ಬ್ರೇಕಿಂಗ್ ನ್ಯೂಸ್
29-07-24 12:31 pm Bangalore Correspondent ಕರ್ನಾಟಕ
ಬೆಂಗಳೂರು, ಜುಲೈ 29: ಬಿಬಿಎಂಪಿ ಕಸದ ಲಾರಿ ಹರಿದು ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಮೃತಪಟ್ಟ ಘಟನೆ ಭಾನುವಾರ ರಾತ್ರಿ ಕೆ.ಆರ್.ಸರ್ಕಲ್ ಬಳಿ ನಡೆಯಿತು. ಮೃತರನ್ನು ಬಾಣಸವಾಡಿ ನಿವಾಸಿ ಪ್ರಶಾಂತ್ (25) ಹಾಗೂ ಆಂಧ್ರಪ್ರದೇಶ ಮೂಲದ ಶಿಲ್ಪಾ (27) ಎಂದು ಗುರುತಿಸಲಾಗಿದೆ. ಐಟಿಪಿಎಲ್ನ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಹಾಗೂ ಶಿಲ್ಪಾ ನಿನ್ನೆ ಊಟಕ್ಕೆಂದು ಹೊರಗಡೆ ಬಂದಿದ್ದಾಗ ಅವಘಡ ಸಂಭವಿಸಿದೆ.
ಅಪಘಾತ ನಡೆದಿದ್ದು ಹೇಗೆ?:
ರಾತ್ರಿ 8:45ರ ಸುಮಾರಿಗೆ ಮೆಜೆಸ್ಟಿಕ್ನಿಂದ ಕೆ.ಆರ್.ವೃತ್ತದ ಕಡೆ ಬೈಕ್ನಲ್ಲಿ ಬರುತ್ತಿದ್ದಾಗ ಸಿಐಡಿ ಜಂಕ್ಷನ್ ಮೂಲಕ ಸಂಪರ್ಕ ಕಲ್ಪಿಸುವ ರಸ್ತೆಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಲಾರಿ ಇಬ್ಬರ ಮೈಮೇಲೂ ಹರಿದಿದೆ. ಗಾಯಾಳುಗಳನ್ನು ಸಮೀಪದ ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆಯೇ ಇಬ್ಬರೂ ಮೃತಪಟ್ಟಿದ್ದಾರೆ
ಅಪಘಾತದ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಹಲಸೂರು ಗೇಟ್ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಸದ ಲಾರಿಗೆ ಟೆಕ್ಕಿಗಳು ಬಲಿ:
ಪ್ರಶಾಂತ್ ಮತ್ತು ಶಿಲ್ಪಾ ಟೆಕ್ಕಿಗಳಾಗಿದ್ದು, ಟಿಸಿಎಸ್ನಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ರಜೆ ಹಿನ್ನೆಲೆಯಲ್ಲಿ ಊಟಕ್ಕೆಂದು ಹೊರಗಡೆ ಬಂದಿದ್ದರು. ಈ ವೇಳೆ ಯಮನಂತೆ ಕಸದ ಲಾರಿ ಅಡ್ಡ ಬಂದಿದೆ. ಮೃತರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಬಿಬಿಎಂಪಿ ಕಸದ ಲಾರಿ ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.
ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ:
ಬಿಬಿಎಂಪಿ ಕಸದ ಲಾರಿ ಅಪಘಾತದಲ್ಲಿ ನಿನ್ನೆ ರಾತ್ರಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಬಿಬಿಎಂಪಿ ಮೃತರ ಕುಟುಂಬಗಳಿಗೆ ನೆರವು ಕೊಡಲಿದೆ. ಇದು ದುರಾದೃಷ್ಟಕರ ಘಟನೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು.
Two persons on a two-wheeler were killed when a BBMP garbage truck ran over them near K.R. Circle on Sunday night. The deceased have been identified as Prashanth (25), a resident of Banaswadi and Shilpa (27), a native of Andhra Pradesh.
