ಬ್ರೇಕಿಂಗ್ ನ್ಯೂಸ್
30-03-24 06:07 pm HK News Desk ಕರ್ನಾಟಕ
ಮಂಡ್ಯ, ಮಾ 29: ಚುನಾವಣೆ ಬಂದ್ರೆ ಸಾಕು ಎಚ್ಡಿ ಕುಮಾರಸ್ವಾಮಿ ಹೃದಯದ ಸಮಸ್ಯೆ ಇದೆ ಎಂದು ಹೇಳ್ತಾರೆ. ಚುನಾವಣೆ ಹತ್ತಿರ ಇರುವಾಗ ಆಸ್ಪತ್ರೆ ಸೇರುತ್ತಾರೆ ಎಂದು ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಲೇವಡಿ ಮಾಡಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಮಾತಿನ ಸಮರ ಜೋರಾಗಿದೆ.
ಮಂಡ್ಯದ ಮಳವಳ್ಳಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಎಲೆಕ್ಷನ್ ಸಮೀಪ ಬಂದಾಗ ಎಚ್ಡಿ ಕುಮಾರಸ್ವಾಮಿ ಆಸ್ಪತ್ರೆ ಸೇರ್ತಾರೆ. ಹೃದಯದ ಶಸ್ತ್ರ ಚಿಕಿತ್ಸೆ ಆಗುತ್ತದೆ. ಮೂರೇ ದಿನಕ್ಕೆ ಆಸ್ಪತ್ರೆಯಿಂದ ಹೊರಗೆ ಬರ್ತಾರೆ, ಇಡೀ ರಾಜ್ಯ ಸುತ್ತಾಡ್ತಾರೆ. ಅದು ಹೇಗೆ ಸಾಧ್ಯ ಎಂಬುದೇ ಅರ್ಥ ಆಗ್ತಿಲ್ಲ. ಇದು ಹೊಸ ಟೆಕ್ನಿಕ್ಕಾ ಹೇಗೆ ಅಂತಾ ಗೊತ್ತಾಗ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಅದಲ್ಲದೇ ನಮ್ಮ ಸಚಿವರಾದ ಚಲುವರಾಯಸ್ವಾಮಿಗೆ ಎಚ್ಡಿ ಕುಮಾರಸ್ವಾಮಿ ಅವರಂತೆ ಹೃದಯದ ಸಮಸ್ಯೆ ಇದೆ. ಆದರೆ, ಅವರು ಆಸ್ಪತ್ರೆಗೆ ಹೋದರೆ ತಿಂಗಳುಗಟ್ಟಲೇ ಬರಲ್ಲ. ಆದರೆ, ಎಚ್ಡಿ ಕುಮಾರಸ್ವಾಮಿ ಮಾತ್ರ ಆಪರೇಷನ್ ಆದ ಎರಡೇ ದಿನಕ್ಕೆ ಆಸ್ಪತ್ರೆಯಿಂದ ಹೊರಗಡೆ ಬಂದು ರಾಜ್ಯವೆಲ್ಲಾ ಸುತ್ತಾಡ್ತಾರೆ. ಇದೇನು ಹೊಸ ಟೆಕ್ನಿಕ್ಕಾ ಹೇಗೆ ಎಂದು ಕಿಡಿಕಾರಿದರು.
ಜನರೇ ಉತ್ತರ ಕೊಡ್ತಾರೆ ಬಿಡಿ ಎಂದ ಎಚ್ಡಿಕೆ!
ಇನ್ನು, ರಮೇಶ್ ಬಂಡಿಸಿದ್ದೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಚ್ಡಿ ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕರಿಗೆ ನೇರವಾಗಿ ನನ್ನ ಮುಂದೆ ಬಂದು ಮಾತಾಡೋಕೆ ಹೇಳಲಿ ಹೇಳ್ತೀನಿ. ನನ್ನ ಆರೋಗ್ಯದ ಬಗ್ಗೆ ಮಾತಾಡಿ ಅವರು ಖುಷಿ ಪಡಲಿ ಬಿಡಿ. ಇದಕ್ಕೆ ಜನರು ಇದ್ದಾರೆ, ಅವರೇ ಕಾಂಗ್ರೆಸ್ನವರಿಗೆ ಉತ್ತರ ಕೊಡ್ತಾರೆ ಎಂದರು.
ನಿಖಿಲ್ ಕುಮಾರಸ್ವಾಮಿ ಭಾವುಕ!
ಇನ್ನು, ರಮೇಶ್ ಬಂಡಿಸಿದ್ದೇಗೌಡ ಹೇಳಿಕೆಗೆ ಭಾವುಕರಾಗಿ ಪ್ರತಿಕ್ರಿಯಿಸಿರುವ ನಿಖಿಲ್ ಕುಮಾರಸ್ವಾಮಿ, ನಮ್ಮ ತಂದೆಗೆ ಆಪರೇಷನ್ ಆಗಿರುವುದು ಸತ್ಯ, ಮೂರನೇ ಬಾರಿಗೆ ಆಪರೇಷನ್ ಆಗಿದೆ. ಸುಳ್ಳು ಹೇಳಿಕೊಂಡು ಅನುಕಂಪ ಗಿಟ್ಟಿಸಿಕೊಳ್ಳಲ್ಲ. ನಾವು ಅದನ್ನೆಲ್ಲ ಪ್ರೂವ್ ಮಾಡಿಕೊಳ್ಳಬೇಕಾ ಎಂದು ಹೇಳಿದ್ದಾರೆ. ಆರು ವರ್ಷಕ್ಕೆ ಮೂರು ಸಾರಿ ಆಪರೇಷನ್ಗೆ ಒಳಗಾಗಿದ್ದಾರೆ. ಜಿಲ್ಲೆಯ ಜನತೆ ನೋಡಿರುತ್ತಾರೆ, ಆ ರೀತಿ ಮಾತನಾಡಬೇಡಿ. ನಮಗಾಗಿ ನಾವು ಕಣ್ಣೀರು ಹಾಕಿಲ್ಲ. ಅವರೊಬ್ಬ ಭಾವ ಜೀವಿ. ಕಣ್ಣೀರು ಹಾಕಿ ನಾವು ಪ್ರಚಾರ ಗಿಟ್ಟಿಸಿಕೊಳ್ಳಬೇಕಿಲ್ಲ. ಕುಮಾರಸ್ವಾಮಿ ಬಂದು ಇಲ್ಲಿ ಸ್ಪರ್ಧೆ ಮಾಡ್ತಿರೋದು ಅವರಿಗೆ ಸಹಿಸಲಾಗ್ತಿಲ್ಲ, ಹಾಗಾಗಿ ಈ ರೀತಿ ಲಘುವಾದ ಹೇಳಿಕೆ ನೀಡ್ತಿದ್ದಾರೆ, ಇದಕ್ಕೆಲ್ಲಾ ಸೂಕ್ತ ಸಮಯದಲ್ಲಿ ಸೂಕ್ತ ಉತ್ತರವನ್ನು ನೀಡ್ತಾರೆ ಎಂದು ಹೇಳಿದರು.
Congress MLA Ramesh mocks HD Kumaraswamy over his heart operation says how is it possible that he always gets admitted when the elections are near for which Nikil Kumaraswamy became emotional
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 09:22 pm
Mangalore Correspondent
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm