ಬ್ರೇಕಿಂಗ್ ನ್ಯೂಸ್
04-08-24 05:41 pm Bangalore Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 4: ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ 25 ಲಕ್ಷ ಲಂಚದ ಒತ್ತಡಕ್ಕೆ ಬಿದ್ದು ಪಿಎಸ್ಐ ಪರಶುರಾಮ್ ಮೃತಪಟ್ಟಿದ್ದಾರೆಂಬ ವಿಚಾರ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿರುವಾಗಲೇ ಆತನ ಪತ್ನಿಗೆ ಸರ್ಕಾರಿ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇವೆ, ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಪಿಎಸ್ಐ ಪರಶುರಾಮ್ ನಿಗೂಢ ಸಾವು ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಲ್ಲಿನ ಆಡಳಿತ ಪಕ್ಷದ ಶಾಸಕರ ಮೇಲೆ ಆಪಾದನೆ ಮಾಡಿದ್ದಾರೆ. ಸಿಐಡಿ ತನಿಖೆಗೆ ಪ್ರಕರಣವನ್ನು ಕೊಟ್ಟಿದ್ದೇವೆ, ತನಿಖೆ ನಡೆಯುತ್ತಿದೆ. ಇದು ಆತ್ಮಹತ್ಯೆ ಅಲ್ಲ ಅಂತ ಇಲಾಖೆ ಹೇಳಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ಕಾರಣ ಗೊತ್ತಾಗುತ್ತದೆ. ಪತ್ನಿಗೆ ಇಲಾಖೆಯಲ್ಲಿ ಕೆಲಸ, ಪರಿಹಾರ ಕೊಡೋಕೆ ಸರ್ಕಾರ ತೀರ್ಮಾನ ಮಾಡಿದೆ ಎಂದು ತಿಳಿಸಿದ್ದಾರೆ.
10 ತಿಂಗಳು ಸರ್ಕಾರ ಇರಲ್ಲ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಂತಹ ಮಾತುಗಳು ಬರೋದು ಸ್ವಾಭಾವಿಕ. ಅಸ್ಥಿರವಾಗುವ ಸೂಚನೆಗಳು ನಮ್ಮಲ್ಲಿ ಕಾಣಿಸ್ತಿಲ್ಲ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಸಚಿವರ ಖಾತೆ ಹಂಚಿಕೆ ವಿಚಾರದ ಕುರಿತು ಮಾತನಾಡಿದ ಅವರು, ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ಇವತ್ತು (ಭಾನುವಾರ) ಸಂಜೆ ಕಾಂಗ್ರೆಸ್ ನಾಯಕರ ಸಭೆ ಕರೆದಿದ್ದಾರೆ. ಸಭೆಯ ಅಜೆಂಡಾ ಏನಂತ ಗೊತ್ತಿಲ್ಲ. ಎಲ್ಲ ಮಂತ್ರಿಗಳನ್ನ ಕರೆದಿದ್ದಾರೆ. ರಾಜ್ಯಪಾಲರು ಸಿಎಂಗೆ ಶೋಕಾಸ್ ನೀಡಿದ್ದಾರೆ. ಸಂಪುಟ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ರೆಸೆಲ್ಯೂಷನ್ ಮಾಡಿ, ಶೋಕಾಸ್ ನೋಟಿಸ್ ವಾಪಸ್ ಪಡೆಯುವಂತೆ ಮನವಿ ಮಾಡಿದ್ದೇವೆ. ಅಡ್ವೈಸರಿ ರೂಪದಲ್ಲಿ ಮನವಿ ಮಾಡಿದ್ದೇವೆ. ಈ ಬಗ್ಗೆ ಹೈಕಮಾಂಡ್, ಸುರ್ಜೆವಾಲಾ, ಕೆ.ಸಿ ವೇಣುಗೋಪಾಲ್ರನ್ನ ರಾಜ್ಯಕ್ಕೆ ಕಳಿಸ್ತಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡಬಹುದು ಎಂದು ನುಡಿದಿದ್ದಾರೆ.
The state government has issued an order transferring the Yadgiri PSI Parashuram case to the CID.The Home Department has written to the CID DGP for further investigation of the case and instructed him to investigate the case thoroughly. A tragic and suspicious death of PSI Parashuram (34) from Yadgiri Cyber Crime Station has stirred controversy and serious allegations against local political figures.
05-09-25 11:15 pm
Bangalore Correspondent
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
ಕಾಂಗ್ರೆಸಿನ ಯಾರ ಮನೆಯ ನಾಯಿ ಸ್ವಾತಂತ್ರ್ಯಕ್ಕಾಗಿ ಹೋ...
03-09-25 09:00 pm
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
04-09-25 08:47 pm
HK News Desk
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
ಯಮ‘ಕಂಪನ’ ; ತಾಲಿಬಾನಿಗಳ ನೆಲೆ ಈಗ ಗಢಗಢ..ಭೂಕಂಪಕ್ಕೆ...
03-09-25 07:18 pm
05-09-25 08:12 pm
Mangalore Correspondent
ತಡರಾತ್ರಿ ಫಾಸ್ಟ್ ಫುಡ್ ಗೌಜಿ ಪ್ರಶ್ನಿಸಿದ್ದಕ್ಕೆ ಸಿ...
05-09-25 05:09 pm
ಸೌಜನ್ಯಾ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಿದ್ದೇ ಆರ್....
04-09-25 11:07 pm
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
Brijesh Chowta, Mangalore: ಜಿಎಸ್ಟಿ ಹೊರೆ ಇಳಿಸಿ...
04-09-25 07:57 pm
05-09-25 10:53 pm
Mangalore Correspondent
Mukka Murder, Mangalore, Crime: ಪತ್ನಿಯ ಅಶ್ಲೀಲ...
05-09-25 10:26 pm
Atm robbery, Ullal, Kotekar, Mangalore: ಕೋಟೆಕ...
05-09-25 08:36 pm
16 ವರ್ಷಗಳ ಹಳೆ ಪ್ರಕರಣದಲ್ಲಿ ಶಿಕ್ಷೆ ; ಬ್ರಹ್ಮಾವರದ...
05-09-25 12:34 pm
ಹಟ್ಟಿಯಲ್ಲಿದ್ದ ಹಸುವನ್ನು ನಡುರಾತ್ರಿ ಎಳೆದೊಯ್ದು ರೈ...
05-09-25 11:43 am