17-07-26 02:55 pm
HK News Staffer
ನಾಲ್ಕು ತಿಂಗಳಲ್ಲೇ ಅಂತ್ಯಗೊಂಡ ನವಜೀವನ! ಅನಾರೋಗ್ಯದ...
13-07-26 10:21 pm
ರಾಜ್ಯದಲ್ಲಿ 72,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ...
13-07-26 02:50 pm
3-4 ತಿಂಗಳಲ್ಲಿ ಗ್ರಾಮ ಪಂಚಾಯತಿ ಚುನಾವಣೆ ; ಕ್ಷೇತ್ರ...
13-07-26 10:32 am
ಹಾಸನ ಎಸ್ಡಿಎಂ ಆಯುರ್ವೇದ ಕಾಲೇಜು ವಿದ್ಯಾರ್ಥಿಗಳಿಂದ...
11-07-26 01:48 pm
17-07-26 10:32 am
HK News Staffer
ಹಾರ್ಮುಜ್ನಲ್ಲಿ ಇರಾನ್ ಅಟ್ಟಹಾಸ! ಮತ್ತೆ ಎರಡು ಟ್ಯಾ...
14-07-26 08:20 pm
ಹಾಡು ನಿಲ್ಲಿಸಿದ ‘ಗಾನಕೋಗಿಲೆ’ ; ಖ್ಯಾತ ಗಾಯಕಿ ಎಸ್....
11-07-26 09:29 pm
ವಿಯೆಟ್ನಾಂ ದ್ವೀಪ ಸಮೂಹದಲ್ಲಿ ಭಾರತೀಯ ಪ್ರವಾಸಿಗರಿದ್...
11-07-26 04:31 pm
ರಾಮ ಮಂದಿರದ ದೇಣಿಗೆ ಕಳ್ಳತನ; ಕದ್ದ ಹಣವನ್ನು ಷೇರು ಮ...
11-07-26 11:48 am
17-07-26 10:25 pm
HK News Staffer
ಎಸ್ಐಆರ್ ನಡುವೆ ಶಾಶ್ವತ ನಿವಾಸಿ ಪತ್ರ ಜಾರಿ ಅಕ್ರಮ ಬ...
17-07-26 07:58 pm
ಉಳ್ಳಾಲ ತೀರಕ್ಕೆ ಅಪ್ಪಳಿಸಿದ ಬೂತಾಯಿ ಮೀನುಗಳ ರಾಶಿ !...
17-07-26 07:22 pm
ಸುರತ್ಕಲ್ ಬಳಿ ಮೀನುಗಾರಿಕಾ ದೋಣಿ ಪಲ್ಟಿ ; ಸಮುದ್ರಕ್...
17-07-26 03:55 pm
ಸೌಂದರ್ಯ ಕೆಡಿಸಿದೆ ತೊಕ್ಕೊಟ್ಟು ಫ್ಲೈ ಓವರಿನ ಅನಧಿಕೃ...
15-07-26 10:44 pm
17-07-26 09:07 pm
HK News Staffer
ಮಠದಕಣಿ ಮನೆ ಕಳ್ಳತನ ಬೆನ್ನತ್ತಿದ ಬರ್ಕೆ ಪೊಲೀಸರು; ನ...
17-07-26 08:11 pm
ಬಿಸಿ ರೋಡಿನಲ್ಲಿ ಯುವತಿ ಕೊಂದ ಆರೋಪಿ ಚೇತನ್ ಪಚ್ಚನಾಡ...
17-07-26 12:58 pm
Bc Road Murder Update, Mangalore: ಏಕಮುಖದ ಪ್ರೀ...
16-07-26 09:26 pm
BC Road Murder, Crime Mangalore: ಬಿಸಿ ರೋಡ್ ಬಸ...
16-07-26 07:25 pm