ಬ್ರೇಕಿಂಗ್ ನ್ಯೂಸ್
12-02-24 10:26 pm Bangalore Correspondent ಕರ್ನಾಟಕ
ಬೆಂಗಳೂರು, ಫೆ 12: ಗೃಹಿಣಿಯ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ರಾಜಧಾನಿ ಬೆಂಗಳೂರಿನ ರಾಜಗೋಪಾಲನಗರದಲ್ಲಿ ನಡೆದಿದೆ.
22 ವರ್ಷದ ಕಾವ್ಯ ಮೃತ ದುರ್ದೈವಿಯಾಗಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ರಾಜಗೋಪಾಲ ನಗರದ ಮೋಹನ್ ಥಿಯೇಟರ್ ಸಮೀಪದ ಮನೆಯಲ್ಲಿ ಘಟನೆ ನಡೆದಿದ್ದು, ಕುಣಿಗಲ್ ನಿವಾಸಿಯಾಗಿದ್ದ ಮೃತ ಕಾವ್ಯ ಅವರನ್ನು ಎರಡು ವರ್ಷಗಳ ಹಿಂದಷ್ಟೇ ಪ್ರವೀಣ್ ಎಂಬಾತನಿಗೆ ಕುಟುಂಬಸ್ಥರು ಮದುವೆ ಮಾಡಿಕೊಟ್ಟಿದ್ದರು. ದಂಪತಿಗೆ ಒಂದು ವರ್ಷದ ಮಗು ಕೂಡ ಇದೆ.

ಘಟನಾ ಸ್ಥಳಕ್ಕೆ ರಾಜಗೋಪಾಲ ನಗರ ಪೋಲಿಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮಗಳ ಸಾವಿನ ಸುದ್ದಿ ಪೋಷಕರು ಮೃತದೇಹದ ಮುಂದೆ ಗೋಳಾಡಿದ್ದು, ನೋಡುಗರ ಕಣ್ಣಲ್ಲಿ ನೀರು ತರಿಸಿತ್ತು. ತಮ್ಮ ಮಗಳ ಸಾವಿಗೆ ಅಳಿಯ ಪ್ರವೀಣನೇ ಕಾರಣ, ಆತನನ್ನು ನಮಗೆ ಒಪ್ಪಿಸಿ ಎಂದು ಪೊಲೀಸರೊಂದಿಗೆ ಮೃತಳ ಪೋಷಕರು ವಾಗ್ವಾದ ನಡೆಸಿದ್ದಾರೆ.
ಇತ್ತೀಚೆಗಷ್ಟೇ ಮೊಮ್ಮಗನ ಹುಟ್ಟುಹಬ್ಬ ಆಚರಣೆ ;
ಘಟನೆ ಸಂಬಂಧ ಮೃತ ಕಾವ್ಯಳ ಪೋಷಕರಿಂದ ಪತ್ನಿ ಪ್ರವೀಣ್ ಸೇರಿ ನಾಲ್ವರ ವಿರುದ್ಧ ದೂರು ನೀಡಲಾಗಿದೆ. ಅಳಿಯನ ಅಕ್ರಮ ಸಂಬಂಧಕ್ಕೆ ಮಗಳು ಸಾವನ್ನಪ್ಪಿದ್ದಾಳೆ ಎಂದು ಮೃತ ಕಾವ್ಯ ಪೋಷಕರ ಆರೋಪ ಮಾಡಿದ್ದಾರೆ. ಮಗಳಿಗೆ ಕಳೆದ ಎರಡು ವರ್ಷಗಳ ಹಿಂದಷ್ಟೇ ಅದ್ದೂರಿಯಾಗಿ ಮದುವೆ ಮಾಡಿ ಕೊಟ್ಟಿದ್ದೇವು. ಆ ವೇಳೆ ಅರ್ಧ ಕೆಜಿ ಚಿನ್ನಕೊಟ್ಟು, 50 ಲಕ್ಷ ಖರ್ಚು ಮಾಡಿ ಅದ್ದೂರಿಯಾಗಿ ಮಾಡಿಕೊಟ್ಟಿದ್ದೇವು. ಅಲ್ಲದೇ ಇತ್ತಿಚೇಗಷ್ಟೇ ಮೊಮ್ಮಗನ ಹುಟ್ಟುಹಬ್ಬವನ್ನು ನಾವೇ ಆಚರಣೆ ಮಾಡಿದ್ದೇವು.
ಅಳಿಯನ ಅಕ್ರಮ ಸಂಬಂಧ ಆರೋಪ ;
ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದ ಆದರೆ ಎಲ್ಲಿಯೂ ಕೆಲಸಕ್ಕೆ ಹೋಗ್ತಿರಲಿಲ್ಲ. ಅಳಿಯನಿಗೆ ಬೇರೆ ಹುಡುಗಿಯೊಬ್ಬಳ ಜೊತೆ ಅಕ್ರಮ ಸಂಬಂಧ ಇತ್ತು. ಅವನಿಗೆ ಹೆಂಡತಿ, ಮಗನಿಗಿಂತ ಅವಳೇ ಹೆಚ್ಚಾಗಿದ್ದಳು. ಈ ಬಗ್ಗೆ ಪ್ರಶ್ನೆ ಮಾಡಿದರೆ, ಆಕೆ ನನ್ನ ತಂಗಿ ಅಂತ ಹೇಳುತ್ತಿದ್ದ. ಮಗಳು ಸಾವನ್ನಪ್ಪಿದ್ದಾಳೆ ಅಂತ ಕುಟುಂಬಸ್ಥರೇ ಮೃತದೇಹವನ್ನ ಕೆಳಗಿಳಿಸಿದ್ದಾರೆ. ಆದರೆ ದೇಹದ ಮೇಲೆ ಕೆಲವೊಂದು ಗಾಯಾಳುಗಳಾಗಿವೆ. ಇದನ್ನ ಮುಚ್ಚಿಡ್ತಿದ್ದಾರೆ. ನಮಗೆ ಸಂಜೆ 5 ವರೆಗೆ ಕಾಲ್ ಮಾಡಿ ಮಗಳ ಸಾವಿನ ವಿಚಾರ ತಿಳಿಸಿದ್ದರು ಎಂದು ಮೃತಳ ಪೋಷಕರು ಆರೋಪ ಮಾಡಿದ್ದಾರೆ.
ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಶಿಫ್ಟ್ ಮಾಡಿರುವ ಪೊಲೀಸರು, ಮೃತ ಕಾವ್ಯಳ ಪತಿ ಪ್ರವೀಣ್, ಅತ್ತೆ, ಮಾವರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
Bangalore married woman commits suicide, husband suspectedl of illicit affair. The diseased has been identified as Kavya. Parents of kavya allege that their son in law and affair with another lady.
04-03-26 06:47 pm
HK News Staffer
ಅಡುಗೆ ವಿಚಾರದಲ್ಲಿ ಅತ್ತೆಯೊಂದಿಗೆ ಜಗಳ ಕಾದು ಯುವತಿ...
04-03-26 05:06 pm
ಚಿತ್ತೂರು ಬಳಿ ಭೀಕರ ರಸ್ತೆ ಅಪಘಾತ; ಕಂಟೇನರ್ ವಾಹನಕ್...
04-03-26 01:33 pm
ಮಾರ್ಚ್ 10ಕ್ಕೆ ಎಲ್ಲ ಶಾಸಕರು, ಸಚಿವರಿಗೆ ಡಿಕೆಶಿ ಡಿ...
04-03-26 01:27 pm
ಇರಾನ್ಗೆ ತೆರಳಿದ್ದ ಕಾಫಿನಾಡಿನ ಯುವಕ ನಾಪತ್ತೆ ; ಮಗ...
04-03-26 11:51 am
04-03-26 11:13 pm
HK News Desk
ಹರ್ಮುಜ್ ಜಲಸಂಧಿ ನಿರ್ಬಂಧ ಉಲ್ಲಂಘಿಸಿದ 10 ತೈಲ ಹಡಗಿ...
04-03-26 10:09 pm
ಇರಾನ್ ಹಡಗು ಸ್ಫೋಟ ಬೆನ್ನಲ್ಲೇ ಅಮೆರಿಕದ ಯುದ್ಧ ನೌಕೆ...
04-03-26 10:03 pm
ಇರಾನ್ ಸರ್ವೋಚ್ಚ ನಾಯಕರಾಗಿ ಖಮೇನಿ ಪುತ್ರ ಮೊಜ್ತಾಬಾ...
04-03-26 12:58 pm
ಯುದ್ಧಪೀಡಿತ ಮಧ್ಯಪ್ರಾಚ್ಯದಿಂದ ಪಾರಾಗಲು ಪ್ರತಿ ಸೀಟ್...
03-03-26 04:30 pm
04-03-26 09:31 pm
HK News Staffer
ಉಡುಪಿ; ಲವ್ ಮ್ಯಾಟರ್ ರಾಜಿ ವೇಳೆ ಮೀನುಗಾರ ಮುಖಂಡನಿಗ...
04-03-26 10:54 am
ಬೇಸಗೆಯಲ್ಲಿ ಹಾವು ಕಡಿತ ಪ್ರಕರಣ ಹೆಚ್ಚಳ; ಕರಾವಳಿ, ಮ...
03-03-26 09:33 pm
'ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ' ಎಂದು...
03-03-26 08:42 pm
ವಿದ್ಯುತ್ ಗುತ್ತಿಗೆದಾರರಲ್ಲಿ ಪರ್ಸೆಂಟ್ ಲೆಕ್ಕದಲ್ಲಿ...
03-03-26 03:10 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm