C M Siddaramaiah, BJP: ಬಿಜೆಪಿಯಲ್ಲಿ ಏನ್ ಆಗುತ್ತಿದೆ ಎಂಬುದನ್ನ ಸ್ವಲ್ಪ‌ ದಿನ ಕಾಯಿರಿ, ವೇಟ್ ಅಂಡ್ ಸೀ ಎಂದ ಸಿದ್ದರಾಮಯ್ಯ 

18-11-23 01:48 pm       HK News Desk   ಕರ್ನಾಟಕ

ಬಿಜೆಪಿಯಲ್ಲಿ ಏನ್ ಆಗುತ್ತಿದೆ ಎಂಬುದನ್ನ ಸ್ವಲ್ಪ‌ ದಿನ ಕಾಯಿರಿ. ವೇಟ್ ಅಂಡ್ ಸೀ. ಕಾಯಿರಿ, ಕಾಯಿರಿ, ಕಾಯಿರಿ ಎಂದು ಮೂರು ಬಾರಿ ಹೇಳಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. 

ಮೈಸೂರು, ನ.18: ಬಿಜೆಪಿಯಲ್ಲಿ ಏನ್ ಆಗುತ್ತಿದೆ ಎಂಬುದನ್ನ ಸ್ವಲ್ಪ‌ ದಿನ ಕಾಯಿರಿ. ವೇಟ್ ಅಂಡ್ ಸೀ. ಕಾಯಿರಿ, ಕಾಯಿರಿ, ಕಾಯಿರಿ ಎಂದು ಮೂರು ಬಾರಿ ಹೇಳಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. 

ಅಸಮಾಧಾನ ಹೇಗೆ ಸ್ಫೋಟವಾಗುತ್ತೆ ಎಂಬುದು ನಿಮಗೆ ಗೊತ್ತಾಗುತ್ತದೆ. ನಿನ್ನೆಯ ಸಭೆಯಿಂದ‌ ಯತ್ನಾಳ್, ಬೆಲ್ಲದ್, ಜಾರಕಿಹೊಳಿ ಯಾಕೇ ಎದ್ದು ಹೋದರು? ಯಡಿಯೂರಪ್ಪ ಮಗನನ್ನ ಅಧ್ಯಕ್ಷ ಮಾಡಿರುವುದು ಅಶೋಕನನ್ನ ವಿಪಕ್ಷ ನಾಯಕ ಮಾಡಿರುವುದು ಅವರಿಗೆ ಬೇಸರ ತಂದಿದೆ. ಸ್ವಲ್ಪ ದಿನ ನೀವೇ ಕಾದು ನೋಡಿ. ಬಿಜೆಪಿಯಲ್ಲಿ ಏನೇನ್ ಆಗುತ್ತದೆ ಎಂಬುದು ನಿಮಗೆ ಗೊತ್ತಾಗುತ್ತದೆ ಎಂದರು. 

ʻನ ದೈನ್ಯಂ, ನ ಪಲಾಯನಂʼ: ಕಟ್ಟೆಯೊಡೆದ ಯತ್ನಾಳ್ ಅಕ್ರೋಶ; ಟ್ವೀಟ್ ಮೂಲಕ ಟಾಂಗ್- Kannada  Prabha

Ramesh jarakiholi resighns for ministry | Ramesh Jarakiholi : ರಾಸಲೀಲೆ  ಪ್ರಕರಣದಲ್ಲಿ ಮಹತ್ವದ ತಿರುವು, ರಮೇಶ್ ಜಾರಕಿಹೊಳಿ ರಾಜೀನಾಮೆ Karnataka News in  Kannada

Vijayendra: BS Yediyurappa's son Vijayendra formally takes charge as  Karnataka BJP president | Bengaluru News - Times of India

ಈಗ ಚುನಾವಣೆ ನಡೆದರೂ ಬಿಜೆಪಿ ಗೆಲ್ಲುತ್ತದೆ ಎಂಬ ಯಡಿಯೂರಪ್ಪ ಹೇಳಿಕೆಗೆ ಸಿಎಂ ಗರಂ ಆಗಿದ್ದು ಈಗ ಯಾಕ್ರಿ ಚುನಾವಣೆ ನಡೆಯುತ್ತದೆ. ಹಿಂದೆಯೂ ಇವರು ಹೇಳುತ್ತಿದ್ದರು ನಾವೇ ಅಧಿಕಾರಕ್ಕೆ ಬರುತ್ತೇವೆ ಅಂಥ. ಅಧಿಕಾರಕ್ಕೆ ಬಂದಿದ್ದು ಯಾರ್ರಿ? ಸುಮ್ಮನ್ನೆ ಏನೇ ಹೇಳುತ್ತಾರೆ ಅದನ್ನೆಲ್ಲಾ ಬಿಟ್ಟು ಬಿಡಿ ಎಂದರು. 

Former K'taka CM H D Kumaraswamy pays Rs 68,526 fine for 'stealing power'

ವಿದ್ಯುತ್ ಕದ್ದ ಕುಮಾರಸ್ವಾಮಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಏನಿದೆ. ಕುಮಾರಸ್ವಾಮಿ ವಿದ್ಯುತ್ ಕದಿದ್ದು ಸತ್ಯ ತಾನೇ? ದಂಡ ಕಟ್ಟಿದ್ದು ಸತ್ಯ ತಾನೇ. ಕದಿದ್ದನ್ನು ಕುಮಾರಸ್ವಾಮಿ ಒಪ್ಪಿಕೊಂಡಿದ್ದು ಸತ್ಯ ತಾನೇ. ಇಂತವರಿಂದ ನಾವು ಏನು ಕೇಳಿಸಿಕೊಳ್ಳಬೇಕು ಹೇಳಿ. ಪದೇ ಪದೇ ಕುಮಾರಸ್ವಾಮಿ ವಿಚಾರದಲ್ಲಿ ನನಗ ಪ್ರತಿಕ್ರಿಯೆ ಕೊಡಲು ಇಷ್ಟ ಇಲ್ಲ. ಕುಮಾರಸ್ವಾಮಿ ಹತಶಾರಾಗಿದ್ದಾರೆ. ಹತಾಶರಾಗಿ ಏನೇನೋ ಮಾತನಾಡುತ್ತಿದ್ದಾರೆ ಅಷ್ಟೇ ಎಂದು ಮಾತಿನಲ್ಲೇ ತಿವಿದರು.

Yeddyurappa has made his son the president and Ashoka's opposition leader has upset him. Wait for a few days. "You will know what will happen in BJP," C M Siddaramaiah said.