ಬ್ರೇಕಿಂಗ್ ನ್ಯೂಸ್
29-08-24 01:46 pm HK News Desk ಕರ್ನಾಟಕ
ಮಂಡ್ಯ, ಆ 29: ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಸಂಚಾರ ಸುರಕ್ಷತೆಗಾಗಿ ಹಲವಾರು ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಆದಾಗ್ಯೂ ವಾಹನ ಸವಾರರು ಇದನ್ನು ಉಲ್ಲಂಘಿಸುತ್ತಲೇ ಇರುತ್ತಾರೆ. ಇಂಥದ್ದೆ ಒಂದು ಪ್ರಕರಣಕ್ಕೆ ಇದೀಗ ಪೊಲೀಸರು ಬಿಸಿ ಮುಟ್ಟಿಸಲು ಸಿದ್ದವಾಗಿದ್ದಾರೆ.
ನಾಲ್ಕು ದಿನದ ಹಿಂದೆ ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಬಸ್ ಮುಂಬೈ ಕಡೆಗೆ ಹೊರಟಿತ್ತು ಮಂಡ್ಯ ಸಮೀಪ ಬಸ್ ವಿರುದ್ದ ದಿಕ್ಕಿನಲ್ಲಿ ವೇಗವಾಗಿ ಚಲಿಸಿದ್ದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು.
ರಾಂಗ್ ಸೈಡ್ ನಲ್ಲಿ ಅತೀ ವೇಗವಾಗಿ ಸಂಚರಿಸುತ್ತಿದ್ದದ್ದನ್ನು ನಾಗರಾಜನ್ ಎಂಬುವವರು ವಿಡಿಯೋ ಮಾಡಿ ಟ್ವೀಟರ್ ನಲ್ಲಿ ಪೋಸ್ಟ್ ಮಾಡಿ ಸಂಬಂಧಪಟ್ಟವರ ಗಮನ ಸೆಳೆದಿದ್ದರು.
ವೇಗವಾಗಿ ರಾಂಗ್ ರೂಟ್ ನಲ್ಲಿ ತೆರಳುತ್ತಿದ್ದ ಈ ವಾಹನದ ನಂಬರ್ ಪ್ಲೇಟ್ ಸೇರಿದಂತೆ ಯಾವುದೇ ಮಾಹಿತಿಯೂ ವಿಡಿಯೋದಲ್ಲಿ ಲಭ್ಯವಿರಲಿಲ್ಲ. ಆದರೂ ಈ ಪೋಸ್ಟ್ ಗೆ ಸ್ಪಂಧಿಸಿದ ಮಂಡ್ಯ ಪೊಲೀಸರು ಕಡೆಗೂ ವಾಹನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಡಿಜಿಪಿ ಅಲೋಕ್ ಕುಮಾರ್ ಹೇಳಿರುವುದಿಷ್ಟು..ಇದು ಕ್ರೂರ ಮತ್ತು ತುಂಬಾ ಅಪಾಯಕಾರಿ , ವಾಹನ ಸಂಖ್ಯೆ ಮತ್ತು ಇತರ ವಿವರಗಳು ಲಭ್ಯವಿಲ್ಲದಿದ್ದರೂ, ಮಂಡ್ಯ ಪೊಲೀಸರು ಬಸ್ ಅನ್ನು ಪತ್ತೆಹಚ್ಚಲು ಮತ್ತು ಕಠಿಣ ಕ್ರಮ ತೆಗೆದುಕೊಳ್ಳಲು ಗಂಭೀರ ಪ್ರಯತ್ನ ನಡೆಸಿದರು.
"ರಸ್ತೆ ಬಳಕೆದಾರರ ಸುರಕ್ಷತೆಯ ಮೇಲೆ ಗಂಭೀರ ಪರಿಣಾಮ ಬೀರುವ ಇಂತಹ ಉಲ್ಲಂಘನೆಗಳನ್ನು ಕ್ಷಮಿಸಲಾಗುವುದಿಲ್ಲ"
ಮಂಡ್ಯ ಪೊಲೀಸರು VRL ಕಂಪನಿಯನ್ನು ಸಂಪರ್ಕಿಸಿದ್ದಾರೆ. ಇದು ಎಂಎಚ್ ನಂಬರ್ ಪ್ಲೇಟ್ ಬಸ್ ಆಗಿದ್ದು, ಪ್ರಸ್ತುತ ತಪ್ಪಿತಸ್ಥ ಚಾಲಕ ಬಸ್ ನೊಂದಿಗೆ ಮುಂಬೈನಲ್ಲಿದ್ದಾನೆ ಎಂದು ತಿಳಿಸಿದ್ರು. ಚಾಲಕ ನನ್ನು ಸಂಪರ್ಕಿಸಿದ ಪೊಲೀಸರು ಮಂಡ್ಯ ಠಾಣೆಗೆ ಬರುವಂತೆ ಸೂಚಿಸಿದ್ದರು. ಸಂಚಾರ ನಿಯಮ ಉಲ್ಲಂಘಿಸಿ ವಿರುದ್ದ ದಿಕ್ಕಿನಲ್ಲಿ ಬಸ್ ಓಡಿಸಿದ ಚಾಲಕ ಸೇರಿ ಬಸ್ ಜಪ್ತಿ ಮಾಡಿದ್ದಾರೆ. ಚಾಲಕ ಪ್ರಶಾಂತ್ ಹಾಗು ನೀಲಪ್ಪನನ್ನ ಬಂಧಿಸಲಾಗಿದೆ.
ಘಟನೆ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
It’s atrocious and so dangerous
— alok kumar (@alokkumar6994) August 25, 2024
Though vehicle number and other details are not available, Mandya Police is making serious efforts to trace the bus and take stringent action
“Such violations having a serious bearing on the safety of Road users won’t be condoned” https://t.co/nBYHxPy2Y4
VRL Bus rash driving in opposite direction at Mysuru Bangalore highway, bus seized, driver arrested by mandya police after the video went viral on social media. Police have seized the bus and arrested driver and the cleaner.
17-03-25 11:54 am
Bangalore Correspondent
Yatnal, Pramod Muthalik: ' ಬಾಂಬ್ ಹಾಕಿ ಹೊಟ್ಟೆ...
16-03-25 10:32 pm
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
17-03-25 11:29 am
Mangalore Correspondent
UT Khader, Mangalore, Tulu Academy: ತುಳು ಕಲಿತ...
16-03-25 10:55 pm
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm