ಬ್ರೇಕಿಂಗ್ ನ್ಯೂಸ್
05-03-26 08:51 pm HK News Staffer ದೇಶ - ವಿದೇಶ
ನವದೆಹಲಿ, ಮಾರ್ಚ್ 5: ಅಮೆರಿಕ- ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್ ನಲ್ಲಿ ಈವರೆಗೆ 1230 ಜನರು ಸಾವಿಗೀಡಾಗಿದ್ದಾರೆ ಎಂದು ಇರಾನ್ ಸರ್ಕಾರದ ಏಜನ್ಸಿಗಳು ಅಧಿಕೃತವಾಗಿ ಮಾಹಿತಿ ನೀಡಿದೆ. ಸಂಘರ್ಷ ಆರಂಭಗೊಂಡು ಆರನೇ ದಿನವಾದ ಗುರುವಾರವೂ ಇರಾನ್ ಮತ್ತು ಇಸ್ರೇಲ್ ನಡುವೆ ಮಿಸೈಲ್ ದಾಳಿಯಾಗಿದೆ. ಇಸ್ರೇಲ್ ದಾಳಿಯಿಂದಾಗಿ ಲೆಬನಾನಲ್ಲಿ 70ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಇರಾನ್ ಕಡೆಯಿಂದ ಯುಎಇ, ಕತಾರ್, ಅಜರ್ ಬೈಜಾನ್ ಮೇಲೆ ಡ್ರೋಣ್ ದಾಳಿಯಾಗಿದೆ. ಆದರೆ ಬಹುತೇಕ ಡ್ರೋಣ್ ದಾಳಿಗಳನ್ನು ಆ ದೇಶಗಳು ತಡೆದು ನಿಷ್ಕ್ರಿಯಗೊಳಿಸಿವೆ. ಈ ನಡುವೆ, ಹೆಜ್ಬುಲ್ಲಾ ಬಂಡುಕೋರರು ಹೆಚ್ಚಿರುವ ಇರಾನ್ ದೇಶದ ಬೀರತ್ ನಗರದ ಮೇಲೆ ಬಾಂಬ್ ದಾಳಿ ನಡೆಸುತ್ತಿದ್ದು, ಅಲ್ಲಿನ ನಿವಾಸಿಗಳು ಸ್ಥಳಾಂತರ ಆಗುವಂತೆ ಇಸ್ರೇಲ್ ಬೆದರಿಕೆ ಸಂದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಅಲ್ಲಿನ ಜನರು ಸಿಕ್ಕ ಸಿಕ್ಕ ವಾಹನಗಳಲ್ಲಿ ಎದ್ದು ಓಡುತ್ತಿರುವುದು ಕಂಡುಬಂದಿದೆ. ಇಸ್ರೇಲ್ ಅರಬ್ಬಿ ಭಾಷೆಯಲ್ಲೇ ಬೀರತ್ ಮೇಲೆ ದಾಳಿ ಮಾಡುತ್ತಿರುವುದಾಗಿ ಸಂದೇಶ ನೀಡಿತ್ತು. ಇದರಿಂದಾಗಿ ಉಪ ನಗರ ವ್ಯಾಪ್ತಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇದೇ ವೇಳೆ, ಇಸ್ರೇಲಿನ ಜೆರುಸಲೇಮ್ ನಲ್ಲಿ ಎರಡು ಕಡೆ ಬ್ಲಾಸ್ಟ್ ಆಗಿದ್ದು, ಸದ್ದು ಕೇಳಿಬಂದಿರುವುದಾಗಿ ಎಎಫ್ ಪಿ ವರದಿ ಮಾಡಿದೆ. ಮಧ್ಯ ಇಸ್ರೇಲಿನಲ್ಲಿ ಅಲರ್ಟ್ ಸಂದೇಶ ಬಂದ ಕೆಲವೇ ಹೊತ್ತಿನಲ್ಲಿ ಬ್ಲಾಸ್ಟ್ ಆಗಿತ್ತು ಎಂದು ಇಸ್ರೇಲ್ ಮಾಧ್ಯಮಗಳು ಹೇಳಿವೆ. ಅಮೆರಿಕ – ಇಸ್ರೇಲ್ ದೇಶದ ಮಿಲಿಟರಿ ಬೇಸ್ ಮೇಲೆ ಇರಾನಿ ರೆವೊಲ್ಯುಶನರಿ ಗಾರ್ಡ್ ಗಳು ಹೈಪರ್ ಸಾನಿಕ್ ಮಿಸೈಲ್ ಮತ್ತು ಮಾನವ ರಹಿತ ವಾಹಕಗಳ ಮೂಲಕ ದಾಳಿ ಮಾಡಿದ್ದಾಗಿ ಹೇಳಿಕೊಂಡಿವೆ. ಐಆರ್ ಜಿಸಿ ಹೇಳಿಕೆ ಪ್ರಕಾರ, ಅಮೆರಿಕ ನಿರ್ಮಿತ THAAD ಮಿಸೈಲ್ ಸಿಸ್ಟಮ್ ಮೇಲೆ ದಾಳಿ ನಡೆಸಿದೆ. ಅಲ್ಲದೆ, ಇಸ್ರೇಲಿನ ರಕ್ಷಣಾ ಸಚಿವಾಲಯದ ಕಟ್ಟಡ ಮತ್ತು ಬೆನ್ ಗುರಿಯನ್ ಏರ್ಪೋರ್ಟ್ ದಾಳಿ ನಡೆಸಿದ್ದಾಗಿ ಹೇಳಿದೆ. ಏಳಕ್ಕೂ ಹೆಚ್ಚು ಅತ್ಯಾಧುನಿಕ ರಾಡಾರ್ ಸಿಸ್ಟಮ್ ಅನ್ನೂ ಸ್ಫೋಟಿಸಿದ್ದಾಗಿ ಇರಾನ್ ಹೇಳಿದೆ.
ಇದೇ ವೇಳೆ, ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಇಸ್ರೇಲ್ ಸರಣಿ ದಾಳಿ ನಡೆಸಿದ್ದು, ಬಾಂಬ್ ಸುರಿಮಳೆ ಮಾಡಿದೆ. ಟೆಹ್ರಾನ್ ಮತ್ತು ನಗರದ ಪಶ್ಚಿಮ ಭಾಗದಲ್ಲಿ ಸರಣಿಯಾಗಿ ಬಾಂಬ್ ಬ್ಲಾಸ್ಟ್ ಆಗಿವೆ.
ಅಮೆರಿಕನ್ನರ ರಕ್ತ ಹರಿಸುತ್ತೇವೆ:
ಇಸ್ರೇಲ್- ಅಮೆರಿಕ ಜಂಟಿ ದಾಳಿಗೆದುರಾಗಿ ಪ್ರತೀಕಾರ ತೀರಿಸುತ್ತೇವೆ. ಜಿಯೋನಿಸ್ಟ್ ರಕ್ತವನ್ನು ಹರಿಸುತ್ತೇವೆ, ಅದೇ ರೀತಿ ಡೊನಾಲ್ಡ್ ಟ್ರಂಪ್ ರಕ್ತವನ್ನೂ ಬಸಿಯುತ್ತೇವೆ ಎಂದು ಇರಾನ್ ದೇಶದ ಧರ್ಮಗುರುಗಳಲ್ಲಿ ಒಬ್ಬರಾದ ಅಯತೊಲ್ಲಾ ಅಬ್ದೊಲ್ಲಾ ಜವಾದಿ ಅಮೋಲಿ ಎಚ್ಚರಿಕೆ ನೀಡಿದ್ದಾರೆ. ನಾವು ಈಗ ದೊಡ್ಡ ಪರೀಕ್ಷೆ ಎದುರಿಸಿದ್ದೇವೆ. ಇದೇ ರೀತಿಯ ಒಗ್ಗಟ್ಟನ್ನು ಉಳಿಸಿಕೊಂಡು ಮುಂದೆ ರಕ್ತ ಹರಿಸುವುದನ್ನು ಮಾಡಬೇಕಿದೆ ಎಂದು ಹೇಳಿದ್ದಾರೆ. ಇಮಾಮೆರಲ್ಲ ಹೇಳುತ್ತಿರುವುದು ಒಂದೇ, ಹಗೆ ತೀರಿಸಲು ಅಮೆರಿಕನ್ನರ ವಿರುದ್ಧ ಹೋರಾಡಲೇಬೇಕು. ಅವರ ರಕ್ತ ನಮ್ಮ ತೋಳಲ್ಲಿದೆ ಎಂದು ಧರ್ಮಗುರುಗಳ ಪರವಾಗಿ ಅಯತೊಲ್ಲಾ ಹೇಳಿಕೆ ನೀಡಿದ್ದಾರೆ.
14-10-26 02:02 pm
HK News Staffer
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
ಸ್ಟಿಂಗ್ ವಿವಾದಕ್ಕೆ ಹೊಸ ತಿರುವು ; ಸಿದ್ದರಾಮಯ್ಯ ಗಟ...
13-10-26 03:38 pm
14-10-26 12:54 pm
HK News Staffer
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
ರಷ್ಯನ್ ತೈಲಕ್ಕಾಗಿ ಭಾರತಕ್ಕೆ ಬರೆ ಹಾಕಿದ್ದ ಅಮೆರಿಕ...
11-10-26 03:20 pm
14-10-26 02:00 pm
HK News Staffer
ಪಾಂಡೇಶ್ವರ ಟ್ರಾಫಿಕ್ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ...
13-10-26 11:10 pm
Mangalore News: ಬ್ರಿಟಿಷ್ ಕಾಲದ 'ಸೌತ್ ಕೆನರಾ' ಬದ...
13-10-26 10:28 pm
Agnes Colllege Protest, Vedavyas Kamath: ಮಹಿಳ...
13-10-26 08:41 pm
Agnes College Protest, MLA Bharath Shetty: ವಿ...
13-10-26 07:50 pm
14-10-26 12:23 pm
HK News Staffer
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm
ಮುಂಬೈ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿ ಪುತ್ತೂರಿನ...
12-10-26 10:36 pm
Manglore Crime: ಅನೈತಿಕ ಸಂಬಂಧ ಶಂಕೆ ; ಪತ್ನಿಯನ್ನ...
12-10-26 04:12 pm
ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆ ಮೇಲೆ ನಿರಂತರ ಅತ್ಯ...
12-10-26 03:56 pm