ಬ್ರೇಕಿಂಗ್ ನ್ಯೂಸ್
14-04-22 04:14 pm Bengaluru Correspondent ಕರ್ನಾಟಕ
ಬೆಂಗಳೂರು, ಎ.14: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಗೆ ಕಾರಣ ಎಂದು ಆರೋಪಕ್ಕೀಡಾಗಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ಸಿಎಂ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ, ರೇಸ್ ಕೋರ್ಸ್ ರಸ್ತೆಯಲ್ಲಿ ಅಡ್ಡ ಹಾಕಿದ ಪೊಲೀಸರು ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು, ನೂರಾರು ಕಾರ್ಯಕರ್ತರು ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಿಂದ ಕಾಲ್ನಡಿಗೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾಗೆ ಹೊರಟಿದ್ದರು. ಭಾರಿ ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ರೇಸ್ ಕೋರ್ಸ್ ರಸ್ತೆ ದಾಟುತ್ತಿದ್ದಂತೆ ಬ್ಯಾರಿಕೇಡ್ ಮೂಲಕ ಅಡ್ಡ ಹಾಕಿದ ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದರು.




ರ್ಯಾಲಿಯಲ್ಲಿ ಉದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ಸರಕಾರದ ವಿರುದ್ಧ ಧಿಕ್ಕಾರ ಘೋಷಣೆ ಕೂಗುತ್ತಾ ಸಾಗಿದ್ದಾರೆ. ಭ್ರಷ್ಟ ಸರಕಾರ, ಭ್ರಷ್ಟ ಈಶ್ವರಪ್ಪ ಎಂದು ಕಾರ್ಯಕರ್ತರು ಘೋಷಣೆ ಕೂಗುತ್ತಾ ಸಾಗಿದ್ದು ಈಶ್ವರಪ್ಪ ರಾಜಿನಾಮೆ ನೀಡುವಂತೆ ಆಗ್ರಹಿಸಿದ್ದಾರೆ. ಈ ವೇಳೆ ರ್ಯಾಲಿಯನ್ನು ತಡೆದ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತಳ್ಳಾಟ ನಡೆಯಿತು. ರೇಸ್ ಕೋರ್ಸ್ ರಸ್ತೆ ಮತ್ತು ಕುಮಾರಕೃಪಾ ರಸ್ತೆಯಲ್ಲಿ ಬಿಗಿ ಪೊಲೀಸ್ ಕಾವಲು ಹಾಕಲಾಗಿತ್ತು.



ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್, ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಿ, ಬಂಧಿಸಬೇಕು. ನಿವೃತ್ತ ನ್ಯಾಯಮೂರ್ತಿಯ ನೇತೃತ್ವದಲ್ಲಿ ತನಿಖೆ ನಡೆಯಬೇಕು. ಏಕೆಂದರೆ, ರಾಜ್ಯ ಸರಕಾರದ ಪೊಲೀಸರೇ ಪ್ರಕರಣವನ್ನು ತನಿಖೆ ನಡೆಸಿದರೆ ಸತ್ಯಾಂಶ ಹೊರಗೆ ಬರುವ ಬಗ್ಗೆ ಸಂಶಯವಿದೆ ಎಂದು ಹೇಳಿದರು.
Congress leaders Randeep Surjewala, DK Shivakumar and Siddaramaiah and other party workers were arrested on Thursday, April 14, for staging a protest, demanding the removal of KS Eshwarappa from the Karnataka government. They were first detained and later placed under arrest on the way to Karnataka CM Basavaraj Bommai’s residence where they planned to stage a massive agitation.
17-01-26 08:02 pm
HK News Desk
Bangalore Accident, Budigere: ದೇವನಹಳ್ಳಿ - ಬೂದ...
17-01-26 05:53 pm
ಪಶ್ಚಿಮ ಬಂಗಾಳ -ಬೆಂಗಳೂರು ರೈಲಿನಲ್ಲೇ ಬರ್ತಿದ್ದಾರೆ...
17-01-26 05:29 pm
H.D. Kumaraswamy, Priyank Kharge: ಜೆಡಿಎಸ್ ನಿರ...
16-01-26 09:38 pm
ಹೇಯ್ ಬೆಂಕಿ ಹಚ್ತೀನಿ.. ನಿಂಗೆ ಚಪ್ಪಲಿಲಿ ಹೊಡಿಸ್ತೀನ...
16-01-26 04:35 pm
17-01-26 03:08 pm
HK News Desk
ಏಪ್ರಿಲ್ 1ರಿಂದ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ...
17-01-26 01:47 pm
ಜ.20ರಂದು ಬಿಜೆಪಿಗೆ ನೂತನ ಅಧ್ಯಕ್ಷರ ಘೋಷಣೆ ; ಅತಿ...
16-01-26 06:33 pm
ಇಂಗ್ಲಿಷ್ ಮತ್ತು ಯುರೋಪಿಯನ್ ಭಾಷೆಗಳಿಗೂ ಸಂಸ್ಕೃತವೇ...
16-01-26 02:26 pm
ಕುಂಬಳೆ ; ಆರಿಕ್ಕಾಡಿ ಟೋಲ್ ಗೇಟ್, ಕ್ಯಾಮರಾ ಕಿತ್ತೆಸ...
15-01-26 12:14 pm
17-01-26 05:12 pm
Mangalore Correspondent
ಉಳ್ಳಾಲ ದರ್ಗಾ ಕಮಿಟಿ ವಿರುದ್ಧ ಹೈಕೋರ್ಟ್ ತೀರ್ಪಿತ್ತ...
17-01-26 05:00 pm
Suniel Shetty, Ahan Shetty, Kuthar Koragajja...
16-01-26 10:28 pm
ಡ್ರಗ್ಸ್ ಮುಕ್ತ ಕಾರ್ಯಕ್ಕಾಗಿ ಕಮಿಷನರ್ ದಿಟ್ಟ ಹೆಜ್ಜ...
16-01-26 09:44 pm
ಕರಾವಳಿ ಪ್ರಯಾಣಿಕರಿಗೆ ಸಿಹಿಸುದ್ದಿ ; ಮಂಗಳೂರು- ಮರವ...
16-01-26 07:33 pm
16-01-26 09:01 pm
HK News Desk
Cyber Fraud Biggest Bangalore: ದೇಶದ ಅತಿ ದೊಡ್ಡ...
15-01-26 11:07 pm
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm