ಬ್ರೇಕಿಂಗ್ ನ್ಯೂಸ್
05-03-26 07:38 pm HK News Staffer ಕರಾವಳಿ
ಮಂಗಳೂರು, ಮಾರ್ಚ್ 5: ನಗರದ ಬದ್ರಿಯಾ ರಸ್ತೆಯ ಲಾಡ್ಜ್ ಒಂದರಲ್ಲಿ ಕುಳಿತು ನಿಷೇಧಿತ ಮಾದಕ ದ್ರವ್ಯ MDMA ಮತ್ತು ಹೈಡ್ರೋ ವೀಡ್ ಗಾಂಜಾವನ್ನು ಮಂಗಳೂರು ನಗರದ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗ್ರೀನ್ ಪಾರ್ಕ್ ಮೈದಾನ ಬಂದರು ಬಳಿಯಲ್ಲಿ ನಿಷೇಧಿತ ಮಾದಕ ವಸ್ತು ಹೈಡ್ರೋ ವೀಡ್ ಗಾಂಜಾ ಮತ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯ ಕೋಟೇಶ್ವರ, ಹಾಲಿ ಪಾಂಡೇಶ್ವರ ನಿವಾಸಿಗಳಾದ ಮೊಹಮ್ಮದ್ ಸಯ್ಯದ್ ಆಫ್ರೀದಿ (26),
ಅಹಮ್ಮದ್ ಅಲಿ ಅರ್ಷಾನ್ (22), ಬಲ್ಮಠ ನಿವಾಸಿ ಮಕ್ಸೂದ್ ಸಾಗ್ (23), ಕೊಟ್ಟಾಯಂ ಮೂಲದ ಫೆಲಿಕ್ಸ್ ಪಿ. ಜೋಸೆಫ್ (20), ಕಂಕನಾಡಿ ನಿವಾಸಿ ಎಡಲ್ ರೋಚ್ (33), ಮಲ್ಲಿಕಟ್ಟೆ ನಿವಾಸಿ ಆರೋನ್ ವಿಶಾಲ್ ಲಾಸ್ರಾದೋ (18) ಬಂಧಿತರು. ಒಂದು ಪ್ರಕರಣದಲ್ಲಿ ಆರೋಪಿಗಳಿಂದ MDMA 53.87 ಗ್ರಾಂ, ಹೈಡ್ರೋವಿಡ್ ಗಾಂಜಾ - 103. 20 ಗ್ರಾಂ ಮತ್ತು MG Hector ವಾಹನ ಹಾಗೂ ಇನ್ನೊಂದು ಪ್ರಕರಣದಲ್ಲಿ ಹೈಡ್ರೋವಿಡ್ ಗಾಂಜಾ - 60 ಗ್ರಾಂ, ಗಾಂಜಾ- 1 ಕೆಜಿ155 ಗ್ರಾಂ ಮತ್ತು Maruti Swift ಕಾರು ವಶಕ್ಕೆ ಪಡೆಯಲಾಗಿದೆ.
ಮುಂಬೈ ನಿವಾಸಿಯಾದ ಸಂದೀಪ್ ಶೆಟ್ಟಿ ದುಬೈನಲ್ಲಿ ಹೋಟೆಲ್ ಒಂದರಲ್ಲಿ ಮ್ಯಾನೇಜರ್ ಆಗಿದ್ದು, ನಿಷೇಧಿತ ಮಾದಕ ವಸ್ತುವಾದ ಹೈಡ್ರೋ ವೀಡ್ ಗಾಂಜಾವನ್ನು ಬೆಂಗಳೂರಿಗೆ ವಿಮಾನದ ಮುಖಾಂತರ ಸಾಗಿಸುತ್ತಿದ್ದು, ಬೆಂಗಳೂರು ವಿಮಾನ ನಿಲ್ದಾಣದಿಂದ ಬೇರೆಡೆ ಸಾಗಿಸುವ ಕೆಲಸವನ್ನು ಎಡಲ್ ರೋಚ್ ಮಾಡುತ್ತಿದ್ದನು. ಎಡಲ್ ರೋಚ್ ಮತ್ತು ಆರೋನ್ ವಿಶಾಲ್ ಲಾಸ್ರಾದೋ ಅವರು ಮಕ್ಸೂದ್ ಸಾಗ್ ಎಂಬಾತನ ಮೂಲಕ ಮೊಹಮ್ಮದ್ ಸಯ್ಯದ್ ಆಫ್ರೀದಿ ಮತ್ತು ಅಹಮ್ಮದ್ ಅಲಿ ಅರ್ಷಾನ್ ಎಂಬವರಿಗೆ ಬೆಂಗಳೂರಿನಲ್ಲಿ ಮಾದಕ ವಸ್ತುವನ್ನು ಪೂರೈಸಿರುತ್ತಾರೆ.
ಮೊಹಮ್ಮದ್ ಸಯ್ಯದ್ ಆಫ್ರಿದಿ ಮತ್ತು ಅಹಮ್ಮದ್ ಅಲಿ ಅರ್ಷಾನ್ ಬೆಂಗಳೂರಿನಿಂದ ಗಾಂಜಾ, ಹೈಡ್ರೋವಿಡ್ ಮತ್ತು ಎಂ.ಡಿ.ಎಂ.ಎ ಅನ್ನು ತಮ್ಮ ಎಂ.ಜಿ ಹೆಕ್ಟರ್ ವಾಹನದಲ್ಲಿ ತೆಗೆದುಕೊಂಡು ಬಂದಿದ್ದರು. ಇವರು ಬಂದರಿನ ಕ್ಲಾಸಿಕ್ ಕಂಫರ್ಟ್ ಲಾಡ್ಜ್ ನಲ್ಲಿ ಇರುವಾಗ ಬಂಧನ ಮಾಡಲಾಗಿದೆ.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am