ಬ್ರೇಕಿಂಗ್ ನ್ಯೂಸ್
16-11-23 05:04 pm HK News Desk ಕರ್ನಾಟಕ
ಚಿತ್ರದುರ್ಗ, ನ 16: ಕಳೆದ 14 ತಿಂಗಳಿಂದ ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿದ್ದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಇಂದು ಜೈಲಿನಿಂದ ಬಿಡುಗಡೆಗೊಂಡರು.
ಮೊದಲನೇ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಸಂಬಂಧ ವಿಚಾರಣಾ ನ್ಯಾಯಾಲಯವಾದ ಚಿತ್ರದುರ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇಬ್ಬರ ಶ್ಯೂರಿಟಿ ಮತ್ತಿತರೆ ಅಂಶಗಳನ್ನು ಪರಿಶೀಲಿಸಿ ಬುಧವಾರ ಮಧ್ಯಾಹ್ನ ಬಿಡುಗಡೆಗೆ ಆದೇಶ ಮಾಡಿತ್ತು.
ಆದರೆ, ಸಂಜೆ ನ್ಯಾಯಾಲಯದ ಆದೇಶ ಪ್ರತಿ ತಲುಪುವುದು ವಿಳಂಭವಾಗಿದ್ದ ಕಾರಣಕ್ಕೆ ಇಂದು ಬೆಳಗ್ಗೆ ಜಿಲ್ಲಾ ಕಾರಾಗೃಹದಲ್ಲಿ ಬಿಡುಗಡೆ ಪ್ರಕ್ರಿಯೆ ನಡೆಸಿ ಮಧ್ಯಾಹ್ನ 12.40ಕ್ಕೆ ಬಿಡುಗಡೆಯಾದರು.
ಜೈಲಿನಿಂದ ಹೊರಗೆ ಬಂದ ಮುರುಘಾ ಶರಣರನ್ನು ಭಕ್ತರು, ವಕೀಲರು ಸ್ವಾಗತಿಸಿದರು. ಇಲ್ಲಿಂದ ಶರಣರು ದಾವಣಗೆರೆ ವಿರಕ್ತಮಠದ ಕಡೆಗೆ ಪ್ರಯಾಣ ಬೆಳೆಸಿದರು.
ಒಂದನೇ ಪ್ರಕರಣರದಲ್ಲಿ ನವೆಂಬರ್ 8ರಂದು ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಹೀಗಾಗಿ ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಇಂದು ಮುರುಘಾಶ್ರೀಗಳನ್ನು ಬಿಡುಗಡೆ ಮಾಡಲಾಗಿದೆ.
ಷರತ್ತು ವಿಧಿಸಿದ ಹೈಕೋರ್ಟ್ ;
ಜೈಲಿನಿಂದ ಬಿಡುಗಡೆಗೊಂಡಿರುವ ಮುರುಘಾ ಶರಣರಿಗೆ ಕೋರ್ಟ್ ಕೆಲವು ಷರತ್ತು ವಿಧಿಸಿದ್ದು ಅದರಂತೆ ವಿಚಾರಣೆ ಮುಗಿಯುವವರೆಗೂ ಶ್ರೀಗಳು ಚಿತ್ರದುರ್ಗಕ್ಕೆ ಹೋಗುವಂತಿಲ್ಲ. ಇಬ್ಬರ ಶ್ಯೂರಿಟಿಯನ್ನು ಒದಗಿಸಬೇಕು. ವೀಡಿಯೊ ಕಾನ್ಫರೆನ್ಸ್ ಮೂಲಕ ಕೋರ್ಟ್ ವಿಚಾರಣೆಗೆ ಹಾಜರಾಗಬೇಕು. ಎರಡು ಲಕ್ಷ ರೂ. ಬಾಂಡ್ ಶ್ಯೂರಿಟಿ ನೀಡಬೇಕು. ಪಾಸ್ಪೋರ್ಟ್ ಅನ್ನು ಕೋರ್ಟ್ ವಶಕ್ಕೆ ನೀಡಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು. ಇಂತಹ ಕೃತ್ಯ ಪುನರಾವರ್ತನೆಯಾಗಬಾರದು ಎಂದು ಷರತ್ತು ವಿಧಿಸಿದೆ.
ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿದ್ದ ಮುರುಘಾ ಮಠದ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರು ಬಿಡುಗಡೆ ಹೊಂದಿದ ನಂತರ ದಾವಣಗೆರೆಯ ವಿರಕ್ತ ಮಠಕ್ಕೆ ಆಗಮಿಸಿದರು
ದೊಡ್ಡಪೇಟೆಯಲ್ಲಿರುವ ವಿರಕ್ತ ಮಠಕ್ಕೆ ತೆರಳುವ ಮುನ್ನ ಶ್ರೀ ಶಿವಯೋಗಿ ಮಂದಿರ ಆವರಣದಲ್ಲಿರುವ ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಮತ್ತು ಅಥಣಿ ಮುರುಘರಾಜೇಂದ್ರ ಶಿವಯೋಗಿಗಳ ಗದ್ದುಗೆಗೆ ತೆರಳಿ ಪೂಜೆ ಸಲ್ಲಿಸಿದರು.
ಮುರುಘಾ ಶರಣರ ಬರುವಿಕೆಗೆ ಕಾಯುತ್ತಿದ್ದ ಭಕ್ತರು, ಟ್ರಸ್ಟ್ ಪದಾಧಿಕಾರಿಗಳು ಶರಣರು ಆಗಮಿಸುತ್ತಿ ದ್ದಂತೆ ಹೂಮಾಲೆ ಹಾಕಿ ಸ್ವಾಗತಿಸಿದರು. ಮುರುಘೇಶನಿಗೆ, ಶಿವಮೂರ್ತಿ ಮುರುಘಾ ಶರಣರಿಗೆ ಜಯವಾಗಲಿ ಎಂದು ಜೈಕಾರ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಮೂರ್ತಿ ಮುರುಘಾ ಶರಣರು, ತಾವು ಯಾವುದರ ಬಗ್ಗೆಯೂ ಪ್ರತಿಕ್ರಿಯೆ ನೀಡುವುದಿಲ್ಲ. ಮೌನವೇ ನಮಗೆ ಒಳಿತು ಎನಿಸುತ್ತದೆ. ನಮ್ಮ ವಕೀಲರು ಎಲ್ಲವನ್ನು ಮಾಧ್ಯಮದವರಿಗೆ ಹೇಳಿದ್ದಾರೆ. ನಿಮ್ಮ ಸಹಕಾರ ಇರಲಿ. ಮುಂದೆ ಒಳ್ಳೆಯ ಕೆಲಸ ಮಾಡೋಣ ಎಂದರು. ದಾವಣಗೆರೆ ಧಾರ್ಮಿಕ, ಸಾಂಸ್ಕೃತಿಕ ರಾಜಧಾನಿ. ಶ್ರೀ ಜಯದೇವ ಜಗದ್ಗುರು ಗಳವರ ಕರ್ಮಭೂಮಿ ಎಂದು ತಿಳಿಸಿದರು.
ಚಿತ್ರದುರ್ಗ ಕಾರಾಗೃಹದಿಂದ ಬಿಡುಗಡೆ ಹೊಂದಿ ದಾವಣಗೆರೆಗೆ ಆಗಮಿಸುತ್ತಿದ್ದ ಮಾರ್ಗ ಮಧ್ಯೆದಲ್ಲಿಯೇ ಶಿವಮೂರ್ತಿ ಶರಣರು ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗಿಯಾದರು. ಕೆಲ ಸಮಯ ನಡೆದ ವಿಚಾರಣೆ ನಂತರ ಶಿವಯೋಗಿ ಮಂದಿರಕ್ಕೆ ಆಗಮಿಸಿದರು. ಶ್ರೀ ಶಿವಮೂರ್ತಿ ಮುರುಘಾ ಶರಣರು ಚಿತ್ರದುರ್ಗ ಜಿಲ್ಲೆಗೆ ಪ್ರವೇಶಿಸಲು ನ್ಯಾಯಾಲಯ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲೇ ವಾಸ್ತವ್ಯ ಮಾಡಲಿದ್ದಾರೆ. ದೊಡ್ಡಪೇಟೆಯಲ್ಲಿನ ವಿರಕ್ತ ಮಠದಲ್ಲಿ ಇರುವ ಮುರುಘಾ ಶರಣರು ಶಿವಯೋಗಿ ಮಂದಿರದಲ್ಲಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವರು ಎಂದು ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.
Lingayat seer Shivamurthy Murugha Sharanaru walked out of the jail on Thursday, days after being granted conditional bail by the Karnataka High Court, in connection with a case of sexual assault of two girls living in the hostel run by Muruga mutt. Shivamurthy Murugha Sharanaru is the chief pontiff of a prominent Lingayat mutt in Karnataka's Chitradurga. He was arrested in September 2022 following protests after two girls accused him of rape.
22-04-25 02:37 pm
HK News Desk
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
ನ್ಯಾ.ಕೃಷ್ಣ ದೀಕ್ಷಿತ್, ನ್ಯಾ.ಹೇಮಂತ್ ಚಂದನಗೌಡರ್ ಸೇ...
21-04-25 07:10 pm
Jayaprakash Hegde; ಹಿಂದೂಗಳಂತೆ ಮುಸ್ಲಿಮರಲ್ಲು 93...
19-04-25 03:04 pm
21-04-25 07:46 pm
HK News Desk
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm