ಬ್ರೇಕಿಂಗ್ ನ್ಯೂಸ್
22-06-22 02:51 pm HK News Desk ದೇಶ - ವಿದೇಶ
ಮುಂಬೈ, ಜೂನ್ 22: ಶಿವಸೇನೆ ಶಾಸಕರು ಬಂಡೆದ್ದಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅನಾಥ ಸ್ಥಿತಿ ಅನುಭವಿಸಿದ್ದಾರೆ. ಹೀಗಾಗಿ ಪಕ್ಷದ ಶಾಸಕರು ಮತ್ತು ಸಂಸದರ ಸಭೆಯನ್ನು ತನ್ನ ನಿವಾಸದಲ್ಲಿ ಸಂಜೆ 5 ಗಂಟೆಗೆ ಕರೆದಿದ್ದು, ಉದ್ಧವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ ಎನ್ನುವ ವದಂತಿ ಹರಡಿದೆ.
ಇದೇ ವೇಳೆ, ರೆಬಲ್ ಶಾಸಕ ಏಕನಾಥ್ ಶಿಂಧೆ ಶಿವಸೇನೆಯ 46 ಶಾಸಕರು ತನ್ನ ಜೊತೆಗಿದ್ದಾರೆ ಎಂದು ಹೇಳಿದ್ದಾರೆ. 30ಕ್ಕೂ ಹೆಚ್ಚು ಶಾಸಕರು ತಮ್ಮ ಕುಟುಂಬದೊಂದಿಗೆ ಅಸ್ಸಾಂ, ಗುಜರಾತ್ ಸೇರಿದಂತೆ ವಿವಿಧ ಕಡೆಗಳಲ್ಲಿ ರೆಸಾರ್ಟ್ ಸೇರಿದ್ದಾರೆ. ಇದೇ ವೇಳೆ, ಕೆಲವು ಶಾಸಕರು ತಾವು ಹಿಂದುತ್ವದ ಆಧಾರದಲ್ಲಿ ಸರಕಾರ ರಚಿಸುವುದಕ್ಕೆ ಒಲವು ಹೊಂದಿದ್ದೇವೆ ಎಂದಿದ್ದಾರೆ. ಆಮೂಲಕ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಶಿವಸೇನೆ ಶಾಸಕರು ದಿಢೀರ್ ಆಗಿ ಏಕನಾಥ ಶಿಂಧೆ ನಾಯಕತ್ವದಲ್ಲಿ ಬಂಡೆದ್ದಿರುವುದರಿಂದ ಮಹಾರಾಷ್ಟ್ರ ಮಹಾ ವಿಕಾಸ್ ಅಘಾಡಿ ಸರಕಾರ ಪತನಗೊಳ್ಳುವುದು ನಿಶ್ಚಿತವಾಗಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಕಮಲನಾಥ್ ನೇತೃತ್ವದಲ್ಲಿ ಶಾಸಕರ ಸಭೆ ನಡೆಸಿದ್ದು, 44 ಮಂದಿಯ ಪೈಕಿ 41 ಶಾಸಕರಷ್ಟೇ ಪಾಲ್ಗೊಂಡಿದ್ದಾರೆ. ಇದರ ನಡುವೆಯೂ ಕಾಂಗ್ರೆಸ್ ಶಾಸಕರೆಲ್ಲ ಒಟ್ಟಾಗಿದ್ದೇವೆ ಎಂದು ಕಮಲನಾಥ್ ಹೇಳಿದ್ದಾರೆ. ಎಲ್ಲ ಶಾಸಕರು ಸಭೆಗೆ ಬರದೇ ಇರುವುದರಿಂದ ಕೆಲವು ಕಾಂಗ್ರೆಸ್ ಶಾಸಕರು ಕೂಡ ಸರಕಾರದ ವಿರುದ್ಧ ನಿಲುವು ಹೊಂದಿದ್ದಾರೆ ಎನ್ನುವ ಮಾತು ಕೇಳಿಬಂದಿದೆ.
ಇದೇ ವೇಳೆ, ಸಿಎಂ ಉದ್ಧವ್ ಠಾಕ್ರೆ ಕೋವಿಡ್ ಪಾಸಿಟಿವ್ ಆಗಿದ್ದು ಮನೆಯಲ್ಲೇ ವಿಶ್ರಾಂತಿಯಲ್ಲಿದ್ದಾರೆ. ಈ ಕಾರಣದಿಂದ ಕಾಂಗ್ರೆಸ್ ಶಾಸಕರು ಸಂಪುಟ ಸಭೆ ಕರೆಯಲು ಹೇಳಿದರೂ, ಅದು ಸಾಧ್ಯವಾಗಿಲ್ಲ. ವರ್ಚುವಲ್ ಮೀಟಿಂಗ್ ನಡೆಸಲಿದ್ದಾರೆ ಎನ್ನುವ ಮಾಹಿತಿಗಳಿವೆ. ಆದರೆ, ಶಿವಸೇನೆ ಶಾಸಕರು ಬಿಜೆಪಿ ಜೊತೆಗಿದ್ದಾರೆ ಅನ್ನುವ ಮಾಹಿತಿಗಳ ಹಿನ್ನೆಲೆಯಲ್ಲಿ ಪಕ್ಷದ ವಕ್ತಾರ ಸಂಜಯ್ ರಾವುತ್, ವಿಧಾನಸಭೆ ವಿಸರ್ಜಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ವಿಧಾನಸಭೆ ವಿಸರ್ಜನೆಗೆ ಕಾಂಗ್ರೆಸ್ ಶಾಸಕರು ಒಲವು ಹೊಂದಿಲ್ಲ. ಕಾಂಗ್ರೆಸ್ ನಾಯಕ ಕಮಲನಾಥ್, ವಿಸರ್ಜನೆ ಅಗತ್ಯವಿಲ್ಲ ಎನ್ನುವ ಹೇಳಿಕೆ ನೀಡಿದ್ದು, ಮುಖ್ಯಮಂತ್ರಿ ಬದಲಾವಣೆಗೆ ಕಸರತ್ತು ನಡೆಸುತ್ತಿದ್ದಾರೆಯೇ ಎನ್ನುವ ಅನುಮಾನ ಮೂಡಿದೆ.
ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಉದ್ಧವ್ ಠಾಕ್ರೆ ಬಗ್ಗೆ ಶಿವಸೇನೆ ಶಾಸಕರೇ ಅಸಮಾಧಾನ ಹೊಂದಿದ್ದಾರೆ. ಹೀಗಾಗಿ ಒಂದಷ್ಟು ಶಾಸಕರು ಏಕನಾಥ್ ಶಿಂಧೆ ನೇತೃತ್ವದಲ್ಲಿ ಒಂದಾಗಿದ್ದು, ಸರಕಾರದ ವಿರುದ್ಧ ನಿಲುವು ತಳೆದಿದ್ದಾರೆ. ಏಕನಾಥ್ ಶಿಂಧೆ ಜೊತೆಗಿದ್ದ ಶಾಸಕರೊಬ್ಬರು ಗುವಾಹಟಿಯಲ್ಲಿ ಪ್ರತಿಕ್ರಿಯಿಸಿ, ನಾವು ಬಾಳಾ ಸಾಹೇಬ್ ಪರ ಇರುವವರು, ಪಕ್ಷವನ್ನು ವಿಭಜಿಸುವ ಇರಾದೆ ಹೊಂದಿಲ್ಲ. ನಾವು ಹಿಂದುತ್ವ ಅನುಸರಿಸುತ್ತೇವೆ. ನಮ್ಮ ಸಿದ್ಧಾಂತ ಬಿಟ್ಟು ಕೊಡುವುದಿಲ್ಲ ಎಂದಿದ್ದಾರೆ.
Political crisis has deepened in Maharashtra. Uddhav Thackeray-led Maha Vikas Aghadi (MVA) government in Maharashtra is facing its worst crisis since coming into power in 2019. Senior Shiv Sena leader and state cabinet minister Eknath Shinde has rebelled against Uddhav Thackeray leadership. Mr Shinde has claimed the support of 40 Shiv Sena MLAs out of a total of 55 and took some of them to BJP-ruled Gujarat. They were shifted to Guwahati in Assam from Surat this morning. To circumvent the anti-defection law, Mr Shinde will need two-thirds of the 55 Shiv Sena MLAs which comes to 37, on his side.
22-05-25 11:09 pm
HK News Desk
Ramanagara, Bangalore South: ರಾಮನಗರ ಜಿಲ್ಲೆಯನ್...
22-05-25 09:07 pm
Alok Kumar IPS, DGP, Phone Tapping: ರಫ್ ಅಂಡ್...
22-05-25 07:36 pm
BJP Chalavadi Narayanaswamy, Congress, Priyan...
22-05-25 06:31 pm
Hassan, Bangalore, Heart Attack: ಪ್ರತ್ಯೇಕ ಪ್ರ...
22-05-25 01:09 pm
22-05-25 05:53 pm
HK News Desk
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
Operation Sindhoor, Rahul Gandhi,.Pakistan: ಆ...
20-05-25 01:42 pm
22-05-25 10:29 pm
Mangalore Correspondent
Thokottu Auto Driver Fight, Mangalore: ಅಡ್ಡ ಇ...
22-05-25 10:19 pm
Kishor Kumar Puttur; ಸರ್ಕಾರಿ ಆಸ್ಪತ್ರೆ ಬಳಿಯ ಜನ...
21-05-25 11:09 pm
Mangalore Beltangady, Akanksha Suicide, Updat...
21-05-25 10:45 pm
MP Kota Srinivas Poojary, Mangalore: ಇಂದಿರಾ ಗ...
21-05-25 09:30 pm
22-05-25 02:22 pm
HK News Desk
Mangalore Fraud, Currency trading scam: ಕರೆನ್...
19-05-25 09:38 pm
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm