತಿಂಗಳಲ್ಲಿ ಇದೇ ರೀತಿ ಯುವಕನೊಬ್ಬ ಶಾಲಾ ಆವರಣದಲ್ಲಿ ಶೂಟ್ ಮಾಡಿ, 21 ಜನರ ಸಾವಿಗೆ ಕಾರಣನಾಗಿದ್ದ. ಅದೇ ತಿಂಗಳಲ್ಲಿ ನ್ಯೂಯಾರ್ಕಿನಲ್ಲಿ ನಡೆದ ಶೂಟೌಟ್ ಘಟನೆಯಲ್ಲಿ ಹತ್ತು ಮಂದಿ ಸಾವು ಕಂಡಿದ್ದರು. ರೈಫಲ್ ಹಿಡಿದು ಯದ್ವಾತದ್ವಾ ಶೂಟ್ ಮಾಡುತ್ತಿರುವುದು ಅಮೆರಿಕದಲ್ಲಿ ಭಾರೀ ಅಪರಾಧ ಕೃತ್ಯವಾಗಿದ್ದು, ಅಲ್ಲಿನ ಸರಕಾರಕ್ಕೇ ಸವಾಲಾಗಿ ಪರಿಣಮಿಸಿದೆ.
A gunman on a rooftop opened fire on a U. S. Independence Day parade in suburban Chicago on Monday, killing at least six people, wounding at least 30 and sending hundreds of marchers, parents with strollers and children on bicycles fleeing in terror, police said.Authorities said a 22-year-old man named as a person of interest in the shooting was taken into police custody Monday evening after an hourslong manhunt.
21-04-25 07:27 pm
Bangalore Correspondent
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm