ಬ್ರೇಕಿಂಗ್ ನ್ಯೂಸ್
05-05-22 04:09 pm HK Desk News ಕರ್ನಾಟಕ
ಬೆಳಗಾವಿ, ಮೇ 5 : ಮೈಸೂರು ತಾಲೂಕಿನಲ್ಲಿ ಕೌಲಂದೆ ಛೋಟಾ ಪಾಕಿಸ್ತಾನ ಅಂತಾ ಕೆಲವರು ಘೋಷಣೆ ಹಾಕಿದ್ದಾರೆ. ನೀವು ಭಾರತದ ಅನ್ನ ತಿನ್ನುತ್ತೀರಿ, ದೇಶದ್ರೋಹಿ ಘೋಷಣೆ ಹಾಕ್ತೀರಿ. ಸರ್ಕಾರ ತಕ್ಷಣವೇ ಅವರನ್ನ ಒದ್ದು ಒಳಗೆ ಹಾಕಬೇಕು. ಇಲ್ಲವಾದ್ರೆ ಶ್ರೀರಾಮ ಸೇನೆ ಕೌಲಂದೆ ಚಲೋ ನಡೆಸಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ವರಿಷ್ಠ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಮಾಧ್ಯಮಕ್ಕೆ ಮಾತನಾಡಿದ ಮುತಾಲಿಕ್, ಹಲವಾರು ವರ್ಷಗಳಿಂದ ಆಜಾನ್ ಮೈಕಿನ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಸುಪ್ರೀಂ ಕೋರ್ಟ್ ಆಜ್ಞೆ ಉಲ್ಲಂಘನೆ ಆಗುತ್ತಿದ್ದು ನಾವು ತಹಸೀಲ್ದಾರ್, ಡಿಸಿ ಅವರಿಗೆ ಮೇ 1ರ ಗಡುವು ಕೊಟ್ಟಿದ್ದೆವು. ಆದ್ರು ಬರೀ ನೋಟಿಸ್ ಕೊಟ್ಟಿದ್ದಾರೆ ಹೊರತು ಆಜಾನ್ ನಿಲ್ಲಿಸಿಲ್ಲ. ಮೇ 9ರಂದು ಒಂದು ಸಾವಿರಕ್ಕೂ ಹೆಚ್ಚು ದೇವಸ್ಥಾನದಲ್ಲಿ ಬೆಳಗ್ಗೆ 5.30 ಗಂಟೆಗೆ ಸುಪ್ರಭಾತ, ಹನುಮಾನ್ ಚಾಲಿಸಾ ಅಭಿಯಾನ ಆರಂಭಿಸುತ್ತಿದ್ದೇವೆ. ಸಮಾಜದಲ್ಲಿ ಬೇರು ಬಿಟ್ಟಿರುವ ಮುಸ್ಲಿಂ ಮಾನಸಿಕತೆ ಹೋಗಬೇಕಿದೆ. ನೀವು ನಮ್ಮ ಹೋರಾಟದ ವಿರುದ್ಧ ಕ್ರಮಕ್ಕೆ ಮುಂದಾದ್ರೆ ಸಂಘರ್ಷ ಆಗಲಿದೆ ಎಂದು ಹೇಳಿದ್ದಾರೆ.

ನಮ್ಮ ಹೋರಾಟ ಆಜಾನ್ ವಿರುದ್ಧ ಅಲ್ಲ, ಮೈಕಿನ ಧ್ವನಿಯಿಂದ ಆಗುತ್ತಿರುವ ಶಬ್ಧಮಾಲಿನ್ಯದ ವಿರುದ್ಧ ಅಷ್ಟೇ. ಹೇಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಆಜಾನ್ ಕೂಗುವ ಮೈಕ್ ಮೇಲೆ ಕ್ರಮ ಕೈಗೊಂಡರೋ ಅದೇ ರೀತಿ ಕ್ರಮ ಜರುಗಿಸಬೇಕು. ಮುಖ್ಯಮಂತ್ರಿಗಳೇ ಧೈರ್ಯ ತೋರಿಸಿ ಹೊರತು ಹೆದರಬೇಡಿ. ಮುಂದಿನ ಬಾರಿ 150 ಸೀಟು ಬೇಕಂದ್ರೆ ಧೈರ್ಯ ತೋರಿಸಬೇಕು. ಯೋಗಿ ಅವರಂತೆ ಮುಖ್ಯಮಂತ್ರಿ ಬೊಮ್ಮಾಯಿ ಗಂಡಸ್ಥನ ತೋರಿಸಬೇಕು ಎಂದು ಮುತಾಲಿಕ್ ಹೇಳಿದರು.
![]()
![]()
ಎಂಡಿಎಫ್ ಬಗ್ಗೆ ತನಿಖೆ ನಡೆಸಿ
ಮಂಗಳೂರಿನಲ್ಲಿ ಎಂಡಿಎಫ್ ಸಂಘಟನೆ ಸಕ್ರಿಯವಾಗಿರುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ನನಗೆ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಮುಸ್ಲಿಂ ಡಿಫೆನ್ಸ್ ಫೋರ್ಸ್ ಅಂತಾ ಮಾಡಿದ್ದಾರೆ. ಅದರಿಂದ ಖಟ್ಟರ್ ಮುಸ್ಲಿಮರನ್ನು ತಯಾರು ಮಾಡುವ ಪ್ರಕ್ರಿಯೆ ಆಗ್ತಾ ಇದೆ. ಒತ್ತಾಯದ ಮೂಲಕ ಮಾಡುವ ಮೂಲಭೂತವಾದಿಗಳ ತಯಾರಿಸುವ ಮಾಹಿತಿ ಇದೆ. ಪಿಎಫ್ಐ, ಸಿಎಫ್ಐ, ಎಸ್ಡಿಪಿಐ, ಎಐಎಂಐಎಂ ಸಂಘಟನೆಗಳ ಜೊತೆ ಎಂಡಿಎಫ್ ಸಂಘಟನೆ ಹುಟ್ಟುಹಾಕಿದ್ದಾರೆ. ಈ ಎಲ್ಲಾ ಸಂಘಟನೆಗಳನ್ನು ಹದ್ದುಬಸ್ತಿನಲ್ಲಿಟ್ಟು ಕ್ರಮ ಕೈಗೊಳ್ಳಬೇಕು. ಎಂಡಿಎಫ್ ಚಟುವಟಿಕೆ ಗಮನಿಸಿ ಸರ್ಕಾರ ಹದ್ದುಬಸ್ತಿನಲ್ಲಿಡಬೇಕು.
ಎಂಡಿಎಫ್ ಚಿಹ್ನೆ, ಮೆಸೇಜ್ ನೋಡಿದ್ರೆ ಅಲ್ಖೈದಾ ಮಾದರಿ ವರ್ತನೆ, ಲಕ್ಷಣಗಳು ಕಾಣುತ್ತಿವೆ. ಈಗ ಹೊಸದಾಗಿ ಹುಟ್ಟು ಹಾಕಿದ್ದಾರೋ ಮೊದಲು ಇತ್ತೋ ಎಂಬ ಬಗ್ಗೆ ಸರ್ಕಾರ ತನಿಖೆ ಮಾಡಬೇಕು ಎಂದು ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.
We have been fighting Azan Mike for many years. The Supreme Court order is being violated and we gave Tehsildar, DC a deadline of May 1. Azan does not stop, except that he has only issued notice.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm